Advertisement

ಎಂಪಿಪಿ ಕನಸು ಸಾಕಾರಗೊಳಿಸಲು ಸಹಕರಿಸಿ

10:15 PM Jul 12, 2021 | Team Udayavani |

ಹೂವಿನಹಡಗಲಿ: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ ಅವರು ಬಡವರು, ಕಲಾವಿದರು, ಅಶಕ್ತರ ಬಗ್ಗೆ ಸದಾ ಕಾಳಜಿಯುಳ್ಳವರಾಗಿದ್ದರು.

Advertisement

ಅವರ ಎಲ್ಲ ಜನಪರವಾದ ಕನಸುಗಳನ್ನು ಸಾಕಾರಗೊಳಿಸಲು ಕುಟುಂಬ ವರ್ಗ ಸತತವಾಗಿ ಶ್ರಮಿಸುತ್ತಿದ್ದು, ಅಭಿಮಾನಿಗಳು ಬೆಂಬಲವಾಗಿ ನಿಲ್ಲಬೇಕು ಎಂದು ಪಟ್ಟಣದ ಗವಿಮಠದ ಶ್ರೀ ಡಾ| ಹಿರಿಶಾಂತವೀರ ಸ್ವಾಮೀಜಿ ನುಡಿದರು.

ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಎಂ.ಪಿ. ಪ್ರಕಾಶ್‌ ಸಮಾಜಮುಖೀ ಟ್ರಸ್ಟ್‌, ರಂಗಭಾರತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಂ.ಪಿ.ಪ್ರಕಾಶರ 81ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಈ ಭಾಗದಲ್ಲಿ ನೈಸರ್ಗಿಕ ಬರ, ಸಾಂಸ್ಕೃತಿಕ ಬರ ಅಳಿಸಿ ಹಾಕಲು ಅವರ ಅಧಿಕಾರದ ಅವಧಿಯಲ್ಲಿ ಸದಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದರು. ಇಂಥ ಯೋಜನೆಗಳ ಮೂಲಕವಾಗಿ ಅವರು ದೂರದೃಷ್ಟಿ ಹೊಂದಿದ್ದವರಾಗಿದ್ದರು ಎಂದರು. ರಂಗಭಾರತಿ ಕಾರ್ಯಾಧ್ಯಕ್ಷೆ ಎಂ.ಪಿ. ಸುಮಾ ವಿಜಯ್‌ ಮಾತನಾಡಿ, ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮ ರೂಪಿಸಿದ್ದೇವೆ.

ತಂದೆಯವರ ಜನ್ಮದಿನದ ಪ್ರಯುಕ್ತ ನೊಂದವರಿಗೆ ನೆರವಾಗುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದೇವೆ. ಎಂಪಿಪಿಯವರ ಆದರ್ಶ ಚಿಂತನೆಗಳಿಗೆ ಪೂರಕವಾಗಿ ಸಮಾಜಮುಖೀ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

Advertisement

ಎಂ.ಪಿ.ಪ್ರಕಾಶ್‌ ಸಮಾಜಮುಖೀ ಟ್ರಸ್ಟ್‌ ಕಾರ್ಯದರ್ಶಿ ಶಾಂತಮೂರ್ತಿ ಕುಲಕರ್ಣಿ ಮಾತನಾಡಿ, ಎಂ.ಪಿ. ಪ್ರಕಾಶ್‌ ಅವರು ನಾಡಿನ ಉದ್ದಗಲಕ್ಕೂ ಹೂವಿನಹಡಗಲಿ ಹಿರಿಮೆಯನ್ನು ಪರಿಚಯಿಸಿದ್ದಾರೆ. ಈ ಭಾಗದ ಭೌತಿಕ ಪ್ರಗತಿಗೆ ಅಪಾರ ಕೊಡುಗೆ ನೀಡುವ ಮೂಲಕ ಎಂಪಿಪಿಯವರು ಜನಮಾನಸದಲ್ಲಿ ಹಸಿರಾಗಿ ಉಳಿದಿದ್ದಾರೆ ಎಂದರು.

ನಾಗತಿಬಸಾಪುರ ಹಾಲಸ್ವಾಮಿ ಮಠದ ಡಾ| ಎಂ.ಪಿ.ಎಂ. ಮಂಜುನಾಥಯ್ಯ ಸಾನ್ನಿಧ್ಯ ವಹಿಸಿದ್ದರು. ಎಂ.ಪಿ. ರುದ್ರಾಂಬ ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಾನಪದ ಕಲಾವಿದರು, ಛಾಯಾಗ್ರಾಹಕರು, ಟ್ಯಾಕ್ಸಿ ಮತ್ತು ಆಟೋ ಚಾಲಕರು ಸೇರಿದಂತೆ 350 ಜನರಿಗೆ ಆಹಾರ ಕಿಟ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next