Advertisement

ಎನ್‌ಇಪಿಯಲ್ಲಿದೆ ನವಭಾರತ ನಿರ್ಮಾಣದ ಕನಸು

01:00 PM Oct 29, 2021 | Team Udayavani |

ಬಳ್ಳಾರಿ: ಪ್ರಧಾನಿ ನರೇಂದ್ರಮೋದಿಯವರು ನವಭಾರತನಿರ್ಮಾಣದ ಕನಸಿನೊಂದಿಗೆ ಹೊಸರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆತಂದಿದ್ದಾರೆ ಎಂದು ಸಾರಿಗೆ ಸಚಿವಬಿ.ಶ್ರೀರಾಮುಲು ಹೇಳಿದರು.

Advertisement

ನಗರದ ಬಿಐಟಿಎಂ ಕಾಲೇಜಿನಸಭಾಂಗಣದಲ್ಲಿ ಶ್ರೀ ಕೃಷ್ಣ ದೇವರಾಯವಿವಿ, ಭಾರತೀಯ ಶಿಕ್ಷಣ ಮಂಡಲಉತ್ತರ ಪ್ರಾಂತದಿಂದ ಹಮ್ಮಿಕೊಂಡರಾಷ್ಟ್ರೀಯ ಶಿಕ್ಷಣ ನೀತಿ -2020ಅನುಷ್ಠಾನ ಶೈಕ್ಷಣಿಕ ಭಾಗಿದಾರರಸಮಗ್ರ ಬದಲಾವಣೆ ಕುರಿತ ವಿಚಾರಸಂಕಿರಣ, ಎನ್‌ಇಪಿ 2020 ರ ಅನ್ವಯಪೂರಕ ಯೋಜನೆಗಳ ಸಮಾರಂಭದಲ್ಲಿಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ21ನೆಯ ಶತಮಾನ ಭಾರತದಶತಮಾನ ಆಗಬೇಕು. ಭಾರತವಿಶ್ವಗುರು ಆಗಬೇಕು. ಜಗತ್ತು ವಿಜ್ಞಾನ,ತಂತ್ರಜ್ಞಾನ, ಕೈಗಾರಿಕೆ, ಕೃಷಿ ಸೇರಿ ಹಲವುಕ್ಷೇತ್ರಗಳಲ್ಲಿ ಬದಲಾವಣೆಯಾಗುತ್ತಿದೆ.ಆದರೆ, ಈ ಎಲ್ಲ ವಲಯಗಳಲ್ಲೂಭಾರತ ಬದಲಾವಣೆಯಾಗಬೇಕು.

ಬಲಿಷ್ಠ ಭಾರತ ನಿರ್ಮಾಣವಾಗಬೇಕು.ದೇಶ ಪ್ರಗತಿಯಲ್ಲಿ ಸಾಗಬೇಕುಎಂದರೆ, ಮೊದಲು ಶಿಕ್ಷಣದಲ್ಲಿಬದಲಾವಣೆಯಾಗಬೇಕು. ಆಹಿನ್ನೆಲೆಯಲ್ಲಿ ನೂತನ ಶಿಕ್ಷಣ ನೀತಿಯನ್ನುಜಾರಿಗೆ ತರಲಾಗುತ್ತಿದ್ದು, ಎನ್‌ಇಪಿದೂರದೃಷ್ಟಿ ಕಾರ್ಯಕ್ರಮವಾಗಿದೆ.ನವಭಾರತ ನಿರ್ಮಾಣಕ್ಕೆ ಶಿಕ್ಷಣದಲ್ಲಿಬದಲಾವಣೆ ಮಹತ್ವದ್ದಾಗಿದೆ ಎಂದುಪ್ರತಿಪಾದಿಸಿದರು

.ನೂತನ ಎನ್‌ಇಪಿ ಶಿಕ್ಷಣದಲ್ಲಿಮಾತೃಭಾಷೆ ಕಲಿಸುವುದರ ಜತೆಗೆಕೌಶಲ್ಯ ಕಲಿಕೆ, ಕ್ರಿಯಾತ್ಮಕ ಕಲಿಕೆಇರಲಿದೆ. ಮ್ಯಾನೇಜೆ¾ಂಟ್‌ ಕೋಟಾದಡಿವೃತ್ತಿಪರ ಶಿಕ್ಷಣ ಪಡೆಯುತ್ತಿರುವಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆವಿದ್ಯಾರ್ಥಿ ವೇತನ ಮುಂದುವರಿಸುವಸಂಬಂಧ ಕೇಂದ್ರ ಸರ್ಕಾರದ ಜೊತೆಮಾತುಕತೆ ನಡೆಸಲಾಗಿದೆ.

Advertisement

ಶೀಘ್ರ ಅದುಮತ್ತೆ ಆರಂಭ ಆಗಲಿದೆ ಎಂದರು.ಕೋವಿಡ್‌ ಸೋಂಕು 1,2ನೇ ಅಲೆಯನ್ನು ಸಮರ್ಥವಾಗಿನಿಭಾಯಿಸಿರುವ ವೈದ್ಯಕೀಯ ಸಚಿವ ಅಶ್ವಥ್‌ ನಾರಾಯಣ ಅವರು,ಸಂಭವನೀಯ ಮೂರನೇ ಅಲೆಬಂದರೂ, ವಿದ್ಯಾರ್ಥಿಗಳಿಗೆ ಕಲಿಕೆ ಸಮಸ್ಯೆಯಾಗದೆ, ಮನೆಯಲ್ಲೇಕಲಿಯುವಂತೆ ಉಚಿತವಾಗಿ ಲ್ಯಾಪ್‌ಟ್ಯಾಪ್‌ಗ್ಳನ್ನು ವಿತರಿಸಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next