Advertisement
ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಭಾಗದಲ್ಲಿ ಆಯೋಜಿಸುವ ಕುರಿತು ತೀರ್ಮಾನ ಕೈಗೊಂಡಿತು. ಈ ಹಿಂದೆ ವಿ.ಕೃ. ಗೋಕಾಕ್ ಅಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ 40ನೇ ಸಮ್ಮೇಳನ ನಡೆದಿತ್ತು. ಇದೀಗ ಮುಂದಿನ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯಲು ಹಲವು ರೀತಿಯ ಕಾರಣಗಳಿವೆ.
ಸಮ್ಮೇಳನ ಆಯೋಜಿಸುವಾಗ ಉತ್ತರ ಮತ್ತು ದಕ್ಷಿಣ ಸಮನ್ವಯ ಯಾವಾಗಲೂ ಇದ್ದು, ಅದನ್ನು ಪಾಲನೆ ಮಾಡಲಾಗಿದೆ. ಉತ್ತರ, ದಕ್ಷಿಣ, ಮಧ್ಯ, ಕರಾವಳಿ ಮಾನ್ಯತೆ ನೀಡಲಾಗುತ್ತದೆ. ಕರಾವಳಿ, ಮಡಿಕೇರಿ-ಮಲೆನಾಡು ಭಾಗದಲ್ಲಿ ಈಗಾಗಲೇ ನುಡಿತೇರು ಎಳೆಯಲಾಗಿದೆ. ಹಾವೇರಿಯಲ್ಲೇ ಬಳ್ಳಾರಿಗೆ ಬಹುಮತ
ಕಳೆದ 30 ವರ್ಷದ ಅವಧಿಯಲ್ಲಿ ಉಡುಪಿ ಮತ್ತು ತುಮಕೂರಿನಲ್ಲಿ ಕೂಡ ಸಾಹಿತ್ಯ ಸಮೇ¾ಳನ ಆಯೋಜಿಸಲಾಗಿದೆ. ತುಮಕೂರಿನಲ್ಲಿ ಸಮ್ಮೇಳನ ನಡೆದು 30 ವರ್ಷ, ಚಿಕ್ಕಮಗಳೂರಿನಲ್ಲಿ ಸಮ್ಮೇಳನ ನಡೆದು 25 ವರ್ಷ ಕೂಡ ಕಳೆದಿಲ್ಲ. ಸಮ್ಮೇಳನ ನಡೆದು ಹೆಚ್ಚು ವರ್ಷ ಆಗಿರುವುದು ಬಳ್ಳಾರಿ ಜಿಲ್ಲೆ. ಆ ಹಿನ್ನೆಲೆಯಲ್ಲಿ ಈ ಬಾರಿ ಗಣಿನಾಡಿಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ ಹೇಳುತ್ತಾರೆ.
Related Articles
Advertisement
ಕಾಫಿ ನಾಡು, ಕಲ್ಪತರು ನಾಡು ಪೈಪೋಟಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಾಫಿನಾಡು ಚಿಕ್ಕಮಗಳೂರು ಮತ್ತು ಕಲ್ಪತರು ನಾಡು ತುಮಕೂರು ಜಿಲ್ಲೆಗಳಿಂದ ತೀವ್ರ ಪೈಪೋಟಿ ಉಂಟಾಯಿತು. ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷರ ಜತೆಗೆ ಎರಡೂ ಜಿಲ್ಲೆಗಳ ಕಸಾಪ ಅಧ್ಯಕ್ಷರು ಪಟ್ಟು ಹಿಡಿದ್ದರು. ಶನಿವಾರ ರಾತ್ರಿ 10ರ ವರೆಗೂ ನಡೆದ ಕಾರ್ಯಕಾರಿಣಿ ಸಭೆ ಬಳಿಕ ಶೇ. 90ರಷ್ಟು ಮಂದಿ ಬಳ್ಳಾರಿಯಲ್ಲಿ ನಡೆಸುವ ತೀರ್ಮಾನಕ್ಕೆ ಬಂದರು. 88ನೇ ಸಾಹಿತ್ಯ ಸಮ್ಮೇಳನಕ್ಕೆ
ಬಳ್ಳಾರಿಗೆ ಬನ್ನಿ: ಮಹೇಶ್ ಜೋಶಿ
ಮಂಡ್ಯ: ಸಕ್ಕರೆನಾಡಿನಲ್ಲಿ ಸಾಹಿತ್ಯದ ಹಬ್ಬವನ್ನು ಯಶಸ್ವಿಗೊಳಿಸಿದ ಕನ್ನಡಾಭಿಮಾನಿಗಳು, ಮುಂದಿನ ವರ್ಷ ಗಣಿನಾಡು ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ ಎಂದುಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಕನ್ನಡಾಭಿಮಾನಿಗಳಿಗೆ ಆಹ್ವಾನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಡೆಯಲಿರುವ ಮುಂದಿನ ಸಾಹಿತ್ಯ ಸಮ್ಮೇಳವನ್ನು ಇದೇ ರೀತಿಯ ಯಶಸ್ವಿಗೊಳಿಸಲು ಕನ್ನಡಿಗರು ಬೆಂಬಲ ನೀಡಬೇಕು. 66 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು. ನಮಗೆ ಶಕ್ತಿ ತುಂಬಿದ ಎಲ್ಲರಿಗೂ ಕಸಾಪ ಚಿರ ಋಣಿಯಾಗಿದೆ ಎಂದರು.