ಬಳ್ಳಾರಿ: ಇಲ್ಲಿನ ಗಾಂ ಧಿನಗರದಲ್ಲಿನ ಆರ್‌ವೈಎಂಇಸಿ ತಾಂತ್ರಿಕ ಕಾಲೇಜಿನ ವಸತಿ ನಿಲಯದಲ್ಲಿನೂತನವಾಗಿ ಪ್ರಥಮ ವರ್ಷ ಪ್ರವೇಶ ಪಡೆದವಿದ್ಯಾರ್ಥಿಗಳಿಗೆ ಒಂದು ವಾರ ಯೋಗ ತರಬೇತಿಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಪತಂಜಲಿ ಯೋಗ ಸಮಿತಿ ಸಂಯೋಜಕಇಸ್ವಿ ಪಂಪಾಪತಿ ಶಿಬಿರಕ್ಕೆ ಚಾಲನೆ ನೀಡಿಮಾತನಾಡಿ, ಸರ್ವ ರೋಗಗಳಿಗೆ ಯೋಗವೇಮದ್ದು. ಯೋಗ ಆಯುರ್ವೇದದಿಂದರೋಗಗಳಿಗೆ ದೂರವಾಗುತ್ತದೆ. ಮಾನಸಿಕವಾಗಿಶಾರೀರಕವಾಗಿ ಮನಸ್ಸು, ಬುದ್ಧಿ, ಏಕಕಾಲಕ್ಕೆಚೈತನ್ಯ ನೀಡುವ ಸಾಧನೆ ಯೋಗವಾಗಿದೆ.
ಹಾಗಾಗಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯತುಂಬುವ ಸಲುವಾಗಿ ಕಾಲೇಜು ಆಡಳಿತಮಂಡಳಿ ಅಧ್ಯಕ್ಷ ಅಲ್ಲಂ ಚೆನ್ನಪ್ಪ, ಪ್ರಾಚಾರ್ಯಹನುಮಂತರೆಡ್ಡಿ ಅನುಮತಿ ಮೇರೆಗೆ ವಸತಿನಿಲಯದಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು,ಪ್ರತಿದಿನ ತರಗತಿಗೂ ಮುನ್ನ ಯೋಗ್ಯಾಭ್ಯಾಸಮಾಡಿಸಲಾಗುತ್ತದೆ ಎಂದವರು ತಿಳಿಸಿದರು.
ಮುಖ್ಯ ಅತಿಥಿ ಕಾಲೇಜಿನ ಪ್ರಾಧ್ಯಾಪಕಚಿದಾನಂದ ಮಾತನಾಡಿ, ಇಂದಿನ ಯಾಂತ್ರಿಕಜೀವನದಲ್ಲಿ ಒತ್ತಡಕ್ಕೆ ಒಳಗಾಗಿ ಮನುಷ್ಯ ನಾನಾರೋಗಗಳಿಗೆ ಬಲಿಯಾಗುತ್ತಿದ್ದಾನೆ. ಆಹಾರ, ಗಾಳಿ,ನೀರು, ಮಲೀನವಾಗಿದೆ. ಇವುಗಳಿಂದ ದೂರಉಳಿಯಬೇಕಾದರೆ ಯೋಗವೊಂದೆ ಪರಿಹಾರಎಂದು ತಿಳಿಸಿದರು.
ಬಹಳ ಜನ ಯೋಗವನ್ನುನಿರಂತರ ಮಾಡಲು ಹಿಂಜರಿಯುತ್ತಿರುವುದುಸರಿಯಲ್ಲ. ಯೋಗ ನಿತ್ಯ ಜೀವನದಲ್ಲಿಅಳವಡಿಸಿಕೊಂಡರೆ ಆರೋಗ್ಯವಂತ ಸಮಾಜವನ್ನುನಿರ್ಮಿಸಬಹುದು. ಪತಂಜಲಿ ಯುವ ಭಾರತ್‌ಅಧ್ಯಕ್ಷ ಲಕೀÒ$¾ರೆಡ್ಡಿ, ಕಿಸಾನ್ ಪಂಚಾಯಿತಿಅಧ್ಯಕ್ಷ ಚಂದ್ರಗೌಡ, ಲಾಲ್ ಬಹದ್ದೂರಶಾಸ್ತ್ರೀ ಕೇಂದ್ರ ಪ್ರಭಾರಿ ಸಿ.ಕೆ. ಪ್ರಕಾಶ್ ಇವರುವಿದ್ಯಾರ್ಥಿಗಳಿಗೆ ಧ್ಯಾನ, ಪ್ರಾಣಾಯಾಮ, ಆಸನಮಾಡಿಸುತ್ತ ಅದರ ಉಪಯುಕ್ತತೆಯ ಬಗ್ಗೆವಿವರಿಸಿದರು.