Advertisement

ಬೇಡಿಕೆ ಈಡೇರಿಕೆ ಭರವಸೆ; ಪ್ರತಿಭಟನೆ ಹಿಂದಕ್ಕೆ

03:50 PM Dec 12, 2021 | Team Udayavani |

ಬಳ್ಳಾರಿ: ನಗರದ ವಿಮ್ಸ್‌ ನಿರ್ದೇಶಕರ ಕಚೇರಿಎದುರು ಅನಿರ್ದಿಷ್ಟಾವ ಧಿ ಪ್ರತಿಭಟನೆಹಮ್ಮಿಕೊಂಡಿದ್ದ ಗುತ್ತಿಗೆ ಕಾರ್ಮಿಕರುಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಪ್ರತಿಭಟನೆ ಕೈಬಿಟ್ಟರು.ಕನಿಷ್ಠ ವೇತನ ಜಾರಿಗೊಳಿಸಬೇಕು.

Advertisement

200ಇದ್ದ ಸ್ಕಾ Âವೆಂಜರ್ನ್ನು (ಸ್ವತ್ಛತಾ ಕಾರ್ಮಿಕರು)ಕೇವಲ 64ಕ್ಕೆ ಇಳಿಸಿ ಅನ್ಯಾಯವೆಸಗಿದ್ದಕ್ರಮವನ್ನು ಖಂಡಿಸಿ ಇನ್ನಿತರೆ ಪ್ರಮುಖಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದಮೂರು ದಿನಗಳಿಂದ ವಿಮ್ಸ್‌ ನಿರ್ದೇಶಕರಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆಹಮ್ಮಿಕೊಳ್ಳಲಾಗಿತ್ತು. ಧರಣಿಯಲ್ಲಿ 400ಕ್ಕೂಹೆಚ್ಚು ಗುತ್ತಿಗೆ ಕಾರ್ಮಿಕರು ಭಾಗವಹಿಸಿವಿಮ್ಸ್‌ ಆಡಳಿತ, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ್ದಸಹಾಯಕ ಕಾರ್ಮಿಕ ಆಯುಕ್ತರು, ಜಿಲ್ಲಾಕಾರ್ಮಿಕ ಅ ಧಿಕಾರಿಗಳ ಉಪಸ್ಥಿತಿಯಲ್ಲಿನಿರ್ದೇಶಕರು, ಗುತ್ತಿಗೆದಾರರುಹಾಗೂ ಕಾರ್ಮಿಕ ಮುಖಂಡರ ಸಭೆನಡೆಸಲಾಯಿತು. ಈ ವೇಳೆ ಕಾನೂನಾತ್ಮಕವಾಗಿದೊರೆಯಬೇಕಾದ ಎಲ್ಲ ಸೌಲಭ್ಯಗಳುವಿಮ್ಸ್‌ ಗುತ್ತಿಗೆ ನೌಕರರಿಗೆ ಲಭಿಸಲಿವೆ.ಯಾವುದೇ ಲೋಪಗಳು ಆಗದಂತೆಕ್ರಮಕೈಗೊಳ್ಳಲಾಗುವುದು ಎಂಬ ಭರವಸೆಯ ನೀಡಲಾಯಿತು.

ಬಾಕಿಯಿರುವ ವೇತನಗುತ್ತಿಗೆ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಜಮಾಮಾಡಲಾಯಿತು. ಇದಾದ ನಂತರವೇ ಸದ್ಯದಮಟ್ಟಿಗೆ ಧರಣಿಯನ್ನು ಹಿಂಪಡೆಯಲಾಯಿತುಎಂದು ಧರಣಿನಿರತರು ತಿಳಿಸಿದ್ದಾರೆ.ಈ ವೇಳೆ ಎಐಯುಟಿಯುಸಿ ರಾಜ್ಯ ಅಧ್ಯಕ್ಷಕೆ. ಸೋಮಶೇಖರ್‌, ವಿಮ್ಸ್‌ ಗುತ್ತಿಗೆ ನೌಕರರಸಂಘದ ಕಾರ್ಯದರ್ಶಿ ಎ. ದೇವದಾಸ್‌,ಮುಖಂಡರಾದ ಡಾ| ಪ್ರಮೋದ್‌, ಸುರೇಶ್‌,ಲಕೀÒ$¾, ಹೊನ್ನೂರ್‌ ಬಿ, ಪಾರ್ವತಿ, ಚಂದ್ರಮ್ಮ,ದುರ್ಗಮ್ಮ, ಆರೋಗ್ಯ ಮೇರಿ, ಹುಲಗಪ್ಪಇದ್ದರು

Advertisement

Udayavani is now on Telegram. Click here to join our channel and stay updated with the latest news.

Next