Advertisement

ಎಂಇಎಸ್‌ ಕೃತ್ಯ ಖಂಡಿಸಿ ಸಂಘಟನೆಗಳ ಪ್ರತಿಭಟನೆ

06:13 PM Dec 23, 2021 | Team Udayavani |

ಬಳ್ಳಾರಿ: ಬೆಳಗಾವಿಯಲ್ಲಿ ಕ್ರಾಂತಿವೀರಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ವಿರೂಪಗೊಳಿಸಿದ ಬೆನ್ನಲ್ಲೇ ವಿಶ್ವಗುರುಬಸವಣ್ಣನವರ ಭಾವಚಿತ್ರಕ್ಕೆ ಸೆಗಣಿ ಬಳಿದಎಂಇಎಸ್‌ ಕೃತ್ಯವನ್ನು ಖಂಡಿಸಿ ವಿವಿಧ ಕನ್ನಡಪರಸಂಘಟನೆಗಳುನಗರದರಾಯಲ್‌ ವೃತ್ತದಲ್ಲಿ ಬುಧವಾರ ಸಂಜೆ ಮೇಣದ ಬತ್ತಿಹಿಡಿದು ಪ್ರತಿಭಟನೆ ನಡೆಸಿದವು.

Advertisement

ಬಳ್ಳಾರಿಯ ಅಖೀಲ ಭಾರತ ವೀರಶೈವಮಹಾಸಭಾ, ಕರ್ನಾಟಕ ರಕ್ಷಣಾ ವೇದಿಕೆ,ತುಂಗಭದ್ರಾ ರೈತ ಸಂಘ, ರಾಷ್ಟ್ರೀಯಬಸವದಳ ಮತ್ತು ಕನ್ನಡ ಸಾಹಿತ್ಯ ಪರಿಷತ್‌ಬಳ್ಳಾರಿ ಜಿಲ್ಲಾ ಸಮಿತಿಯಿಂದ ನಗರದಈಡಿಗ ಹಾಸ್ಟೆಲ್‌ ಆವರಣದಿಂದ ರಾಯಲ್‌ವೃತ್ತದವರೆಗೆ ಎಂಇಎಸ್‌ ಕೃತ್ಯವನ್ನುಖಂಡಿಸಿ ಮೇಣದ ದೀಪ ಹಚ್ಚಿಕೊಂಡು ಮಹಾರಾಷ್ಟ ಸರ್ಕಾರದ ವಿರುದ್ಧ ಧಿಕ್ಕಾರದಘೋಷಣೆಗಳನ್ನು ಕೂಗಿದರು.

ಟೈರ್‌ಗೆ ಬೆಂಕಿಹಚ್ಚಿದ ಪ್ರತಿಭಟನೆಕಾರರು ತಮ್ಮ ಆಕ್ರೋಶವ್ಯಕ್ತಪಡಿಸಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರಪ್ರತಿಮೆಯನ್ನು ಎಂಇಎಸ್‌, ಶಿವಸೇನೆಗೂಂಡಾಗಳು ವಿರೂಪಗೊಳಿಸಿದ ಬೆನ್ನಲ್ಲೇಖಾನಾಪುರದ ಹಲಸಿಯಲ್ಲಿ ಕನ್ನಡ ಬಾವುಟಸುಟ್ಟು, ವಿಶ್ವಮಾನವ ಕ್ರಾಂತಿಯೋಗಿಬಸವಣ್ಣನವರ ಭಾವಚಿತ್ರಕ್ಕೆ ಸೆಗಣಿ ಬಳಿದಘಟನೆ ನಡೆಸಿದೆ. ಕನ್ನಡ ನಾಡಿನ ಜನತೆಆಘಾತಕ್ಕೆ ಒಳಗಾಗಿದ್ದಾರೆ.

ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮತಾವಾದದಹರಿಕಾರ ವಿಶ್ವ ಗುರು ಬಸವಣ್ಣನವರಿಗೆನೀಚ ಎಂಇಎಸ್‌ ಮತ್ತು ಶಿವಸೇನೆಭಯೋತ್ಪಾದಕರು ಅಪಮಾನ ಮಾಡುವಮೂಲಕ ಸಮಸ್ತ ಮಾನವ ಕುಲಕ್ಕೆಅವಮಾನ ಎಸಗಿದ್ದಾರೆ ಎಂದು ತೀವ್ರವಾಗಿಖಂಡಿಸಿದರು.ಪ್ರತಿಭಟನೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ‌ನಿಷ್ಠಿ ರುದ್ರಪ್ಪ, ತುಂಗಭದ್ರ ರೈತ ಸಂಘದಅಧ್ಯಕÒ‌ ದರೂರು ಪುರುಷೋತ್ತಮಗೌಡ,ಮಖಂಡರಾದ ರವಿಶಂಕರ್‌, ಕೇಣಿಬಸಪ್ಪ,ದರೂರು ಶಾಂತನಗೌಡ, ಶಿವಕುಮಾರ್‌,ತಿಪ್ಪಾರೆಡ್ಡಿ, ವೇಣಿವೀರಾಪುರ ಕಿಶೋರ್‌,ಶಶಿಕುಮಾರ ಬೆಟ್ಟಪ್ಪ, ಶಬರಿ ರವಿ, ಹುಬ್ಬಳಿರವಿ, ಸಿಂಗೇರಿ ಗೋವಿಂದ, ಆನಂದಗೌಡ,ಮೇಟಿ ದಿವಾಕರ್‌, ದೇವರಾಜ, ಸಂಗನಕಲ್ಲುವಿಜಯ್‌ಕುಮಾರ್‌, ಗಂಗಾವತಿ ವೀರೇಶ್‌,ಬಿಸಲಳ್ಳಿ ಬಸವರಾಜ್‌ ಸೇರಿದಂತೆ ಇತರರುಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next