Advertisement

ಧಾರ್ಮಿಕ ಕಾರ್ಯಗಳಿಂದ ಶ್ರೇಯಸ್ಸು: ಶ್ರೀಶೈಲ ಶ್ರೀ

10:19 PM Jun 17, 2021 | Team Udayavani |

ಸಿರುಗುಪ್ಪ: ನಾವು ಸಾರ್ವಜನಿಕರಿಗಾಗಿ ಮಾಡುವ ಸೇವೆಯಿಂದಾಗಿ ನಮಗಾಗುವ ಉಪಯೋಗಕ್ಕಿಂತ ಜನರು ಆ ಕಲ್ಯಾಣ ಮಂಟಪಗಳಲ್ಲಿ ಮಾಡುವ ಶುಭಕಾರ್ಯಗಳಲ್ಲಿನ ಪುಣ್ಯದ ಪಾಲು ನಮಗೂ ದೊರೆಯುತ್ತದೆ. ನಾವು ಮಾಡುವ ಧಾರ್ಮಿಕ ಕಾರ್ಯಗಳೇ ನಮಗೆ ಶ್ರೇಯಸ್ಸು ತರುತ್ತವೆಂದು ಶ್ರೀಶೈಲಪೀಠದ 1008 ಜಗದ್ಗುರು ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

Advertisement

ನಗರದಲ್ಲಿರುವ ಪಿನಾಕಿನಿ ಆಶ್ರಮಕ್ಕೆ ಮಂಗಳವಾರ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ನೂತನ ಕಲ್ಯಾಣ ಮಂಟಪದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಗೆ ಪೂಜ್ಯರು, ಕೊಡುಗೈದಾನಿಗಳು, ಬಲಿಯಾಗುತ್ತಿರುವುದು ವಿಷಾದನೀ ಯವಾದದ್ದು ಜಗತ್ತಿನಿಂದ ಕೊರೊನಾವನ್ನು ದೂರಮಾಡಿ ಮನುಕುಲಕ್ಕೆ ಒಳಿತು ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸೋಣ. ಕಟ್ಟಡದ ಶೇ. 50ರಷ್ಟು ಕಾಮಗಾರಿ ನಡೆದಿದ್ದು ಕಾಮಗಾರಿಯ ಕಾರ್ಯಯೋಜನೆ ನಮಗೆ ಖುಷಿ ತಂದಿದೆ.

ಸರ್ಕಾರದ ಸೇವೆ, ಭಕ್ತರ ಸೇವೆಯಿಂದಾಗಿ ಪಿನಾಕಿನಿ ಆಶ್ರಮದಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭವಾದಾಗಿನಿಂದ ಪ್ರವಾಹ, ಕೊರೊನಾ ಒಂದನೇ ಮತ್ತು ಎರಡನೇ ಅಲೆಯಂಥ ಸಂಕಷ್ಟ ಸಮಯದಲ್ಲೂ ಭಕ್ತರು ಶಕ್ತಿಮೀರಿ ಗುರುಸೇವೆ, ಧಾರ್ಮಿಕ ಸೇವೆ, ಸಾಮಾಜಿಕ ಸೇವೆಗೆ ಸಹಾಯ ಮಾಡುತ್ತಿರುವುದು ಸಂತಸದ ಸಂಗತಿಯಾಗಿದ್ದು ಇನ್ನೂ ಈ ಕಾಮಗಾರಿಯ ಸೇವೆಗಾಗಿ ವಾಗ್ಧಾನ ನೀಡಿರುವ ಭಕ್ತರು ಗುರುಸೇವೆಗೆ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮುಂದಾಬೇಕೆಂದು ಕರೆನೀಡಿದರು.

ಮಾಜಿ ಶಾಸಕ ಚಂದ್ರಶೇಖರಯ್ಯ ಸ್ವಾಮಿ, ಬಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಚೊಕ್ಕಬಸವನಗೌಡ, ಮುಖಂಡರಾದ ಎಚ್‌.ಕೆ. ಮಲ್ಲಿಕಾರ್ಜುನಯ್ಯ ಸ್ವಾಮಿ, ಚನ್ನಬಸವನಗೌಡ, ಎನ್‌.ಜಿ. ಬಸವರಾಜಪ್ಪ, ಶಿವಶಂಕರಗೌಡ, ಯು. ಅಮರೇಶಪ್ಪ, ಆರ್‌. ಬಸವಲಿಂಗಪ್ಪ, ದೊಡ್ಡ ವೀರೇಶಗೌಡ, ಟಿ.ಎಂ. ಶಿವಕುಮಾರ, ಬಿ.ಎಂ. ಯರಿಸ್ವಾಮಿ, ಬಿ.ಎಂ.ಜಡಿಸ್ವಾಮಿ, ಎನ್‌.ವೀರನಗೌಡ, ಎಂ. ವೀರನಗೌಡ, ಎ. ಶಿವರುದ್ರಗೌಡ, ನಾ.ಮ. ಜಗದೀಶ, ಶಂಭುಲಿಂಗಯ್ಯ ಗಾಣದಾಳ್‌, ಮಂಜುನಾಥಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next