Advertisement

ಪದವಿ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ

06:48 PM Feb 02, 2022 | Team Udayavani |

ಬಳ್ಳಾರಿ: ಪದವಿ ವಿದ್ಯಾರ್ಥಿಗಳ ಪರೀûಾ ಶುಲ್ಕ ಏರಿಕೆವಿರೋಧಿಸಿ, ಕೂಡಲೇ ಹಿಂಪಡೆಯಬೇಕೆಂದುಆಗ್ರಹಿಸಿ ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ (ಸ್ವಾಯತ್ತ) ಪದವಿ ಕಾಲೇಜು ಎದುರುಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದ ಮಂಗಳವಾರಪ್ರತಿಭಟನೆ ನಡೆಸಲಾಯಿತು.

Advertisement

ಸರಳಾದೇವಿ ಪದವಿ ಕಾಲೇಜು, ಸರ್ಕಾರಿ ಕಾಲೇಜು. ರಾಜ್ಯ ಸರ್ಕಾರ ಪದವಿ ವಿದ್ಯಾರ್ಥಿಗಳಪರೀûಾ ಶುಲ್ಕವನ್ನು ವಿನಾಯಿತಿ ದರದಲ್ಲಿ 150 ರೂ.ನಿಗದಿಪಡಿಸಿತ್ತು. ಅದನ್ನು ಇದೀಗ ಏಕಾಏಕಿ 1200ರೂ.ಗೆ ಹೆಚ್ಚಿಸಿರುವುದು ವಿದ್ಯಾರ್ಥಿಗಳಲ್ಲಿ ಅತಂಕಉಂಟುಮಾಡಿದೆ. ಈಗಾಗಲೇ ಕಳೆದ ಲಾಕ್‌ಡೌನ್‌ವೇಳೆ ಎಷ್ಟೋ ಬಡ ಕುಟುಂಬಗಳು ಮತ್ತು ಮಧ್ಯಮವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟವನ್ನುಅನುಭವಿಸಿದ್ದಾರೆ.

ಆ ತೀವ್ರತೆಯಿಂದ ಇನ್ನು ಅವರುಹೊರ ಬಂದಿಲ್ಲ. ಅವರ ಮಕ್ಕಳ ಶಿಕ್ಷಣವು ಸರ್ಕಾರಿಕಾಲೇಜುಗಳ ಮೇಲೆಯೇ ಅವಲಂಬಿತವಾಗಿದೆ.ಇಂತಹ ಸಂದರ್ಭದಲ್ಲಿ ಏಕಾಏಕಿ ಪರೀûಾ ಶುಲ್ಕವನ್ನು150 ರೂ.ಗಳಿಂದ 1200 ರೂ. ಗಳಿಗೆ ಹೆಚ್ಚಳ ಮಾಡಿದರೆವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತದೆ.ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳುರೈತ-ಕಾರ್ಮಿಕರ ಬಡ ಕುಟುಂಬದವರಾಗಿದ್ದು,ಎಷ್ಟೋ ವಿದ್ಯಾರ್ಥಿಗಳು ಖಾಸಗಿ ಶಾಲಾ-ಕಾಲೇಜುಶುಲ್ಕವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಸರ್ಕಾರಿ ಶಿಕ್ಷಣಸಂಸ್ಥೆಗಳಿಗೆ ಬರುತ್ತಿದ್ದಾರೆ.

ಈ ರೀತಿಯ ಪರೀûಾ ಶುಲ್ಕಏರಿಕೆಯಾದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುತ್ತುಬರುವ ಸಾಧ್ಯತೆಯಿದೆ ಎಂದು ಪ್ರತಿಭಟನಾನಿರತವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಕ್ಷಣದ ವ್ಯಾಪರಿಕರಣ ವಿರುದ್ಧ ಹೋರಾಡಬೇಕು.ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದಕಾಲೇಜು ವತಿಯಿಂದ ಹೆಚ್ಚಿಸಿರುವ ಪರೀûಾಶುಲ್ಕವನ್ನು ಹಿಂತೆಗೆದುಕೊಂಡು ಪ್ರತಿ ವರ್ಷದಂತೆವಿನಾಯಿತಿ ದರದಲ್ಲಿ (150 ರೂ) ಪರೀûಾ ಶುಲ್ಕತೆಗೆದುಕೊಳ್ಳಬೇಕು. ಈಗಾಗಲೇ ಹೆಚ್ಚುವರಿ ಶುಲ್ಕಪಾವತಿಸಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕವನ್ನುಮರುಪಾವತಿಸಬೇಕು ಮತ್ತು ಶುಲ್ಕ ಕಟ್ಟುವ ಅವ ಧಿಮುಂದೂಡಬೇಕು ಎಂದು ಒತ್ತಾಯಿಸಿದರು.

Advertisement

ಬಳಿಕಕಾಲೇಜು ಪ್ರಾಚಾರ್ಯ ಎಚ್‌. ಹೇಮಣ್ಣರಿಗೆ ಮನವಿಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಎಐಡಿಎಸ್‌ಒಜಿಲ್ಲಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿಜೆ.ಪಿ. ರವಿಕಿರಣ್‌, ಜಿಲ್ಲಾ ಸೆಕ್ರೆಟರಿಯೇಟ್‌ ಸದಸ್ಯಕಂಬಳಿ ಮಂಜುನಾಥ, ಜಿಲ್ಲಾ ಕಚೇರಿ ಕಾರ್ಯದರ್ಶಿಕೆ.ಈರಣ್ಣ, ಸದಸ್ಯರಾದ ಎಂ.ಶಾಂತಿ, ಅನುಪಮಾ,ಸಿದ್ದು, ನಿಹಾರಿಕ, ಪ್ರಮೋದ್‌, ಮೋಹನ್‌,ನಾಗರತ್ನ, ಶ್ವೇತಾ, ತಿಪ್ಪೇರುದ್ರ ಹಾಗೂ ಸಾವಿರಾರುವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next