Advertisement

ಪುನೀತ್‌ ಹೆಸರಲ್ಲಿ ಶಾಲೆ-ಆಸ್ಪತ್ರೆ

07:45 PM Nov 09, 2021 | Team Udayavani |

ಬಳ್ಳಾರಿ: ಕನ್ನಡ ಚಿತ್ರರಂಗದ ಮೇರು ನಟ ಪುನೀತ್‌ ರಾಜ್‌ಕುಮಾರ್‌ ನಿಧನರಾದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಮಾಜಿ ಸಚಿವಜಿ. ಜನಾರ್ಧನರೆಡ್ಡಿ, ಅವರ ಹೆಸರಲ್ಲಿ ಬಳ್ಳಾರಿಯಲ್ಲಿ ಬಡ ಮಕ್ಕಳಿಗಾಗಿ ಉಚಿತ ವಸತಿ ಶಾಲೆ ತೆರೆಯುವ,ಆಸ್ಪತ್ರೆ ಸ್ಥಾಪಿಸುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

Advertisement

ನಗರ ಹೊರವಲಯದ ಬೆಳಗಲ್ಲು ರಸ್ತೆಯಲ್ಲಿನರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಮೆಮೋರಿಯಲ್‌ವಿಶ್ವಭಾರತಿ ಕಲಾನಿಕೇತನ ಬುದ್ಧಿಮಾಂದ್ಯ ಮಕ್ಕಳಶಾಲೆ ಆವರಣದಲ್ಲಿ ಸೋಮವಾರ ನಡೆದಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪತ್ನಿ ಲಕ್ಷ್ಮಿ ಅರುಣಾ,ನಗರ ಶಾಸಕ, ಸಹೋದರ ಜಿ.ಸೋಮೇಖರರೆಡ್ಡಿ ಅವರೊಂದಿಗೆ ಜನಾರ್ಧನರೆಡ್ಡಿ ಪುನೀತ್‌ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ನಟ ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆಇಂತಹ ಕಾರ್ಯಕ್ರಮ ಮಾಡುವ ಸಂದರ್ಭಬರುತ್ತೆ ಎಂದು ಅಂದುಕೊಂಡಿರಲಿಲ್ಲ. ಪುನೀತ್‌ಅವರು ರಾಜ್ಯ ಕಂಡಿರುವ ಅಪೂರ್ವ ಕಲಾವಿದ.ಪಾಕಿಸ್ಥಾನದಲ್ಲೂ ಇಂಜಿನೀಯರ್‌ ಒಬ್ಬರು ಪುನೀತ್‌ಅಭಿಮಾನಿಯಾಗಿದ್ದರು. ಡಾ| ರಾಜ್‌ಕುಮಾರ್‌ಚಿತ್ರಗಳಿಂದ ಸಂಸ್ಕಾರ ಪಡೆದಂತೆ ಪುನೀತ್‌ ಅವರಚಿತ್ರಗಳು ಸಹ ಸಾಮಾಜಿಕ ಕಳಕಳಿಯಿಂದ ಕೂಡಿದ್ದವು.

ನನ್ನ ಮಗನ ಚಿತ್ರರಂಗ ಪ್ರವೇಶಕ್ಕೆ ಸಂಬಂಧಿಸಿದಂತೆಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದರು.ಹೀಗೆ ಕೊನೆಯ ದಿನಗಳಲ್ಲಿ ತುಂಬ ಹತ್ತಿರವಾಗಿದ್ದರುಎಂದ ಜನಾರ್ಧನರೆಡ್ಡಿ, ಹಂಪಿಯಲ್ಲಿ ಹಮ್ಮಿಕೊಂಡಿದ್ದಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕದಲ್ಲಿಗಣ್ಯವ್ಯಕ್ತಿಗಳಿದ್ದ ವೇದಿಕೆಯಲ್ಲಿ ಪುನೀತ್‌ ಅವರಿಗೆಸನ್ಮಾನಿಸಿದ್ದನ್ನು ಮೆಲುಕು ಹಾಕಿದರು. ಅವರಿಗೆಪದ್ಮಶ್ರೀ ಪ್ರಶಸ್ತಿ ಕೊಡಿಸಲು ಸರ್ಕಾರ ತನ್ನ ಕೆಲಸಮಾಡಲಿ ಎಂದರು.

ಪುನೀತ್‌ ಅವರು 16ಕ್ಕೂ ಹೆಚ್ಚು ವೃದ್ಧಾಶ್ರಮಗಳನ್ನುನಡೆಸುತ್ತಿದ್ದರು. 2 ಸಾವಿರಕ್ಕೂ ಹೆಚ್ಚು ಬಡ ಮಕ್ಕಳಿಗೆಉಚಿತವಾಗಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರು.ಲೆಕ್ಕವಿಲ್ಲದಷ್ಟು ಜನರಿಗೆ ದಾನಧರ್ಮಗಳನ್ನುಮಾಡಿದ್ದಾರೆ. ಹೀಗೆ ಸೇವಾ ಕಾರ್ಯಕ್ರಮದಲ್ಲಿತೊಡಗಿರುವ ಪುನೀತ್‌ ಅವರು ನಮ್ಮೆಲ್ಲರಕಣ್ತೆತೆರೆಸಿದ್ದಾರೆ. ಹಾಗಾಗಿ ಅವರಂತೆ ನಾವು ಸಹಬಳ್ಳಾರಿಯಲ್ಲಿ ಉಚಿತ ಶಿಕ್ಷಣ ನೀಡಲು ಶೀಘ್ರದಲ್ಲೇಶಾಲೆ ತೆರೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರ ಶಾಸಕ ಜಿ.ಸೋಮಶೇಖರ ರೆಡ್ಡಿಮಾತನಾಡಿ, ನಟ ಪುನೀತ್‌ ರಾಜ್‌ಕುಮಾರ್‌,ಸಹೋದರ ಜನಾರ್ಧನರೆಡ್ಡಿ ಇಬ್ಬರ ಕನಸು ಒಂದೇ ಆಗಿದೆ. ಜನಾರ್ದನರೆಡ್ಡಿ 1996ರಲ್ಲೇ ಬಳ್ಳಾರಿಯಲ್ಲಿ ವೃದ್ಧಾಶ್ರಮ ಸ್ಥಾಪಿಸಿ ಸೇವೆಯಲ್ಲಿ ತೊಡಗಿದ್ದಾರೆ.ಪುನೀತ್‌ 46 ವರ್ಷಕ್ಕೆ ಮೃತಪಟ್ಟಿರುವುದು ನೋವುತಂದಿದೆ. ಬಳ್ಳಾರಿಯ ಹೊಸ ಬಸ್‌ ನಿಲ್ದಾಣಕ್ಕೆಪುನೀತ್‌ ಅವರ ಹೆಸರನ್ನು ಇಡಲು ಸರ್ಕಾರದ ಜತೆಗೆಸಮಾಲೋಚನೆ ನಡೆಸಲಾಗುವುದು ಎಂದ ಅವರು,ತಂದೆಯವರ ಮಾತಿನಂತೆ ಕೆಎಂಎಫ್‌ ಜಾಹೀರಾತನ್ನುಉಚಿತವಾಗಿ ಮಾಡಿಕೊಟ್ಟಿದ್ದರು.

ಬಳ್ಳಾರಿಯಲ್ಲಿ ರಾಜ್‌ಕುಮಾರ್‌ ಪಾರ್ಕ್‌, ರಸ್ತೆಗೆ ರಾಜ್‌ಕುಮಾರ್‌ ಹೆಸರುನಾಮಕರಣ ಮಾಡಿದಾಗಿನಿಂದ ನಮ್ಮೊಡನೆ ಉತ್ತಮಬಾಂಧವ್ಯ ಹೊಂದಿದ್ದರು ಎಂದು ಸ್ಮರಿಸಿದರು. ಬಳಿಕವೃದ್ಧಾಶ್ರಮದಲ್ಲಿನ ವೃದ್ಧರಿಗೆ ಬಟ್ಟೆಗಳನ್ನು ವಿತರಿಸಿದರು.ಬುಡಾ ಅಧ್ಯಕ್ಷ ಪಾಲಣ್ಣ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next