ಸಿರುಗುಪ್ಪ: ಸಿದ್ಧಗಂಗಾ ಮಠದ ಶ್ರೀ ಡಾ| ಶಿವಕುಮಾರಸ್ವಾಮೀಜಿಯವರ ಜೀವನಸಾಧನೆ ಬಗ್ಗೆ ಕಾವ್ಯಕಟ್ಟಿ ಅದನ್ನು ದೃಶ್ಯರೂಪದಲ್ಲಿ ಅಳವಡಿಸಿ ಸಿಡಿಯನ್ನು ಹೊರತಂದಿರುವ ಎಂ.ಎಂ. ಶಾಂತಯ್ಯಸ್ವಾಮಿ ನಮ್ಮ ಮಠದ ಬಗ್ಗೆ ಇಟ್ಟಿರುವ ಅಭಿಮಾನವನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಸಿದ್ಧಗಂಗಾಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ತಿಳಿಸಿದರು.
ನಗರದ ಸಿರಿ ಸಾಂಸ್ಕೃತಿಕ ಸಂಗೀತ ಪಾಠ ಶಾಲೆಯ ಸಂಗೀತ ಶಿಕ್ಷಕ ಎಂ.ಎಂ. ಶಾಂತಯ್ಯಸ್ವಾಮಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಜೀವನಶೈಲಿ ಮತ್ತು ಸಾಧನೆಗಳ ಕುರಿತಾದ “ಸಿದ್ಧಗಂಗೆಯ ಸಿರಿ’ ಶೀರ್ಷಿಕೆಯಡಿ “ಶರಣು ಶರಣು ಗುರುವೆ ಸಾವಿರದ ಶರಣು’ ಎಂಬ ಸಂಗೀತ ದೃಶ್ಯ ಮಾಲಿಕೆಯ ಸಿಡಿಯನ್ನು ಸಿದ್ಧಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ ಶ್ರೀಗಳು ಆಶೀರ್ವಚನ ನೀಡಿ ಇಂದು ಭಕ್ತಿ, ಶ್ರದ್ಧೆ ಕಡಿಮೆಯಾಗುತ್ತಿದ್ದು, ಎಲ್ಲರೂ ದುಡ್ಡಿನ ಹಿಂದೆ ಓಡುತ್ತಿದ್ದಾರೆ.
ಆದರೆ ಶಾಂತಯ್ಯಸ್ವಾಮಿಯಂಥ ಭಕ್ತರು ಭಕ್ತಿ, ಶ್ರದ್ಧೆ ಹಿಂದೆ ಬಿದ್ದಿದ್ದು, ನಮ್ಮ ಮಠದ ಪರಂಪರೆಯ ಮಹತ್ವವನ್ನು ಹಾಗೂ ಹಿರಿಯ ಶ್ರೀಗಳ ಜೀವನ ಸಾಧನೆಯನ್ನು ತಿಳಿಸುವ ಕಾವ್ಯಕ್ಕೆ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಈ ಸಿಡಿಯಲ್ಲಿರುವ ದೃಶ್ಯಕಾವ್ಯದ ಗೀತೆಗಳು ಭಕ್ತಿ ಭಾವದಿಂದ ಕೂಡಿದ್ದು, ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ ಎಂದು ಹೇಳಿದರು.
ಸಂಗೀತ ಶಿಕ್ಷಕ ಎಂ.ಎಂ. ಶಾಂತಯ್ಯಸ್ವಾಮಿ ಮಾತನಾಡಿ ಸಾಹಿತ್ಯವನ್ನು ಸುಭಾಷಿಣಿ ಎಂ. ಕುರುಡಿಮs… ರಚಿಸಿದ್ದು, ಇದಕ್ಕೆ ನಾನು ಸಂಗೀತ ಸಂಯೋಜನೆ ಮಾಡಿ ಹಾಡಿದ್ದೇನೆ. ದೃಶ್ಯಕಾವ್ಯದ ಸಿಡಿ ಚಿತ್ರೀಕರಣ ಮತ್ತು ಸಂಕಲನ ಜಗದೀಶ.ಟಿ. ಹಿರೇಮs… ಹಾಗೂ ಪಂಡಿತ್ ದೇವೇಂದ್ರಕುಮಾರ್ ಪತ್ತಾರ್ ನಿರ್ಮಾಣ ಮತ್ತು ನಿರ್ವಹಣೆಯನ್ನು ಟಿ.ಎಚ್. ಎಂ. ಉಜ್ಜಿನಿ ಕೊಟ್ರಮ್ಮ ನಿರ್ವಹಿಸಿದ್ದಾರೆ.
ಎಲ್ಲರ ಸಹಕಾರದಿಂದ ದೃಶ್ಯಕಾವ್ಯ ಸಿಡಿಯು ಅತ್ಯುತ್ತಮವಾಗಿ ಮೂಡಿಬಂದಿದೆ. ಇದನ್ನು ಶ್ರೀಗಳು ಬಿಡುಗಡೆ ಮಾಡಿ ನಮಗೆ ಆಶೀರ್ವಾದ ಮಾಡಿದ್ದಾರೆಂದು ಹೇಳಿದರು. ಸುಭಾಷಿಣಿ ಎಂ.ಕುರುಡಿಮs…, ಜಗದೀಶ.ಟಿ. ಹಿರೇಮs…, ಪಂಡಿತ್ ದೇವೇಂದ್ರಕುಮಾರ್ ಪತ್ತಾರ್, ಟಿ.ಎಚ್. ಎಂ. ಉಜ್ಜಿನಿ ಕೊಟ್ರಮ್ಮ ಮತ್ತು ಮಠದ ಹಳೇ ವಿದ್ಯಾರ್ಥಿ ಪಂಪನಗೌಡ ಇದ್ದರು.