Advertisement

ಅನಗತ್ಯ ವಾಹನ ಸಂಚಾರಕ್ಕೆ ನಿಷೇಧ: ಡಂಬಳ

07:01 PM Jul 31, 2022 | Team Udayavani |

ಮುದಗಲ್ಲ: ಕಳೆದೆರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಐತಿಹಾಸಿಕ ಮೊಹರಂ ಆಚರಣೆ ಸ್ಥಗಿತಗೊಂಡಿತ್ತು. ಆದರೆ, ಈ ಬಾರಿ ಹೆಚ್ಚಿನ ಜನಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಕಿಲ್ಲಾ ಸೇರಿದಂತೆ ಮೊಹರಂ ನಡೆಯುವ ಪ್ರದೇಶಗಳಲ್ಲಿ ಅನಗತ್ಯ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗುವುದು ಎಂದು ಪಿಎಸ್‌ಐ ಪ್ರಕಾಶರಡ್ಡಿ ಡಂಬಳ ತಿಳಿಸಿದರು.

Advertisement

ಹಜರತ್‌ ಹುಸೇನಿ ಆಲಂ ದರ್ಗಾದಲ್ಲಿ ಶನಿವಾರ ನಡೆದ ದರ್ಗಾದ ಆಡಳಿತ ಮಂಡಳಿ, ಪುರಸಭೆ ಸದಸ್ಯರು, ಧರ್ಮಗುರುಗಳು, ಸಾರ್ವಜನಿಕ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಅಂಗವಾಗಿ ಪೊಲೀಸರು ತೆಗೆದುಕೊಳ್ಳುವ ಕೆಲವೊಂದು ಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕು. ನೀವು ನಮಗೆ ಸಲಹೆ ನೀಡಿದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಕೊಳ್ಳುತ್ತೇವೆ. ಆದರೆ, ಕಿಲ್ಲಾದಲ್ಲಿ ಜರುಗುವ 9ನೇ ದಿನದ ಕತ್ತಲ್‌ ರಾತ್ರಿಗೆ ಕಿಲ್ಲಾದ ಒಳಗಡೆ, ಹೊರಗಡೆ ಸಂಚರಿಸಲು ಕಟ್ಟುನಿಟ್ಟಿನ ಕರಾರುಗಳನ್ನು ವಿಧಿಸಲಾಗುವುದು. ಅನಗತ್ಯವಾಗಿ ವಾಹನಗಳನ್ನು ಚಲಾಯಿಸುವುದು ಕಂಡು ಬಂದರೆ ವಾಹನ ಚಾಲನಾ ಪರವಾನಗಿ, ವಾಹನದ ಕಾಗದ ಪತ್ರಗಳನ್ನು ಪರಿಶೀಲಿಸುವದಲ್ಲದೇ ಕಿಲ್ಲಾದಲ್ಲಿರುವವರು ಆಧಾರ ಕಾರ್ಡ್‌ ತೋರಿಸಬೇಕು. ಆಸ್ಪತ್ರೆ, ಔಷಧ ಖರೀದಿ ಸೇರಿದಂತೆ ಅಗತ್ಯ ಕಾರಣಗಳಿದ್ದರೆ ಮಾತ್ರ ವಾಹನಗಳನ್ನು ಬಿಡಲಾಗುವುದು. ಅನಗತ್ಯ ಎಂದು ಕಂಡು ಬಂದಲ್ಲಿ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದರ್ಗಾ ಕಮೀಟಿ ಅಧ್ಯಕ್ಷ ಅಮೀರಬೇಗ್‌ ಉಸ್ತಾದ, ಕಾರ್ಯದರ್ಶಿ ಮಹ್ಮದ ಸಾಕಲಿ, ಮೌಲಾನಾ ಜಮೀರ ಅಹ್ಮದಖಾಜಿ, ಸೈ. ನ್ಯಾಮತ್‌ ಉಲ್ಲಾ ಖಾದ್ರಿ, ಮುಜಾಕೀರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ, ಸದಸ್ಯ ಮಹಿಬೂಬಸಾಬ ಕಡ್ಡಿಪುಡಿ, ಅಜಮೀರ ಬೆಳ್ಳಿಕಟ್‌, ಮಹ್ಮದಗಯಾ ಸುದ್ದೀನ್‌ ಸೇರಿದಂತೆ ಮುಂತಾದವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next