Advertisement

ಬೇಡಿಕೆ ಈಡೇರಿಕೆಗಾಗಿ ಶಿಕ್ಷಕರ ಸಂಘ ಪ್ರತಿಭಟನೆ

02:01 PM Oct 26, 2021 | Team Udayavani |

ಬಳ್ಳಾರಿ: ಶಿಕ್ಷಕರ ವೃಂದ ಮತ್ತು ನೇಮಕಾತಿನಿಯಮಗಳಿಗೆ ತಿದ್ದುಪಡಿ ತರಬೇಕು. ಸೇವಾಅವಧಿ ಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದುಬಾರಿ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಪದಾ ಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ನಗರದಲ್ಲಿಸೋಮವಾರ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಶಿಕ್ಷಕರಸಂಘದಿಂದ ಹಲವು ಮನವಿ ಪತ್ರಗಳನ್ನು ಸರ್ಕಾರಕ್ಕೆಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರೂ ಕ್ಯಾರೆಎನ್ನುತ್ತಿಲ್ಲ. ಹಾಗಾಗಿ ಈಚೆಗೆ ತುಮಕೂರಿನಲ್ಲಿನಡೆದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಂಘದಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪದವೀಧರ ಶಿಕ್ಷಕರ ಸಮಸ್ಯೆಗಳನ್ನುಬಗೆಹರಿಸಬೇಕು. ವೃಂದ ಮತ್ತು ನೇಮಕಾತಿನಿಯಮಗಳನ್ನು ತಿದ್ದುಪಡಿ ಮಾಡಬೇಕು. ಸೇವಾಅವ ಧಿಯಲ್ಲಿ ಒಂದು ಬಾರಿ ಶಿಕ್ಷಕರು ಬಯಸುವಜಿಲ್ಲೆಗೆ ವರ್ಗಾವಣೆಗೆ ಅವಕಾಶ ನೀಡಬೇಕು.

ಮುಖ್ಯಗುರುಗಳಿಗೆ 15,20,25,30 ವರ್ಷದವೇತನ ಬಡ್ತಿ ನೀಡಬೇಕು. ನೂತನ ಪಿಂಚಣಿಯೋಜನೆ (ಎನ್‌ಪಿಎಸ್‌) ರದ್ದುಗೊಳಿಸಬೇಕು.ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕಶಿಕ್ಷಕ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು ಸೇರಿ ಇನ್ನಿತರೆ ಬೇಡಿಕೆಗಳನ್ನುಈಡೇರಿಸಬೇಕು ಎಂದು ಆಗ್ರಹಿಸಿ ಈಗಾಗಲೇಅ. 4ರಿಂದ ಕೈಗೊಂಡಿರುವ ತರಗತಿಗಳಬಹಿಷ್ಕಾರ ಮುಂದುವರೆಸಲಾಗುವುದು.

Advertisement

ಅ.21ರಿಂದ 29ರವರೆಗೆ ಕಪ್ಪುಪಟ್ಟಿ ಧರಿಸಿ ಶೈಕ್ಷಣಿಕಚಟುವಟಿಕೆಗಳನ್ನು ನಿರ್ವಹಿಸಿ ಸರ್ಕಾರದ ಗಮನಸೆಳೆಯಲಾಗುತ್ತದೆ. ಅ. 30ರಂದು ಮಧ್ಯಾಹ್ನದಬಿಸಿಯೂಟವನ್ನು ನಿರ್ಲಕ್ಷಿಸುವುದು.ನ.11 ರಿಂದ ನ.18ರ ವರೆಗೆ ಸ್ಯಾಟ್ಸ್‌ಮಾಹಿತಿಯನ್ನು ಅಪ್‌ಡೇಟ್‌ ಮಾಡದೆ ಶಿಕ್ಷಕರಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು.ರಾಜ್ಯ, ಜಿಲ್ಲಾ, ತಾಲೂಕು ಸಂಘದ ಪದಾಧಿಕಾರಿಗಳು ರಾಜ್ಯಮಟ್ಟದ ರ್ಯಾಲಿ ಮತ್ತು ಧರಣಿನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮುನ್ನನಗರದ ಕೋಟೆ ಪ್ರದೇಶದ ಸಂತಜಾನ್‌ ಶಾಲೆಆವರಣದಿಂದ ಮೆರವಣಿಗೆ ಮೂಲಕ ತೆರಳಿದಪ್ರತಿಭಟನಾಕಾರರು ಸಾರ್ವಜನಿಕ ಶಿಕ್ಷಣ ಇಲಾಖೆಮೂಲಕ ಶಿಕ್ಷಣ ಸಚಿವರಿಗೆ, ಇಲಾಖೆಯ ಪ್ರಧಾನಕಾರ್ಯದರ್ಶಿಗಳು, ಆಯುಕ್ತರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷಸಿ.ನಿಂಗಪ್ಪ ಸೇರಿದಂತೆ ಸಂಘದ ಹಲವು ಪದಾಧಿಕಾರಿಗಳು, ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next