Advertisement

ಮಕ್ಕಳ ಆರೈಕೆ ಕೌಶಲ್ಯವೃದ್ಧಿಗೆ ತರಬೇತಿ ಸಹಕಾರಿ

09:11 PM Jul 14, 2021 | Team Udayavani |

ಬಳ್ಳಾರಿ: ಸಂಭಾವ್ಯ ಕೋವಿಡ್‌ ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವಿಮ್ಸ್‌ ನಿರ್ದೇಶಕ ಡಾ| ಗಂಗಾಧರಗೌಡ ಹೇಳಿದರು.

Advertisement

ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕೋವಿಡ್‌ 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ಶುಶ್ರೂಷಕರಿಗೆ ಐಸಿಯುಗಳಲ್ಲಿ ಚಿಕಿತ್ಸಾ ಕ್ರಮ ಹಾಗೂ ಇನ್ನಿತರೆ ಚಿಕಿತ್ಸಾ ಕ್ರಮಗಳ ಕುರಿತು ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ವಿಮ್ಸ್‌ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಭಾವ್ಯ ಕೋವಿಡ್‌ 3ನೇ ಅಲೆ ಸಂದರ್ಭದಲ್ಲಿ ಮಕ್ಕಳ ಆರೈಕೆ ಮತ್ತು ಕೌಶಲ್ಯವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಶುಶ್ರೂಷಕರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಈ ತರಬೇತಿಯು ಶುಶ್ರೂಷಕರ ಕೌಶಲ್ಯವೃದ್ಧಿಗೆ ಅತ್ಯಂತ ಸಹಕಾರಿಯಾಗಲಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಮತ್ತು ಇಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ಕೌಶಲ್ಯಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಿ ಎಂದು ಅವರು ಹೇಳಿದರು.

ಕೋವಿಡ್‌ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದ್ದು, ಮುಂದಿನ ಸಂಭಾವ್ಯ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರಬಹುದು ಎಂದು ತಜ್ಞರು ವರದಿ ನೀಡಿದ್ದಾರೆ. ಒಂದು ವೇಳೆ ಮಕ್ಕಳಲ್ಲಿ ಕೋವಿಡ್‌ ಕಂಡು ಬಂದರೆ ಯಾವ ರೀತಿಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಬೇಕು. ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.

ತರಬೇತಿಯ ಸಮಯದಲ್ಲಿ ನಿಮಗೆ ಏನಾದರೂ ಸಂದೇಹ, ಪ್ರಶ್ನೆಗಳು ಇದ್ದಲ್ಲಿ ತಜ್ಞರೊಂದಿಗೆ ಚರ್ಚಿಸಿ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ತರಬೇತಿ ನಂತರ ಇಲ್ಲಿ ಕಲಿತ ಅಂಶಗಳನ್ನು ಬಳಸಿ, ವೈದ್ಯರ ಶಮ್ರಕ್ಕೆ ತಕ್ಕ ಪ್ರತಿಫಲ ನೀಡಿ ಎಂದು ಅವರು ಹೇಳಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌.ಬಸರೆಡ್ಡಿ ಅವರು ಮಾತನಾಡಿ, ಕೋವಿಡ್‌ ಸಮಯದಲ್ಲಿ ಕೆಲಸ ಮಾಡಲು ಅವಕಾಶ ದೊರೆತಿದ್ದು ನಮ್ಮ ಅದೃಷ್ಟ ಎಂದು ಭಾವಿಸಿ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಒದಗಿಸಲು ಬೇಕಾದ ಉತ್ತಮ ವೈದ್ಯಕೀಯ ಕಾಲೇಜು, ಜಿಲ್ಲಾಸ್ಪತ್ರೆ ಒಳಗೊಂಡಂತೆ ಎಲ್ಲ ಸೌಲಭ್ಯಗಳು ಲಭ್ಯವಿವೆ. ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ರೋಗಿಗಳಿಗೆ ನೆರವಾಗೋಣ ಎಂದರು.

Advertisement

ಯಾವುದೇ ಒಂದು ಕೆಲಸ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡೋಣ. ಶುಶ್ರೂಷಕರು ಮತ್ತು ವೈದ್ಯರು ಕೋವಿಡ್‌ ಮೊದಲನೆ ಅಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಕೆ ತೋರುತ್ತಿದ್ದರು. ಆದರೆ ಈಗ ಕೋವಿಡ್‌ ಬಗ್ಗೆ ಭಯವು ಕಡಿಮೆಯಾಗಿ ರೋಗವನ್ನು ಎದರಿಸಬಲ್ಲೆ ಎನ್ನುವ ಅರಿವು ಮೂಡಿದೆ. ಸಂಭಾವ್ಯ 3ನೇ ಅಲೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಾಗಲೇ ಕೈಗೊಂಡಿದ್ದು ಅವಶ್ಯಕತೆ ಇರುವ ಎಲ್ಲ ಸಂಪನ್ಮೂಲಗಳು ಲಭ್ಯವಿದೆ.

ಅವುಗಳ ಬಳಕೆ ಬಗ್ಗೆ ಈ ತರಬೇತಿಯಲ್ಲಿ ತಿಳಿಸಲಾಗುತ್ತಿದ್ದು, ಪ್ರತಿಯೊಬ್ಬರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಅವರು ತಿಳಿಸಿದರು. ಜಿಲ್ಲಾ ಆರ್‌ಸಿಎಚ್‌ ಅಧಿ ಕಾರಿ ಡಾ| ಅನಿಲ್‌ ಕುಮಾರ್‌ ಅವರು ಮಾತನಾಡಿ, ಬೇರೆ ಯಾವ ಜಿಲ್ಲೆಯಲ್ಲೂ ಈ ರೀತಿಯ ತರಬೇತಿ ಕಾರ್ಯಕ್ರಮ ನಡೆಯುತ್ತಿಲ್ಲ. ಶುಶ್ರೂಷಕರಿಗೆ ಹತ್ತು ದಿನಗಳ ಕಾಲ ತರಬೇತಿ ನೀಡಲಾಗುತ್ತಿದೆ.

ಕಲಿಕೆಗೆ ಉತ್ತಮ ಅವಕಾಶ ದೊರೆತಿದ್ದು ವೈದ್ಯರ ಸಹಯೋಗದೊಂದಿಗೆ ಒಂದು ಒಳ್ಳೆಯ ಯೋಜನೆಯ ಮೂಲಕ ತರಬೇತಿ ನಡೆಸಲಾಗುತ್ತಿದೆ. ಮಕ್ಕಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಿ, ಸಕ್ರಿಯವಾಗಿ ಕಾರ್ಯನಿರ್ವಹಿಸಿ ಎಂದರು. ಈ ಸಂದರ್ಭದಲ್ಲಿ ವಿಮ್ಸ್‌ ವೈದ್ಯಕೀಯ ಅಧಿಧೀಕ್ಷಕ ಡಾ| ಅಶ್ವಿ‌ನ್‌ಕುಮಾರ್‌, ಡಾ| ಬಾಲರೆಡ್ಡಿ, ಡಾ| ಬಾಲಭಾಸ್ಕರ್‌, ವಿಮ್ಸ್‌ ಪಿಡಿಯಾಟ್ರಿಕ್ಸ್‌ ಎಚ್‌ಓಡಿ ಡಾ| ದುರುಗುಪ್ಪ, ಡಾ| ಸುರೇಶ್‌ ಮತ್ತು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next