Advertisement

ಎಂಇಎಸ್‌-ಶಿವಸೇನೆ ಸಂಘಟನೆ ನಿಷೇಧಿಸಿ

03:18 PM Dec 29, 2021 | Team Udayavani |

ಬಳ್ಳಾರಿ: ರಾಜ್ಯದಲ್ಲಿ ಎಂಇಎಸ್‌, ಶಿವಸೇನೆಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡಬಣ) ಕಾರ್ಯಕರ್ತರನ್ನು ಪೊಲೀಸರು ಬಂಧಿ ಸಿಬಿಡುಗಡೆಗೊಳಿಸಿದರು.ನಗರದ ಕರವೇ ಕಚೇರಿಯಿಂದ ಪ್ರತಿಭಟನಾಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು,ಎಂಇಎಸ್‌, ಶಿವಸೇನೆ ಸಂಘಟನೆಗಳ ವಿರುದ್ಧಘೋಷಣೆ ಕೂಗಿದರು.

Advertisement

ಗಡಗಿ ಚೆನ್ನಪ್ಪ ವೃತ್ತದಲ್ಲಿಕೆಲಹೊತ್ತು ಪ್ರತಿಭಟನೆ ನಡೆಸಿ, ಬಳಿಕ ಅಲ್ಲಿಂದಜಿಲ್ಲಾ ಧಿಕಾರಿ ಕಚೇರಿಗೆ ತಲುಪಿದರು. ಈ ವೇಳೆಜಿಲ್ಲಾ ಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಕಾರ್ಯಕರ್ತರನ್ನು ಪೊಲೀಸರು ಬಂಧಿ ಸಿ,ಪೊಲೀಸ್‌ ವಾಹನಗಳಲ್ಲಿ ಹತ್ತಿಸಿಕೊಂಡು ಡಿಎಆರ್‌ಮೈದಾನಕ್ಕೆ ಕರೆದೊಯ್ದು ಕೆಲಹೊತ್ತಿನ ಬಳಿಕಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಅಪರಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ್‌ ಅವರಿಗೆ ಮನವಿಸಲ್ಲಿಸಿದರು.

ಭಾಷಾವಾರು ಪ್ರಾಂತ್ಯ ವಿಂಗಡಣೆಯನಂತರ ಮಹಾರಾಷ್ಟ್ರ ರಾಜಕಾರಣಿಗಳು, ಅಲ್ಲಿನಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿಪದೇಪದೇ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಬಂದಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣಸಮಿತಿ ಎಂಬ ಸಂಘಟನೆ/ರಾಜಕೀಯ ಪಕ್ಷವನ್ನುಹುಟ್ಟುಹಾಕಿ ಅದಕ್ಕೆ ಮಹಾರಾಷ್ಟ್ರದಿಂದ ಹಣಕಾಸಿನನೆರವು ಹರಿಸಿ ಬೆಳಗಾವಿಯ ಕನ್ನಡಿಗರ ಮೇಲೆಮರಾಠಿಗರನ್ನು ಎತ್ತಿಕಟ್ಟಿ ಹಲವು ದಶಕಗಳಿಂದದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ.

ಎಂಇಎಸ್‌ ಜತೆಗೆ ಶಿವಸೇನೆ ಎಂಬ ರಾಜಕೀಯಪಕ್ಷದ ಘಟಕವೂ ಬೆಳಗಾವಿಯಲ್ಲಿ ಅಶಾಂತಿಯನ್ನುಉಂಟು ಮಾಡುತ್ತಿದೆ. ಹೀಗಾಗಿ ಈ ಎರಡೂಸಂಘಟನೆ, ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕುಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನುಒತ್ತಾಯಿಸಿದರು. ನಮ್ಮ ಸಂಘಟನೆ ಎಂಇಎಸ್‌,ಶಿವಸೇನೆಗಳು ನಡೆಸುತ್ತಿರುವ ನಾಡದ್ರೋಹಿ,ದೇಶದ್ರೋಹಿ ಕೃತ್ಯಗಳ ವಿರುದ್ಧ ಕಳೆದ ಎರಡುದಶಕಗಳಿಂದ ಹೋರಾಟ ನಡೆಸುತ್ತ ಬಂದಿದೆಯಲ್ಲದೆಇವುಗಳನ್ನು ನಿಷೇಧಿ ಸಬೇಕೆಂದು ಆಗ್ರಹಿಸುತ್ತಲೇ ಇದೆ.ಈಗ ಈ ಎರಡು ಸಂಘಟನೆಗಳ ಸಮಾಜಘಾತಕಕೃತ್ಯಗಳು ಮಿತಿಮೀರಿವೆ.

ರಾಜ್ಯದಲ್ಲಿ ದ್ವೇಷದವಾತಾವರಣ ನಿರ್ಮಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆತಂದಿರುವ ಹಿನ್ನೆಲೆಯಲ್ಲಿ ಸರ್ಕಾರ ತಡಮಾಡದೆ ನಮ್ಮಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ವೇದಿಕೆ ಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌, ಅಂಗಡಿಶಂಕರ್‌, ಶಿವಕುಮಾರ್‌, ತಿಪ್ಪಾರೆಡ್ಡಿ, ಶಶಿಕುಮಾರಬೆಟ್ಟಪ್ಪ, ರವಿ, ತೋಟದ ವಿರೇಶ್‌, ಹನುಮಂತರೆಡ್ಡಿ,ಸಿಂ ಗೇರಿ ಗೋವಿಂದ, ಎನ್‌.ಚಂದ್ರಮೋಹನ್‌,ಮೋಕಾ ಪಂಪನಗೌಡ, ಚಾಂದ್‌ಬಾಷ, ಬೆಳಗಲ್ಲುವಿರುಪಾಕ್ಷಿಗೌಡ, ಕುಡುತಿನ ಶಿವಕುಮಾರ,ತೋರಣಗಲ್ಲು ರಾಮಕೃಷ್ಣ, ಕಂಪ್ಲಿ ಅಧ್ಯಕ್ಷರುಮಲ್ಲಿಕಾರ್ಜುನ, ಹನುಮಂತ, ಮಾರೆಪ್ಪ, ಕಾಟ್ಟೆಗುಡ್ಡವಿ.ಕುಮಾರ್‌, ವಿರೇಶ್‌ ಗೆಣಿಕೆಹಾಳ್‌, ಗುಡಿಸಲುರಾಜು, ಗೆಣಿಕೆಹಾಳ್‌ ಹಸೇನ್‌ಸಾಬ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next