Advertisement

ಕಸ ವಿಲೇವಾರಿ ಜಾಗ ಉಳಿಸಿಕೊಳ್ಳಲಿ

04:45 PM Jun 15, 2022 | Team Udayavani |

ಬಳ್ಳಾರಿ: ನಗರದ ರೂಪನಗುಡಿ ರಸ್ತೆಯಲ್ಲಿರುವ ಹಿಂದೆಮಲ, ಮೂತ್ರ ವಿಲೇವಾರಿಗೆ ಬಳಸುತ್ತಿದ್ದ ಆಸ್ತಿಯನ್ನುಪಾಲಿಕೆಯವರು ಕಾಪಾಡಿಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಕಾರಿ ಪವನ್‌ಕುಮಾರ್‌ ಮಾಲಪಾಟಿ, ಪಾಲಿಕೆ ಆಯುಕ್ತೆಪ್ರೀತಿ ಗೆಹೊÉàಟ್‌ಗೆ ಯುವಸೇನಾ ಸೋಷಿಯಲ್‌ಆಕ್ಷನ್‌ ಕ್ಲಬ್‌ ವತಿಯಿಂದ ಮಂಗಳವಾರ ಮನವಿಸಲ್ಲಿಸಲಾಯಿತು.1936, 1937ರಲ್ಲಿ ಒಟ್ಟು ಆಸ್ತಿ 72.6 ಎಕರೆಭೂಮಿಯನ್ನು ನಗರದ ಒಳಚರಂಡಿ ವ್ಯವಸ್ಥೆಗಾಗಿಈ ಭೂಮಿ ವಶಪಡಿಸಿಕೊಳ್ಳಲಾಗಿತ್ತು.

Advertisement

ಬಳ್ಳಾರಿಮುನಿಸಿಪಲ್‌ ಕೌನ್ಸಿಲ್‌ ಹೆಸರಿನಲ್ಲಿ ಜಾಗ ಇದೆ. ಈಭೂಮಿ ಆಗಿನ ಕಾಲದಲ್ಲಿ ಎಲ್ಲ ಮನೆ-ಮನೆಗಳಲ್ಲಿಪಿಟ್ಟುಗಳ ಮಲಮೂತ್ರ ತೆಗೆದು ಆ ಸ್ಥಳದಲ್ಲಿಹಾಕುವುದಕ್ಕೆ ಬಳಸಲಾಗುತ್ತಿತ್ತು. ಕಾಲಕ್ರಮೇಣ1975ರಲ್ಲಿ ಒಳಚರಂಡಿ ವ್ಯವಸ್ಥೆ ಪ್ರಾರಂಭವಾಗಿದ್ದು,ಆ ಸ್ಥಳವನ್ನು ನಗರದಲ್ಲಿ ಕಸ ಸಂಗ್ರಹ ಮಾಡಿ ಕಸವನ್ನುಒಂದು ಸ್ಥಳದಲ್ಲಿ ಹಾಕುವಂತೆ ಕಸ ವಿಲೇವಾರಿ ಮಾಡಲುಉಪಯೋಗ ಮಾಡಿಕೊಳ್ಳಲಾಯಿತು.

ನಗರ ಬೆಳೆದಂತೆಅದರ ಸುತ್ತ ಮನೆಗಳು ನಿರ್ಮಾಣ ಆಗುತ್ತಿದ್ದಂತೆಹೋರಾಟಗಾರರು, ಸಂಘ-ಸಂಸ್ಥೆಗಳು ಮತ್ತುಅಲ್ಲಿನ ಸ್ಥಳೀಯರು ಹೋರಾಟದ ಮೂಲಕ ಅಲ್ಲಿ ಕಸಹಾಕುತ್ತಿರುವುದನ್ನು (ಸಂಗ್ರಹಿಸುವುದನ್ನು) ನಿಲ್ಲಿಸುವಲ್ಲಿಯಶಸ್ವಿಯಾದರು.ಇತ್ತೀಚೆಗೆ ರಾಜಕೀಯ ಮುಖಂಡರುಆ ಸ್ಥಳವನ್ನು ಭೂ ಕಬಾj ಮಾಡುವುದಕ್ಕೆ ಪ್ರಯತ್ನಮಾಡುತ್ತಿದ್ದಾರೆ ಎಂಬುದು ನಗರದಲ್ಲಿ ಗಾಳಿ ಸುದ್ಧಿಹರಡಿದೆ. ಇದಕ್ಕಿಂತ ಮುಂಚಿತವಾಗಿ ಜಿಲ್ಲಾ ಧಿಕಾರಿಗಳತಾಂತ್ರಿಕ ಸಹಾಯಕರು ಪದನಿಮಿತ್ತ ಭೂ ದಾಖಲೆಗಳಉಪ ನಿರ್ದೇಶಕರು ಬಳ್ಳಾರಿ ಇವರ ನ್ಯಾಯಾಲಯಸುಮಾರು 8 ಎಕರೆಯಷ್ಟು ಜಾಗ ಭೂ ಕಬಾj ಮಾಡಿದಪಕ್ಷದಲ್ಲಿ ಇದು ಮಹಾನಗರ ಪಾಲಿಕೆ ಸ್ಥಳವೆಂದುಎದುರುದಾರರು ಸೃಷ್ಟಿಸಿರುವ ಎಲ್ಲ ದಾಖಲೆಗಳು ಸುಳ್ಳುಎಂದು ತೀರ್ಪು ನೀಡಿದ್ದಾರೆ.

ಕಕ್ಷಿದಾರರಿಗೆ ಶಿಕ್ಷೆಯೂಆಯಿತು. ಆದರೆ, ಭೂ ಮಾಪನ ಇಲಾಖೆಯಲ್ಲಿ ಆಸ್ತಿಪ್ರಕಟಣಾ ಪತ್ರ, ನಕಲಿ ಆಸ್ತಿ ಪ್ರಕಟಣಾ ಪತ್ರವನ್ನು ಭೂಮಾಪನಾ ಇಲಾಖೆಯವರು ಸೃಷ್ಟಿ ಮಾಡಿದ್ದಾರೆ.ಭೂ ಕಬಾjದಾರರೊಂದಿಗೆ ಶಾಮೀಲಾಗಿರುವಇಂತಹ ಭೂಮಾಪನಾ ಇಲಾಖೆ ಅ ಧಿಕಾರಿಗಳಿಗೆ ಮತ್ತುನೋಂದಣಿ ಅಧಿಕಾರಿಗಳಿಗೆ ಯಾವ ಶಿಕ್ಷೆ ವಿಧಿಸಲಾಯಿತುಎಂಬುದು ತಿಳಿದುಬಂದಿಲ್ಲ. ಸರ್ಕಾರಿ ವೇತನ ಪಡೆದು,ಸರ್ಕಾರಕ್ಕೆ ದ್ರೋಹ ಬಯಸಿದ ಭೂ ಕಬಾjದಾರರಿಗೆಸಹಾಯ-ಸಹಕಾರ ನೀಡಿದ ಇಂತಹ ಭೂ ಮಾಪನಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕೆಂದುಕ್ಲಬ್‌ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಪತ್ರದಲ್ಲಿ ಮನವಿಮಾಡಿದ್ದಾರೆ. ಈ ವೇಳೆ ಎಸ್‌.ಕೃಷ್ಣ, ಜಿ.ಎಂ. ಭಾಷ,ಅಲುವೇಲ್‌ ಸುರೇಶ್‌ ಸಲಾವುದ್ದೀನ್‌ ಎಸ್‌.ಆರ್‌.,ಎಂ.ಕೆ. ಜಗನ್ನಾಥ, ಉಪ್ಪಾರ ಮಲ್ಲಪ್ಪ, ವೀರೇಶ್‌,ತೇಜುಪಾಟೀಲ್‌, ಪಿ.ನಾರಾಯಣ, ಎಂ.ಅಭಿಷೇಕ್‌ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next