ಬಳ್ಳಾರಿ: ಉಪಚುನಾವಣೆ ನಡೆದ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಮುಖ್ಯಮಂತ್ರಿಗಳೊಬ್ಬರೇ ಕಾರಣರಲ್ಲ.ಸೋಲಿನ ಹೊಣೆಯನ್ನು ಬಿಜೆಪಿಸಾಮೂಹಿಕವಾಗಿ ವಹಿಸಿಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಹಾನಗಲ್, ಸಿಂ ದಗಿ ಎರಡೂಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳುಗೆಲ್ಲಬೇಕಿತ್ತು. ಆದರೆ ಸಿಂದ ಗಿಯಲ್ಲಿ ಗೆದ್ದು,ಹಾನಗಲ್ಲದಲ್ಲಿ ಸೋಲಾಗಿದೆ.
ಬಸವರಾಜಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕಮೊದಲ ಉಪಚುನಾವಣೆಯಾಗಿದ್ದುಮುಖ್ಯಮಂತ್ರಿಗಳು ಸಹ ಕ್ಷೇತ್ರದ ಪ್ರತಿಗ್ರಾಮಕ್ಕೂ ಹೋಗಿ ಪ್ರಚಾರ ಮಾಡಿದ್ದಾರೆ.ಆದರೆ ಸಿಂದ ಗಿ ಕ್ಷೇತ್ರದಲ್ಲಿ ನಿರೀಕ್ಷೆಗೂಮೀರಿ ಫಲಿತಾಂಶ ಬಂದಿದ್ದು, ಹಾನಗಲ್ಲ ಕ್ಷೇತ್ರದಲ್ಲಿ ದೊಡ್ಡ ಹಿನ್ನಡೆಯಾಗಿದೆ.
ಎಲ್ಲಿ ಲೋಪದೋಷವಾಗಿದೆಎಂಬುದನ್ನು ಪರಿಶೀಲಿಸಲಾಗುವುದು. ಏಕೆಹಿನ್ನಡೆಯಾಯಿತು ಎಂಬ ಬಗ್ಗೆಪರಾಮರ್ಶೆ ಮಾಡಲಾಗುವುದುಎಂದರು.ಹಾನಗಲ್, ಸಿಂದ ಗಿಉಪಚುನಾವಣೆಗಳ ಫಲಿತಾಂಶಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂಪಕ್ಷಗಳಿಗೂ ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‌ನವರು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಎಂದಿದ್ದರು. ಸಿಂದ ಗಿಯಲ್ಲಿ ಮಾಜಿಶಾಸಕರ ಮಗನನ್ನೇ ಕಣಕ್ಕೆ ಇಳಿಸಿದರು.
ಜೆಡಿಎಸ್‌ನವರು ಅಲ್ಪಸಂಖ್ಯಾತರನ್ನುಕಣಕ್ಕಿಳಿಸಿ ತಾವು ಜಾತ್ಯತೀತ ಎನ್ನುವುದನ್ನುತೋರಿಸಲು ಪ್ರಯತ್ನಿಸಿದರು. ಆದರೆಉಪಚುನಾವಣೆಯಲ್ಲಿ ಜನ ಕಾಂಗ್ರೆಸ್‌ನ್ನು,ಜಾತಿ ರಾಜಕಾರಣವನ್ನು ತಿರಸ್ಕರಿಸಿದ್ದಾರೆ.
ಸಿಂದ ಗಿ ಕ್ಷೇತ್ರದಲ್ಲಿ ಜಾತಿ ವಿಷಬೀಜ ಬಿತ್ತಿ ಗೆಲ್ಲಲುಯತ್ನಿಸಿದ್ದ ಕಾಂಗ್ರೆಸ್ ಪಕ್ಷ ಪರಾಭವಗೊಂಡಿತುಎಂದು ದೂರಿದರು.ಸೋಲಿಗೆ ನೂರು ಕಾರಣ ಹುಡುಕಬಹುದು.ಗೆಲುವಿಗೆ ನಾನೇ ಕಾರಣ ಎನ್ನುವುದುಸಹಜ. ಆದರೂ, ಸೋಲು ಸೋಲೇ. ಎಲ್ಲಿತಪ್ಪಾಗಿದೆ ಎಂಬುದನ್ನು ಹುಡುಕಲಾಗುವುದು.
ಕಾಂಗ್ರೆಸ್‌ಗೆ ಜಾತಿ-ಧರ್ಮ ಬಿಟ್ಟು ಬೇರೆರಾಜಕೀಯ ಗೊತ್ತಿಲ್ಲ. ಉಪಚುನಾವಣೆಯಫಲಿತಾಂಶ ಮುಂದಿನ ಚುನಾವಣೆಯದಿಕ್ಸೂಚಿಯಲ್ಲ. ಈ ಉಪಚುನಾವಣೆಸೇರಿ ಈ ಹಿಂದೆ 17 ಉಪಚುನಾವಣೆಗಳಲ್ಲಿಬಿಜೆಪಿ ಗೆದ್ದಿದೆ. ಉಪಚುನಾವಣೆಫಲಿತಾಂಶ ಮುಂದಿನ ದಿಕ್ಸೂಚಿ ಎಂಬುದನ್ನುಕಾಂಗ್ರೆಸ್‌ನವರು ಒಪ್ಪುತ್ತಾರೋ ಎಂದುಪ್ರಶ್ನಿಸಿದರು.