Advertisement

26ಕ್ಕೆ ನಂದಿನಿ ಸಮೃದ್ದಿ ಹಾಲು ಮಾರುಕಟ್ಟೆಗೆ

05:25 PM Jan 12, 2022 | Team Udayavani |

ಬಳ್ಳಾರಿ: ರಾಯಚೂರು, ಬಳ್ಳಾರಿ, ವಿಜಯನಗರ,ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದಿಂದ ಶೇ.6ರಷ್ಟು ಜಿಡ್ಡಿನಾಂಶವುಳ್ಳ ಕೆನೆಭರಿತ “ನಂದಿನಿ ಸಮೃದ್ಧಿ’ಹಾಲನ್ನು ಇದೇ ಜ.26ರಂದು ಮಾರುಕಟ್ಟೆಗೆಬಿಡುಗಡೆಗೊಳಿಸಲಾಗುವುದು ಎಂದು ಒಕ್ಕೂಟದಅಧ್ಯಕ್ಷ, ಶಾಸಕ ಭೀಮಾನಾಯ್ಕ ತಿಳಿಸಿದರು.

Advertisement

ನಗರದ ಒಕ್ಕೂಟದ ಕೇಂದ್ರ ಕಚೇರಿಯಲ್ಲಿಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಒಕ್ಕೂಟದಿಂದ ಈಗಾಗಲೇನಾಲ್ಕು ಮಾದರಿಯ ನಂದಿನಿ ಟೋನ್‌x ಹಾಲು(ಶೇ.3ರಷ್ಟು ಜಿಡ್ಡಿನಾಂಶ), ನಂದಿನಿ ಶುಭಂ(ಶೇ.4.5 ಜಿಡ್ಡಿನಾಂಶ), ಶುಭಂ ಗೋಲ್ಡ್‌ (ಶೇ.5ಜಿಡ್ಡಿನಾಂಶ), ನಂದಿನಿ ಸ್ಪೆಷಲ್‌ ಹಾಲು (ಶೇ.4ಜಿಡ್ಡಿನಾಂಶ) ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ.ಇದೀಗ ಶೇ.6ರಷ್ಟು ಜಿಡ್ಡಿನಾಂಶವುಳ್ಳ ಕೆನೆಭರಿತ”ನಂದಿನಿ ಸಮೃದ್ಧಿ’ ಹಾಲಿಗೆ ಒಕ್ಕೂಟ ವ್ಯಾಪ್ತಿಯಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳಜಿಲ್ಲೆಗಳ ಹೊಟೇಲ್‌, ಟೀ ಶಾಪ್‌ ಮಾಲೀಕರು ಮತ್ತುನೆರೆಯ ಆಂಧ್ರ ಪ್ರದೇಶದ ಅನಂತಪುರ, ಕರ್ನೂಲ್‌,ಕಡಪ ಜಿಲ್ಲೆಗಳು, ತೆಲಂಗಾಣ ರಾಜ್ಯಗಳಿಂದಬೇಡಿಕೆಯಿಟ್ಟಿರುವ ಹಿನ್ನೆಲೆಯಲ್ಲಿ ಇದೇ ಜ.26ರಂದುಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದುಅವರು ವಿವರಿಸಿದರು.

ನಂದಿನಿ ಸಮೃದ್ಧಿ ಹಾಲನ್ನು ಮೊದಲ ದಿನವೇ10 ಸಾವಿರ ಲೀಟರ್‌ ಹಾಲನ್ನು ಮಾರುಕಟ್ಟೆಗೆಕಳುಹಿಸುವುದಾಗಿ ತಿಳಿಸಿದ ಅಧ್ಯಕ್ಷ ಭೀಮಾನಾಯ್ಕ,ಆಂಧ್ರಕ್ಕೆ 4 ಸಾವಿರ ಲೀಟರ್‌ ಸರಬರಾಜುಮಾಡಲಾಗುವುದು. ಇದನ್ನು ಕೆಲವೇ ದಿನಗಳಲ್ಲಿ10-15 ಸಾವಿರ ಲೀಟರ್‌ಗೆ ಹೆಚ್ಚಿಸಲಾಗುವುದುವಿಶ್ವಾಸ ವ್ಯಕ್ತಪಡಿಸಿದರು.ಒಕ್ಕೂಟದಲ್ಲಿ ನಾಲ್ಕು ಜಿಲ್ಲೆಗಳಿಂದ ಪ್ರತಿದಿನರೈತರಿಂದ ಸರಾಸರಿ 2 ಲಕ್ಷ ಲೀಟರ್‌ ಗುಣಮಟ್ಟದಹಾಲು ಸಂಗ್ರಹವಿದ. ಇದರಲ್ಲಿ 1.34 ಲಕ್ಷ ಲೀಟರ್‌ಸಂಸ್ಕರಿಸಿದ, ಪರಿಶುದ್ಧ ಹಾಲನ್ನು ಮಾರುಕಟ್ಟೆಗೆಕಳುಹಿಸಲಾಗುತ್ತಿದ್ದು, ಉಳಿದ ಹಾಲನ್ನುನಂದಿನಿ ಇನ್ನಿತರೆ ಉತ್ಪನ್ನಗಳ ತಯಾರಿಕೆಗೆ ಬಳಕೆಮಾಡಿಕೊಳ್ಳಲಾಗುತ್ತಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next