ಬಳ್ಳಾರಿ: ಸನ್ಮಾರ್ಗ ಗೆಳೆಯರಬಳಗ ಸದ್ದಿಲ್ಲದೆ ಸಾಮಾಜಿಕ ಸೇವಾಕಾರ್ಯಮಾಡಿ, ಉತ್ತಮ ಸಮಾಜನಿರ್ಮಾಣ ಮಾಡುವ ಕೆಲಸಮಾಡುತ್ತಿದೆ. ಇದಕ್ಕೆ ಇಲಾಖೆ ನಿಮಗೆ ಅಭಿನಂದನೆ ತಿಳಿಸುತ್ತದೆ ಎಂದು ಜಿಲ್ಲಾಎಸ್ಪಿ ಸೈದುಲ್ ಅಡಾವತ್ ತಿಳಿಸಿದರು.ನಗರದ ಎಸ್‌ಪಿ ಕಚೇರಿ ಬಳಿಸನ್ಮಾರ್ಗ ಗೆಳೆಯರ ಬಳಗದಿಂದಹಮ್ಮಿಕೊಳ್ಳಲಾಗಿದ್ದ ಸನ್ಮಾರ್ಗ ಉದ್ಯೋಗಮಾರ್ಗದರ್ಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉದ್ಯಮಿಗಳಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಅನುಸಂಧಾನ ರೀತಿಯಲ್ಲಿ ಗೆಳೆಯರ ಬಳಗ ಕೆಲಸಕ್ಕೆಮುಂದಾಗಲಿದೆ. ಅರ್ಹರಿಗೆ ಉದ್ಯೋಗಸಿಗುವ ಮೂಲಕ ಉದ್ಯೋಗ ನೀಡುವ ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಕಳೆದ6 ವರ್ಷದಿಂದ ಸನ್ಮಾರ್ಗ ಗೆಳೆಯರಬಳಗ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.
ಸನ್ಮಾರ್ಗ ಸಹಾಯಹಸ್ತದಿಂದಬಡವರಿಗೆ 27 ಸಾವಿರ ಜೊತೆ ಬಟ್ಟೆಹಂಚಿಕೆ ಮಾಡಿದೆ. ಆರೋಗ್ಯ ಮತ್ತುಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಮುಖೀಯಾಗಿಕೆಲಸ ಮಾಡುತ್ತಿದೆ ಎಂದರು.ಡಾ| ಶಶಿಧರ ರೆಡ್ಡಿ ಮಾತನಾಡಿ,ಮೆಟ್ರೋಪಾಲಿಟಿನ್ ಸಿಟಿಗಳಲ್ಲಿ ಇಂತಹವ್ಯವಸ್ಥೆ ಇದೆ. ಅಲ್ಲಿ ಆದಾಯಕ್ಕಾಗಿಮಾಡುತ್ತಾರೆ. ಆದರೆ ಸನ್ಮಾರ್ಗವುಉಚಿತವಾಗಿ ಮಾಡುತ್ತಿರುವುದುಸಂತಸದ ಸಂಗತಿಯಾಗಿದೆ. ಉದ್ಯೋಗಆಕಾಂಕ್ಷಿಗಳಿಗೆ ಈ ಸಂದರ್ಭದಲ್ಲಿಕೆಲಸ ಪತ್ರಗಳನ್ನು ವಿತರಿಸಲಾಯಿತು.
ಫಾಮರ್ಸಿ, ಚಾಲನೆ ಹುದ್ದೆ, ಕಚೇರಿವ್ಯವಸ್ಥಾಪಕ ಸೇರಿದಂತೆ ಇತರರಿಗೆಉದ್ಯೋಗ ಪತ್ರ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸನ್ಮಾರ್ಗ ಗೆಳೆಯರಬಳಗದ ಅಧ್ಯಕ್ಷ ಎಚ್. ಲಕೀÒ$¾ಕಾಂತರೆಡ್ಡಿ, ಗೌರವ ಅಧ್ಯಕ್ಷ ಪಂಪಾಪತಿ,ಸನ್ಮಾರ್ಗ ಹಿರಿಯ ರಾಧಾಕೃಷ್ಣ,ಕಾರ್ಯದರ್ಶಿ ಕಪ್ಪಗಲ್ ಚಂದ್ರಶೇಖರಆಚಾರಿ ಸೇರಿದಂತೆ ಸನ್ಮಾರ್ಗದಸರ್ವ ಸದಸ್ಯರು ಇದ್ದರು. ಜಡೇಶ್‌ಎಮ್ಮಿಗನೂರು ಪ್ರಾರ್ಥನೆ, ಶಿಕ್ಷಕಎರಿìಸ್ವಾಮಿ ಸ್ವಾಗತಿಸಿದರು.