Advertisement

ಸ್ವರ್ಗ:ನೀರು ಇಂಗಿಸಲು ಬಿದಿರು ಕೃಷಿ

12:20 PM Jun 02, 2019 | sudhir |

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಐದು ಸ್ಥಳಗಳಲ್ಲಿ ಬಿದಿರು ನರ್ಸರಿಗೆ ಚಾಲನೆ ನೀಡಲಾಗಿದ್ದು ಸ್ವರ್ಗ ವಾರ್ಡಿನ ಪೊಯ್ಯೆ ರಾಮ ನಾಯ್ಕ ಅವರ ಜಮೀನಿನಲ್ಲಿ ಬಿದಿರಿನ ನರ್ಸರಿ ಪ್ರಾರಂಭಿಸಲಾಯಿತು.

Advertisement

ಭೂಮಿಗೆ ನೀರಿಂಗಿಸುವ ಉದ್ದೇಶ ದಿಂದ ಬಿದಿರುಗಳನ್ನು ನೆಟ್ಟು ಆ ಮೂಲಕ ನೀರಿನ ಕ್ಷಾಮವನ್ನು ನಿವಾರಿಸಲು ಸರಕಾರ ಯೋಜನೆ ರೂಪಿಸಿದೆ.ಬಿದಿರು ಮರದ ಬೇರುಗಳಿಗೆ ಗಟ್ಟಿ ಮಣ್ಣನ್ನು ಸೀಳಿಕೊಂಡು ಆಳಕ್ಕೆ ಹೋಗುವ ಸಾಮರ್ಥ್ಯವಿದ್ದೂ , ಅದರ ಮೂಲಕ ಭೂಮಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗಿಸಲು ಸಹಾಯಕವಾಗಲಿದೆ.ಆದುದರಿಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬಿದಿರು ನೆಟ್ಟು ಬೆಳೆಸುವ ಮಹತ್ವದ ಯೋಜನೆಗೆ ಸರಕಾರ ಮುಂದಾಗಿದೆ.ಇದನ್ನು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮೂಲಕ ಕಾರ್ಯಗತಗೊಳಿಸುವುದಾಗಿದೆ.

ಸ್ವರ್ಗದ ಪೊಯ್ಯೆಯಲ್ಲಿ ಆರಂಭಿಸಲಾದ ಬಿದಿರು ನರ್ಸರಿಯ ಸಸ್ಯಗಳ ವಿತರಣೆಯನ್ನು ಜೂನ್‌ 5ರ ಪರಿಸರ ದಿನದಂದು ಉದ್ಘಾಟನೆಗೊಳಿಸಿ ವಿವಿಧ ಸ್ಥಳಗಳಲ್ಲಿ ಹಾಗೂ ಅಗತ್ಯ ಫಲಾನುಭವಿಗಳಿಗೆ ನೀಡಲಾಗುವುದು.ಈಗಾಗಲೇ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು ಗಿಡ ನೆಡಲು ಹೊಂಡ ತೋಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಎಣ್ಮಕಜೆ ಗ್ರಾ.ಪಂ. ಕ್ಷೇಮ ಕಾರ್ಯ ಅಧ್ಯಕ್ಷೆ ಚಂದ್ರಾವತಿ ಎಂ.ಕೆಲಸ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next