ನವದೆಹಲಿ: ಜಾಕೀರ್ ನಾಯ್ಕ್ ಸ್ಥಾಪಿಸಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್(ಐಆರ್‌ಎಫ್) ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಿದೆ.
ಮುಂಬೈ ಮೂಲದ ಜಾಕಿರ್ 2016ರಲ್ಲಿ ಬಾಂಗ್ಲಾದ ಢಾಕಾದಲ್ಲಿ ಬಾಂಬ್ ಸ್ಫೋಟಗೊಂಡ ನಂತರ ಮಲೇಷ್ಯಾಕ್ಕೆ ಪರಾರಿಯಾಗಿದ್ದ.
ಐಆರ್‌ಎಫ್ ಮೂಲಕ ಉಗ್ರ ಕೃತ್ಯ ನಡೆಸಲು ಮುಸ್ಲಿಂ ಯುವಕರನ್ನು ಪ್ರೇರೇಪಿಸುತ್ತಿದ್ದ ಆರೋಪ ಜಾಕೀರ್ ಮೇಲಿ ದೆ. ಪೀಸ್ ಟಿವಿ ಎನ್ನುವ ವಾಹಿನಿ ಹೊಂದಿದ್ದ ಆತ ಸಾಮಾಜಿಕ ಜಾಲತಾಣಗಳ ಮೂಲಕವೂ ಶಾಂತಿ ಕದಡುವ ಕೆಲಸಗಳನ್ನು ಮಾಡುತ್ತಿದ್ದ.
ಇದನ್ನೂ ಓದಿ:ಜ.30 ರೊಳಗೆ ದೇವಸ್ಥಾನಗಳ ಆಡಿಟ್ ರಿಪೋರ್ಟ್ ಸಲ್ಲಿಸಿ : ಸಚಿವೆ ಶಶಿಕಲಾ ಜೊಲ್ಲೆ ತಾಕೀತು
ಢಾಕಾದಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣವಾಗಿದ್ದ ಬಾಂಗ್ಲಾ ಮೂಲದ ಉಗ್ರನೊಬ್ಬ ತಾನು ಜಾಕೀರ್‌ನಿಂದ ಪ್ರೇರೇಪಿತನಾಗಿದ್ದಾಗಿಯೂ ಹೇಳಿದ್ದ.
ಆ ಹಿನ್ನೆಲೆಯಲ್ಲಿ 2016ರ ನವೆಂಬರ್‌ನಿಂದ ಐಆರ್‌ಎಫ್ಗೆ ನಿರ್ಬಂಧ ಹೇರಲಾಗಿದೆ.