Advertisement
ನಿಮಗೂ ಕಣಿಲೆ ಸಿಕ್ಕರೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ರುಚಿ ನೋಡಬಹುದು. ಕಣಿಲೆಯಿಂದ ಪತ್ರೊಡೆ, ದೋಸೆ, ಪಲ್ಯ, ಗಸಿ, ಪಕೋಡ ಅಲ್ಲದೇ ಉಪ್ಪಿನಕಾಯಿ ಹೀಗೆ ಬಹಳಷ್ಟು ರೀತಿಯ ತಿಂಡಿ ತಿನಿಸುಗಳನ್ನು ಮಾಡಬಹುದಾಗಿದೆ. ಹಾಗಿದ್ದರೆ ಕಣಿಲೆ ಪತ್ರೊಡೆ ಮತ್ತು ಕಣಿಲೆ ದೋಸೆ ತಯಾರಿಸುವ ವಿಧಾನವನ್ನು ನಾವಿಂದು ತಿಳಿದುಕೊಳ್ಳೋಣ…
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ 1 ಕಪ್, ಎಳೆತು ಕಣಿಲೆ ಚೂರು 1 ಕಪ್, ಒಣಮೆಣಸು 7ರಿಂದ 8, ಕೊತ್ತಂಬರಿ 1 ಚಮಚ, ಹುಣಸೆ ಹುಳಿ ಸ್ವಲ್ಪ, ಅರಿಸಿನ ಪುಡಿ 1 ಚಮಚ, ಜೀರಿಗೆ 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
2ರಿಂದ 3 ಗಂಟೆ ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಒಣಮೆಣಸು, ಕೊತ್ತಂಬರಿ, ಜೀರಿಗೆ, ಅರಸಿನ ಪುಡಿ, ಹುಣಸೆ ಹುಳಿ, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿ. ನಂತರ ಸಣ್ಣಗೆ ಚೂರು ಮಾಡಿದ ಕಣಿಲೆಯನ್ನು ಮಿಶ್ರಣ ಮಾಡಿ. ಬಾಡಿಸಿದ ಬಾಳೆ ಎಲೆಯಲ್ಲಿ ಒMದು ಸೌಟು ಹಿಟ್ಟು ಹರಡಿ ಮಡಚಿ ಉಗಿಯಲ್ಲಿ ಅರ್ಧ ಗಂಟೆ ಬೇಯಿಸಿ. ನಂತರ ತೆಗೆದ ಮೇಲೆ ತೆಂಗಿನೆಣ್ಣೆ ಹಾಕಿ ತಿನ್ನಿರಿ. ಬಿಸಿ ಬಿಸಿಯಾದ ಕಣಿಲೆ ಪತ್ರೊಡೆ ಸವಿಯಲು ಸಿದ್ಧವಾಗಿದೆ. ಕಣಿಲೆ ದೋಸೆ
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ 1 ಕಪ್, ಒಣಮೆಣಸು 5ರಿಂದ 6, ಎಳೆತು ಕಣಿಲೆ ಚೂರು ಅರ್ಧ ಕಪ್,ತೆಂಗಿನ ತುರಿ 1ಕಪ್, ಎಣ್ಣೆ 2 ಚಮಚ, ಹುಣಸೆ ಹುಳಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ:
ಬೆಳ್ತಿಗೆ ಅಕ್ಕಿಯನ್ನು 2ರಿಂದ 3 ಗಂಟೆ ನೀರಲ್ಲಿ ನೆನೆಸಿ ನಂತರ ನೀರು ಬಸಿದು ಒಣಮೆಣಸು, ಹುಣಸೆ ಹುಳಿ,ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿರಿ. ನಂತರ ಕಣಿಲೆ ಚೂರು, ಉಪ್ಪು ಸೇರಿಸಿ ಮತ್ತೂಮ್ಮೆ ರುಬ್ಬಿರಿ.ತವಾ ಒಲೆಯ ಮೇಲಿಟ್ಟು ಕಾದ ಮೇಲೆ ಎಣ್ಣೆ ಹಾಕಿ ಒಂದೊಂದೇ ತೆಳ್ಳಗಿನ ದೋಸೆ ಹೊಯ್ಯಿರಿ.ಈ ದೋಸೆಯನ್ನು ಊಟದ ಜೊತೆ ತಿನ್ನಬಹುಐದು. ರುಚಿಕರವಾದ ಕಣಿಲೆ ದೋಸೆ ರೆಡಿ.