Advertisement

ಸದಾ ಕಲಾವಿದರ ಜತೆಯಲ್ಲಿರುವೆ: ಮಂಜಮ್ಮಜೋಗ್ತಿ

06:34 PM Jul 28, 2021 | Team Udayavani |

ಬಳ್ಳಾರಿ: ಅಧಿಕಾರದಲ್ಲಿ ಇರಲಿ, ಇರದಿರಲಿ ಸದಾ ಕಲಾವಿದರ ಜತೆಯಲ್ಲೇ ಇರುವೆನು ಎಂದು ಪದ್ಮಶ್ರೀ ಪುರಸ್ಕೃತೆ ಮಾತೆ ಮಂಜಮ್ಮ ಜೋಗ್ತಿ ಹೇಳಿದರು. ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಕಲ್ಯಾಣ ಕರ್ನಾಟಕ ಭಾಗದ ಹಲವು ಪ್ರಕಾರದ ಕಲಾವಿದರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಲಾವಿದರ ಹಲವು ಬೇಡಿಕೆಗಳುಳ್ಳ ಪತ್ರವನ್ನು ಸರ್ಕಾರದ ಪ್ರತಿನಿಧಿ ಯಾಗಿ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್‌ ಸೊನಾರೆ ಮಾತನಾಡಿ, 58 ವರ್ಷದ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದ್ದು, ಇದನ್ನು 50 ವರ್ಷಕ್ಕೆ ಇಳಿಸಬೇಕು.

ಪ್ರತಿ ತಿಂಗಳ ನೀಡುವ 2000 ರೂ. ಮಾಸಾಶನವನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ರಾಜ್ಯೋತ್ಸವ, ಪದ್ಮಶ್ರೀಗಳಂತಹ ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ತಿಂಗಳಿಗೆ 2 ಸಾವಿರ ರೂಗಳ ಬದಲಿಗೆ 10 ಸಾವಿರ ರೂಗಳ ಮಾಸಾಶನ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸಂಚಾಲಕರನ್ನು ನೇಮಕ ಮಾಡಲಾಯಿತು.

ಬಳ್ಳಾರಿ ತಾಲೂಕು ಗಂಗಣ್ಣ, ಕೂಡ್ಲಿಗಿ ಪ್ರಸಾದ್‌, ಕುರುಗೋಡು ಪಾರ್ವತೀಶ್‌, ವಿಜಯನಗರ ಅಂಜಲಿ ಬೆಳಗಲ್ಲು, ಸಂಡೂರು ಅಶ್ವರಾಮು, ಸಿರುಗುಪ್ಪ ಬಯಲಾಟ ಮಾಸ್ಟರ್‌ ತಿಪ್ಪೇಸ್ವಾಮಿ, ಕಂಪ್ಲಿ ತಾಲೂಕು ವೀರಣ್ಣ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್‌ ಕೆ. ರಂಗಣ್ಣವರ್‌, ಒಕ್ಕೂಟದ ಕಾರ್ಯದರ್ಶಿ ಪ್ರಕಾಶ್‌ ಅಂಗಡಿ, ಉಪಾಧ್ಯಕ್ಷ ಪುರುಷೋತ್ತಮ ಹಂದ್ಯಾಳ್‌, ರಾಜ್ಯ ಪ್ರಶಸ್ತಿ ವಿಜೇತರಾದ, ವೀಣಾ ಆದೋನಿ, ಜಿಲಾನಿಬಾಷಾ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಮೇಶ್‌ ಗೌಡ ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next