Advertisement

ಬಳ್ಳಾರಿಯಲ್ಲಿ ರ್ಯಾಪಿಡ್‌ ರೆಸ್ಪಾನ್ಸ್‌ ತಂಡ ರಚನೆ

03:03 PM Jan 20, 2022 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ/ವಿಜಯನಗರಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು ದಿನೇದಿನೆಸ್ಫೋಟಗೊಳ್ಳುತ್ತಿದ್ದರೂ, ಮನೆಗಳಲ್ಲೇ ಐಸೋಲೇಷನ್‌ಆಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.ಅದಕ್ಕಾಗಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿರುವ ಶೇ.90ರಷ್ಟು ಸೋಂಕಿತರಿಗೆ “ಔಷಧ ಕಿಟ್‌’ಗಳನ್ನು ಮನೆಗೆಕಳುಹಿಸಲು ಮುಂದಾಗಿರುವ ಜಿಲ್ಲಾಡಳಿತ, ಆರೋಗ್ಯಇಲಾಖೆ ಅದಕ್ಕಾಗಿ “ರ್ಯಾಪಿಡ್‌ ರೆಸ್ಪಾನ್ಸ್‌ ತಂಡ’ಗಳನ್ನುರಚಿಸಿದೆ.

Advertisement

ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್‌ಮೂರನೇ ಅಲೆ ದಿನೇದಿನೆ ಹೆಚ್ಚಿನ ಜನರಲ್ಲಿ ಸೋಂಕುದೃಢಪಡುತ್ತಿದ್ದು ವ್ಯಾಪಕವಾಗಿ ಹರಡುತ್ತಿದೆ. ಕೇವಲ15 ದಿನಗಳಲ್ಲಿ ಅವಳಿ ಜಿಲ್ಲೆಗಳಲ್ಲಿ ಸುಮಾರು 3ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ.ಅವಳಿ ಜಿಲ್ಲೆಗಳಲ್ಲಿ ಸೋಂಕು ಪತ್ತೆ ಪ್ರಮಾಣ ಶೇ.11ಕ್ಕೆ ಏರಿಕೆಯಾಗಿ ಜನರಲ್ಲಿ ಆತಂಕ ಮೂಡಿಸಿದರೂ,ಶೇ.90 ರಷ್ಟು ಸೋಂಕಿತರು ಆಸ್ಪತ್ರೆಗಳಲ್ಲಿದಾಖಲಾಗದೆ ಮನೆಗಳಲ್ಲೇ ಐಸೋಲೇಷನ್‌ಆಗಿ ಚಿಕಿತ್ಸೆ ಪಡೆಯುತ್ತಿರುವುದು ಕೊಂಚಮಟ್ಟಿಗೆನೆಮ್ಮದಿ ಮೂಡಿಸಿದೆ.

ಸೋಂಕುನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಮಾರ್ಗಸೂಚಿಯಂತೆ ಅಗತ್ಯಕ್ರಮಗಳನ್ನು ಕೈಗೊಂಡಿರುವ ಅವಳಿ ಜಿಲ್ಲೆಗಳಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಗಳು,”ರ್ಯಾಪಿಡ್‌ ರೆಸ್ಪಾನ್ಸ್‌ ತಂಡ’ಗಳನ್ನು ರಚನೆ ಮಾಡಿ,ಸೋಂಕಿತರ ಮನೆಗಳಿಗೆ “ಔಷಧ ಕಿಟ್‌’ಗಳನ್ನುಕಳುಹಿಸುವ ಮೂಲಕ ಸೋಂಕು ನಿಯಂತ್ರಿಸಲುಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next