ರಾಮನಗರ: ಬೆಂಗಳೂರು ನಗರ, ಗ್ರಾಮಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡಂತೆ ರಚನೆಯಾಗಿರುವ ಬೆಂಗಳೂರು ಸಹಕಾರಿ ಹಾಲು ಒಕ್ಕೂಟಗಳ ಮಂಡಳಿ (ಬಮೂಲ್)ಯ ಆಡಳಿತ ಮಂಡಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಜಿಲ್ಲೆಯಿಂದ ನಿರೀಕ್ಷೆಯಂತೆ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಜಿಲ್ಲೆಯಲ್ಲಿ 5 ಕ್ಷೇತ್ರಗಳು: ಬಮೂಲ್ ಆಡಳಿತ ಮಂಡಳಿಯ ಒಟ್ಟು 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು. ಈ ಪೈಕಿ ರಾಮನಗರ ಜಿಲ್ಲೆಯಿಂದ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಮತ್ತು ಕುದೂರು ಕ್ಷೇತ್ರಗಳಿಂದ ಒಟ್ಟು 5 ಮಂದಿ ನಿರ್ದೇಶಕರು ಆಯ್ಕೆಯಾಗಬೇಕಿತ್ತು. ಕನಕಪುರ ಕ್ಷೇತ್ರದಿಂದ ಎಚ್.ಪಿ.ರಾಜಕುಮಾರ್ (ಕಾಂಗ್ರೆಸ್) ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಭಾನುವಾರ ಚುನಾವಣೆ ನಡೆಯಿತು. ರಾಮನಗರ ಕ್ಷೇತ್ರದಿಂದ ಪಿ.ನಾಗರಾಜು (ಜೆಡಿಎಸ್), ಚನ್ನಪಟ್ಟಣ ಕ್ಷೇತ್ರದಿಂದ ಜಯಮುತ್ತು (ಜೆಡಿಎಸ್), ಮಾಗಡಿ ಕ್ಷೇತ್ರದಿಂದ ನರಸಿಂಹ ಮೂರ್ತಿ (ಕಾಂಗ್ರೆಸ್) ಮತ್ತು ಕುದೂರು ಕ್ಷೇತ್ರದಿಂದ ಕೆಇಬಿ ರಾಜಣ್ಣ (ಕಾಂಗ್ರೆಸ್) ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ 5 ನಿರ್ದೇಕರ ಪೈಕಿ 2 ಜೆಡಿಎಸ್ ಮತ್ತು 3 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಯಾರಿಗೆ ಎಷ್ಟು ಮತ?: ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್‌ನ ಪಿ.ನಾಗರಾಜು 152 ಮತಗಳನ್ನು ಪಡೆದು ಭಾರಿ ಅಂತರದಲ್ಲಿ ಜಯಗಳಿಸಿದ್ದಾರೆ. ರಾಮನಗರ ಕ್ಷೇತ್ರದಲ್ಲಿ 160 ಮತಗಳು ಚಲಾವಣೆ ಆಗಿದ್ದವು. ಈ ಪೈಕಿ ಒಂದು ಮತ ತಿರಸ್ಕೃತಗೊಂಡಿದೆ. ಪಿ.ನಾಗರಾಜು 152 ಮತಗಳನ್ನು ಪಡೆದರೆ ಅವರ ಎದುರಾಳಿ ಶಿವಲಿಂಗಯ್ಯ 7 ಮತಗಳನ್ನು ಪಡೆದುಕೊಂಡಿದ್ದಾರೆ. ಪಿ.ನಾಗರಾಜು ಸತತ 5ನೇ ಬಾರಿಗೆ ಬಮೂಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ವಾತಾವರಣ ಇತ್ತು. ಎಸ್.ಲಿಂಗೇಶ್ ಕುಮಾರ್ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಸಹಕಾರಿಗಳು ಎಚ್.ಸಿ.ಜಯಮುತ್ತು ಕೈ ಹಿಡಿದಿವೆೆ. ಎಚ್.ಸಿ.ಜಯಮುತ್ತು 83 ಮತಗಳನ್ನು ಪಡೆಯುವ ಮೂಲಕ 17 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್.ಲಿಂಗೇಶ್ ಕುಮಾರ್ 60 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಮಾಗಡಿ ಕ್ಷೇತ್ರದಲ್ಲಿ ನರಸಿಂಹಮೂರ್ತಿ ಪುನರಾಯ್ಕೆಯಾಗಿದ್ದಾರೆ. 5ನೇ ಬಾರಿಗೆ ನರಸಿಂಹಮೂರ್ತಿ ಬಮೂಲ್ ಪ್ರವೇಶಿಸಿದ್ದಾರೆ. ಇಲ್ಲಿ ನಡೆದಿದ್ದು ಸಹೋದರರ ಕುಸ್ತಿ ಕಾಂಗ್ರೆಸ್ ಬೆಂಬಲಿತ ನರಸಿಂಹಮೂರ್ತಿ ಅವರು 86 ಮತಗಳನ್ನು ಪಡೆದಿದ್ದರೆ. ಅವರ ಸಹೋದರ ಜೆಡಿಎಸ್ ಬೆಂಬಲಿತ ಕೆ.ಕೃಷ್ಣಮೂರ್ತಿ 49 ಮತಗಳನ್ನು ಪಡೆದು ಕೊಂಡಿದ್ದು, 37 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಮತ್ತೂಬ್ಬ ಅಭ್ಯರ್ಥಿ ಮಂಜುನಾಥ್ 1 ಮತ ಪಡೆ ದಿದ್ದಾರೆ. ಬಮೂಲ್ನ ಹೊಸ ಕ್ಷೇತ್ರ ಕುದೂರು ಕ್ಷೇತ್ರ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 4 ಕ್ಷೇತ್ರಗಳು ಮಾತ್ರ ಇದ್ದವು. ಈ ಬಾರಿ ಕುದೂರು ಕ್ಷೇತ್ರವನ್ನು ರಚಿಸಲಾಗಿದೆ. ಕುದೂರು ಕ್ಷೇತ್ರಕ್ಕೆ ಭಾನುವಾರ ನಡೆದ ಚೊಚ್ಚಲ ಚುನಾವಣೆಯಲ್ಲಿ ಕೆಇಬಿ ರಾಜಣ್ಣ 102 ಮತ ಪಡೆದು ಬಮೂಲ್ಗೆ ಪ್ರವೇಶ ಪಡೆದು ಕೊಂಡಿದ್ದಾರೆ. ಇವರಿಗೆ ಪೈಪೋಟಿ ನೀಡಿದ್ದ ಎನ್.ಮಂಜು ನಾಥ್ 50 ಮತ ಗಳನ್ನು ಪಡೆದು ಕೊಂಡಿದ್ದಾರೆ. ರಾಜಣ್ಣ ಅವರು 52 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.
ಗೆದ್ದವರು:
ಬೆಂಗಳೂರು ಉತ್ತರ: ಕೆ.ಎಸ್.ಕೇಶವ ಮೂರ್ತಿ, ಬೆಂಗಳೂರು ಪೂರ್ವ: ಎಂ.ಮಂಜುನಾಥ್, ಬೆಂಗಳೂರು ದಕ್ಷಿಣ: ಎಚ್.ಎಸ್.ಹರೀಶ್ ಕುಮಾರ್, ಆನೇಕಲ್: ಬಿ.ಜಿ.ಆಂಜಿನಪ್ಪ (ಅವಿರೋಧ), ದೊಡ್ಡಬಳ್ಳಾಪುರ: ಆನಂದ ಕುಮಾರ್, ಹೊಸಕೋಟೆ: ಸಿ.ಮಂಜುನಾಥ್, ದೇವನಹಳ್ಳಿ: ಬಿ.ಶ್ರೀನಿವಾಸ್, ನೆಲಮಂಗಲ: ಜಿ.ಆರ್.ಭಾಸ್ಕರ್,