ಬಳ್ಳಾರಿ: ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ರೈತರಲ್ಲಿ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೀಜ ಮಾರಾಟದ ಮಳಿಗೆಗಳ ಮೇಲೆ ತೋಟಗಾರಿಕೆ ಇಲಾಖೆ ಅಧಿ ಕಾರಿಗಳು ಮಂಗಳವಾರ ದಾಳಿ ನಡೆಸಿ ಸಿಂಜೆಂಟ್ ಕಂಪನಿಯ 2.2 ಕೆಜಿ ಬಿತ್ತನೆ ಬೀಜವನ್ನು ವಶಕ್ಕೆ ಪಡೆದಿದ್ದಾರೆ.
ಸಿಂಜೆಂಟ್ ಕಂಪನಿಯ 5531, 2043 ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ರೈತರು ಪ್ರತಿನಿತ್ಯ ತೋಟಗಾರಿಕೆ ಕಚೇರಿಗೆ ಅಲೆಯುತ್ತಿದ್ದಾರೆ. ಮಹಿಳೆಯರು ಸೇರಿ ರೈತರು ಬೀಜಕ್ಕಾಗಿ ಕಚೇರಿಗೆ ನುಗ್ಗುತ್ತಿದ್ದಾರೆ. ರೈತರಿಗೆ ವಿತರಿಸಲು ಸಮರ್ಪಕ ಬೀಜ ಇಲ್ಲದಿದ್ದರೆ, ಸಿಂಜೆಂಟ್ ಕಂಪನಿಯಿಂದ ಈಗಾಗಲೇ ವಿತರಣೆಯಾಗಿರುವ ಬಿತ್ತನೆ ಬೀಜಗಳು ಯಾರ ಬಳಿಯಿವೆ ಎಂದು ರೈತ ಸಂಘಟನೆಗಳ ಮುಖಂಡರು ಮಂಗಳವಾರ ಅಧಿಕಾರಿಗಳನ್ನು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಅಮರ ಸಿದ್ದೇಶ್ವರ ಟ್ರೇಡಿಂಗ್ ಕಂಪನಿ, ಶ್ರೀಕೃಷ್ಣ ಟ್ರೇಡಿಂಗ್ ಕಂಪನಿ, ಸಿದ್ದಮ್ಮನಹಳ್ಳಿಯ ಶ್ರೀ ವೆಂಕಟೇಶ್ವರ ಟ್ರೇಡರ್ಸ್, ಬಳ್ಳಾರಿಯ ಸಿದ್ದೇಶ್ವರ ಏಜೆನ್ಸಿ, ತಿರುಮಲ ಎಂಟರ್‌ಪ್ರೈಸಸ್, ವೆಂಕಟೇಶ್ವರ ಸೀಡ್ಸ್ ಆ್ಯಂಡ್ ಫರ್ಟಿಲೈಸರ್ಸ್, ಲಕೀÒ$¾ನಗರ ಕ್ಯಾಂಪ್‌ನ ನಾಗಭೂಷನ ಆಗ್ರೋ ಏಜೆನ್ಸಿ, ಸೋಮ ಸಮುಸಮುದ್ರ ಗ್ರಾಮದ ವೆಂಕಟೇಶ್ವರ ಎಂಟರ್‌ಪ್ರೈಸಸ್ ಮಳಿಗೆಗಳ ಮೇಲೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ ಸೋಮಸಮುದ್ರ ಗ್ರಾಮದ ವೆಂಕಟೇಶ್ವರ ಸೀಡ್ಸ್ ಆ್ಯಂಡ್ ಫರ್ಟಿಲೈಸರ್ಸ್ ಕಂಪನಿಯಲ್ಲಿ ಸಿಂಜೆಂಟ್ ಕಂಪನಿಯ 5531 ಬಿತ್ತನೆ ಬೀಜ 100 ಗ್ರಾಂಗಳ 2 ಪ್ಯಾಕೇಟ್, ಲಕೀÒ$¾ನಗರ ಕ್ಯಾಂಪ್‌ನ ನಾಗಭೂಷಣ ಆಗ್ರೊ ಏಜೆನ್ಸಿಯಲ್ಲಿ 2 ಕೆಜಿ ಸೇರಿ ಒಟ್ಟು 2.2 ಕೆಜಿ ಬಿತ್ತನೆ ಬೀಜವನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖೆ ಉಪನಿರ್ದೇಶಕ ಶರಣಪ್ಪ ಪಿ.ಭೋಗಿ ತಿಳಿಸಿದ್ದಾರೆ.
ಆದರೆ, ಬೀಜ ದೊರೆತ ಮಳಿಗೆಗಳ ಮೇಲೆ ಕ್ರಮಕೈಗೊಳ್ಳುವುದು, ದೂರು ದಾಖಲಿಸುವ ಬಗ್ಗೆ ಅ ಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಸೋಮವಾರ ರೈತರಿಗೆ ವಿತರಣೆ: ಸಿಂಜೆಂಟ್ ಕಂಪನಿಯ 5531, 2043 ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ರೈತರಲ್ಲಿ ಅದೊಂದು ಟ್ರೆಂಡ್ ಆಗಿದೆ. ಹಾಗಾಗಿ ಕಂಪನಿಯ ಡಿಸ್ಟ್ರಿಬ್ಯೂಟರ್‌ನೊಂದಿಗೆ ಮಾತನಾಡಿದ್ದೇವೆ. ಕಂಪನಿಯಿಂದ ಸ್ಟಾಕ್ ಬಂದಿಲ್ಲ. ಶನಿವಾರದೊಳಗೆ 5531, 2043 ಬೀಜಗಳು ತಲಾ 50 ಕೆಜಿಯಷ್ಟು ಕಳುಹಿಸುವುದಾಗಿ ತಿಳಿಸಿದ್ದಾರೆ.
ಒಂದು ವೇಳೆ ಬಂದಲ್ಲಿ ಸೋಮವಾರ ಬಳ್ಳಾರಿ ತಾಲೂಕು, ಕುರುಗೋಡು, ರೂಪನಗುಡಿ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗುವುದು ಎಂದು ಉಪನಿರ್ದೇಶಕ ಎಸ್.ಪಿ.ಭೋಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇತರೆ ಬೀಜಗಳನ್ನೂ ಗಮನಹರಿಸಿ: ಸಿಂಜೆಂಟ್ ಕಂಪನಿಯ 5531, 2043 ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ರೈತರಲ್ಲಿ ಒಂದು ಟ್ರೆಂಡ್ ಆಗಿದೆ. ಆದರೆ, ಇದಕ್ಕೂ ಹೆಚ್ಚು ಇಳುವರಿ ನೀಡುವ ಅದೇ ಕಂಪನಿಯ, ಇತರೆ ಕಂಪನಿಗಳ ವಿವಿಧ ಬೀಜಗಳ ಬಗ್ಗೆಯೂ ರೈತರು ಗಮನ ಹರಿಸಬೇಕು ಎಂದ ಅವರು, ಸಿಂಜೆಂಟ್ ಕಂಪನಿಯ ರೆಡ್‌ಪಟ್ಟಿ, 2094 ಬಿತ್ತನೆ ಬೀಜಗಳು ಸಹ ಉತ್ತಮವಾಗಿ ಬೆಳೆಯುತ್ತವೆ. ಜತೆಗೆ ಲಕೀ, ಇಂಡೋಪೈ, ನುಸಿ ಸೀಡ್ಸ್ ಕಂಪನಿ ಸೇರಿ ಇನ್ನಿತರೆ ಹಲವು ಕಂಪನಿಗಳ ಬೀಜಗಳು ಸಹ ಇವೆ. ಈ ಬೀಜಗಳು 5531, 2043ಯಷ್ಟೇ ಪ್ರಮಾಣದಲ್ಲಿ ಇಳುವರಿ ನೀಡುತ್ತವೆ.
ಈ ಕಂಪನಿಗಳಿಗೆ ನೆರೆಯ ಆಂಧ್ರ, ರಾಜ್ಯದ ಹುಬ್ಬಳ್ಳಿ ಇನ್ನಿತರೆ ಭಾಗದಲ್ಲಿ ಈ ಬೀಜಗಳಿಗೆ ಬೇಡಿಕೆಯೇ ಇಲ್ಲ. ಹಾಗಾಗಿ ಆ ಬೀಜಗಳನ್ನು ಬಳ್ಳಾರಿಗೆ ಕಳುಹಿಸಲಾಗುತ್ತಿದೆ. ಹಾಗಾಗಿ ರೈತರು ಒಂದೇ ವಿಧದ ಬೀಜಕ್ಕೆ ಮುಗಿಬೀಳದೆ ಇತರೆ ಬೀಜಗಳ ಬಗ್ಗೆಯೂ ಗಮನ ಹರಿಸಬೇಕು ಎಂದವರು ರೈತರನ್ನು ಕೋರಿದ್ದಾರೆ.