ಹೊಸಪೇಟೆ: ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಜೀವನ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಶಿಕ್ಷಕಿ ಎಂ.ಗಾಯಿತ್ರಿ ತಿಳಿಸಿದರು.ನಗರದ ಗೌತಮ ಬುದ್ಧ ಫಂಕ್ಷನ್ ಹಾಲ್‌ನಲ್ಲಿ ಜನನಿ ಮಹಿಳಾಸಬಲೀಕರಣ ಸಮಿತಿ ಹೊಸಪೇಟೆ ವತಿಯಿಂದ ಹಮ್ಮಿಕೊಂಡಿದ್ದಭಾರತದ ಮೊದಲ ಶಿಕ್ಷಕಿ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿಫುಲೆ ಅವರ ಜಯಂತಿ ಆಚರಣೆ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿ, ಹತ್ತು ಹಲವು ಅವಮಾನಗಳನ್ನುಅನುಭವಿಸಿ 18ನೇ ಶತಮಾನದ ವೇಳೆಯೇ ಅಕ್ಷರ ಕ್ರಾಂತಿಯನ್ನುಮಾಡಿದವರು ಸಾವಿತ್ರಿಬಾಯಿ ಫುಲೆ. ಅವರ ಜೀವನ ನಮಗೆಲ್ಲಮಾದರಿಯಾಗಬೇಕು.
ಜನನಿ ಸಮಿತಿಯವರು ಉತ್ತಮಸಮಾಜಸೇವೆ ಕಾರ್ಯಗಳನ್ನು ಮಾಡುತ್ತಿದ್ದು ಇವರ ಸೇವೆಹೀಗೆಯೇ ಮುಂದುವರೆಯಲಿ ಎಂದರು.ಶಿಕ್ಷಕ ಬಿ.ಎಂ. ರಾಜಶೇಖರ್ ಮಾತನಾಡಿ, ಸಾವಿತ್ರಿಬಾಯಿಫುಲೆಯವರು ತಮ್ಮ ಎಳೆ ವಯಸ್ಸಿನಲ್ಲೇ ಸಮಾಜದಲ್ಲಿಮಹಿಳೆಯರಿಗೆ ಆಗುತ್ತಿದ್ದ ಅಸಮಾನತೆ ಶೋಷಣೆ ವಿರುದ್ಧಧ್ವನಿ ಎತ್ತಿ ಸಮಾಜದ ವಿರೋಧದ ನಡುವೆಯೂ ಅಕ್ಷರ ಕಲಿತುಇತರೆ ಹೆಣ್ಣು ಮಕ್ಕಳಿಗೂ ಶಾಲಾ, ಕಾಲೇಜುಗಳನ್ನು ಆರಂಭಿಸಿಶಿಕ್ಷಣ ನೀಡಿದರು.
ತಮ್ಮ ಜೀವನದುದ್ದಕ್ಕೂ ದಮನಿತರು,ಮಹಿಳೆಯರು, ವಿಧವೆಯರು, ಗರ್ಭಿಣಿಯರು ಹಾಗೂಅನಾಥರ ಸೇವೆ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮನ್ವಂತರಬರೆದವರು ಸಾವಿತ್ರಿಬಾಯಿ ಫುಲೆ ಎಂದರು. ಇದೇ ವೇಳೆ ಇವರುಸ್ವತಃ ತಾವೇ ಬರೆದ ಸಾವಿತ್ರಿಬಾಯಿ ಫುಲೆ ಭಾರತದ ಮೊದಲಶಿಕ್ಷಕಿ ಪುಸ್ತಕಗಳನ್ನು ಸಭಿಕರೆಲ್ಲರಿಗೂ ನೀಡಿದರು.ಡಾ| ದೀಪಾ ಗರ್ಭಿಣಿಯರ ಆರೋಗ್ಯ ಮತ್ತು ನವಜಾತಶಿಶುಗಳ ಮರಣ ತಡೆಯುವ ಬಗ್ಗೆ ಮಾಹಿತಿ ನೀಡಿದರು.
ಪ್ರಸವ ಪೂರ್ವ ಹಾಗೂ ನಂತರದಲ್ಲಿ ಸಂಭವಿಸಬಹುದಾದಸಾವುಗಳು ಮತ್ತು ಅವುಗಳನ್ನು ತಡೆಯುವ ಕ್ರಮಗಳ ಬಗ್ಗೆಮಹತ್ವದ ಮಾಹಿತಿ ನೀಡಿ ತಾಯಿ ಎದೆ ಹಾಲಿನ ಮಹತ್ವ, ಹೆಣ್ಣುಮಕ್ಕಳ ಸ್ವತ್ಛತೆ, ಪೌಷ್ಟಿಕ ಆಹಾರದ ಪ್ರಾಮುಖ್ಯತೆ ಸರ್ಕಾರದಿಂದಲಭ್ಯವಿರುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದರು. ಇದೇವೇಳೆ ಅತಿಥಿಗಳನ್ನು ಸನ್ಮಾನಿಸಲಾಯಿತು.ಸಮಿತಿ ಅಧ್ಯಕ್ಷೆ ಗೀತಾಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಶೈಲಜಾ ಹಾಗೂ ರೇಖಾ, ಗೌರವಾಧ್ಯಕ್ಷೆ ರೇಖಾರಾಣಿಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿಎನ್. ಹುಲಿಗೆಮ್ಮ ಸಮಿತಿಯ 3 ತಿಂಗಳ ಕಾರ್ಯಚಟುವಟಿಕೆವರದಿ ಮಂಡಿಸಿದರು. ಖಜಾಂಚಿ ಶಾರದಾ ಕುಲಕರ್ಣಿ,ನಾಗವೇಣಿ ಹಂಪಿ, ರೇಣುಕಾಬಾಯಿ ನಿರ್ವಹಿಸಿದರು. ಶ್ರೀದೇವಿ,ಸ್ವಾತಿಸಿಂಗ್, ರಾಜೇಶ್ವರಿ, ಸಮಿತಿಯ ಸದಸ್ಯರು ಸೇರಿದಂತೆ 60ಕ್ಕೂಹೆಚ್ಚು ಜನ ಉಪಸ್ಥಿತರಿದ್ದರು.