Advertisement

ವನ್ಯಜೀವಿ-ಮೀಸಲು ಅರಣ್ಯ ಸಂರಕÒಣೆಗೆ ಒತ್ತು

05:57 PM Mar 26, 2022 | Team Udayavani |

ಬಳ್ಳಾರಿ: ದರೋಜಿ ಮತ್ತುತೋರಣಗಲ್ಲು ಮೀಸಲು ಅರಣ್ಯಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆ,ಅರಣ್ಯೀಕರಣ ಮತ್ತು ಅರಣ್ಯ ರಕ್ಷಣೆಗೆಜೆಎಸ್‌ಡಬ್ಲ್ಯುಫೌಂಡೇಶನ್‌ ಮುಂದಾಗಿದ್ದು ಈಸಂಬಂಧ ಅರಣ್ಯ ಇಲಾಖೆ ಜೊತೆಗೆತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು,ಮುಂದಿನ 5 ವರ್ಷದವರೆಗೆಚಾಲ್ತಿಯಲ್ಲಿರುತ್ತದೆ ಎಂದು ಜೆಎಸ್‌ಡಬ್ಲ್ಯುಫೌಂಡೇಶನ್‌ ಅಧ್ಯಕ್ಷೆ ಸಂಗೀತಾಜಿಂದಾಲ್‌ ಹೇಳಿದ್ದಾರೆ.

Advertisement

ಈ ಕುರಿತುಪ್ರಕಟಣೆ ನೀಡಿರುವ ಅವರು, ಜೀವವೈವಿಧ್ಯವನ್ನು ಬಲಪಡಿಸಲು ಮತ್ತುಸ್ಥಳೀಯ ಸಸ್ಯ ಮತ್ತು ಪ್ರಾಣಿಗಳಿಗೆಸುರಕ್ಷಿತ ಆವಾಸ ಸ್ಥಾನವನ್ನುಒದಗಿಸಿಕೊಡಲು ಈ ತಿಳಿವಳಿಕೆ ಒಪ್ಪಂದಸಹಕಾರಿಯಾಗಲಿವೆ. ಅರಣ್ಯೀಕರಣ,ಬಿದಿರು ನೆಡುವಿಕೆ, ಗಡಿಬಲವರ್ಧನೆ,ತಪಾಸಣೆ ಪಥಗಳ ನಿರ್ಮಾಣ,ಪಕ್ಷಿಗಳ ಆಶ್ರಯಕ್ಕಾಗಿ ದ್ವೀಪಗಳರಚನೆ, ಚೈನ್‌-ಲಿಂಕೆ¾ಶ್‌ ಮತ್ತುಚೆಕ್‌ ಡ್ಯಾಂ ನಿರ್ಮಾಣ ಸೇರಿದಂತೆವಿವಿಧ ಕೆಲಸವನ್ನು ದರೋಜಿ ಮತ್ತುತೋರಣಗಲ್ಲು ಮೀಸಲು ಅರಣ್ಯದಲ್ಲಿಕೈಗೊಳ್ಳಲಾಗುವುದು ಎಂದವರುತಿಳಿಸಿದ್ದಾರೆ.

ಅರಣ್ಯ ರಕ್ಷಣೆ ಸಲುವಾಗಿಅಗ್ನಿಶಾಮಕ ರಕ್ಷಣಾ ಸಾಧನಗಳು,ಕ್ಯಾಮೆರಾ ಟ್ರಾÂಪ್‌, ನೈಟ್‌ ವಿಷನ್‌,ಸ್ಪಾಟಿಂಗ್ಸೋಪ್‌ಗ್ಳು ಮತ್ತುಡ್ರೋಣ್‌ನಂಥ ಸಂಪನ್ಮೂಲಗಳನ್ನುಸಹ ಒದಗಿಸಲಾವುದು. ಈ ಅವಧಿಯಲ್ಲಿ ಜೈವಿಕ ಸಂಪನ್ಮೂಲಗಳಅಧ್ಯಯನವನ್ನು ನಡೆಸಲಾಗುತ್ತದೆ.ಮೀಸಲು ಅರಣ್ಯ ರಕ್ಷಣೆ ಜತೆಗೆಬಳ್ಳಾರಿಯಲ್ಲಿ 5.5 ಎಕರೆಯಲ್ಲಿ ಟ್ರೀಪಾರ್ಕ್‌ ಅಭಿವೃದ್ಧಿಪಡಿಸಲು ಸಹಜೆಎಸ್‌ಡಬ್ಲ್ಯುಫೌಂಡೇಶನ್‌ ಮುಂದಾಗಿದೆ. ಇದರಸಂಬಂಧ ಮತ್ತೂಂದು ತಿಳಿವಳಿಕೆಒಪ್ಪಂದಕ್ಕೆ ಸಹಿ ಹಾಕಿದೆ.

ಜನರ ಆರೋಗ್ಯಮತ್ತು ಗುಣವಟ್ಟವನ್ನು ಸುಧಾರಿಸಲುಜೆಎಸ್‌ಡಬ್ಲ್ಯುಸಂಸ್ಥೆಯು ಇಲ್ಲಿ ವಿವಿಧಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತದೆಎಂದು ಅವರು ವಿವರಿಸಿದ್ದಾರೆ.ಈಒಪ್ಪಂದವು ಹವಾಮಾನ ಬದಲಾವಣೆಪರಿಣಾಮವನ್ನು ತಗ್ಗಿಸಲು ಸಹಕಾರಿ.ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳೊಂದಿಗೆಪರಿಸರ ಮತ್ತು ಅದರ ಜೀವವೈವಿಧ್ಯವನ್ನು ಸಂರಕ್ಷಿಸಲು ಜೆಎಸ್‌ಡಬ್ಲ್ಯು ಫೌಂಡೇಶನ್‌ ಸದಾ ಸಿದ್ಧವಾಗಿದೆ.ವ್ಯಾಪಾರದ ಜತೆಗೆ ಸಾಮಾಜಿಕ ಮತ್ತುಪರಿಸರದ ಜವಾಬ್ದಾರಿ ಬಗ್ಗೆ ಜೆಎಸ್‌ಡಬ್ಲ್ಯುಕಾಳಜಿ ವಹಿಸುತ್ತದೆ.

ಜೀವವೈವಿಧ್ಯತೆಯನ್ನು ಸಂರಕ್ಷಿಸಲು, ಮರುಸ್ಥಾಪಿಸಲು, ಉತ್ಕೃಷ್ಟಗೊಳಿಸಲುಮತ್ತು ಉತ್ತೇಜಿಸಲು ಜೆಎಸ್‌ಡಬ್ಲ್ಯುಫೌಂಡೇಶನ್‌ ಕಾರ್ಯಪ್ರವೃತ್ತವಾಗಿದೆಎಂದು ಸಂಗೀತಾ ಜಿಂದಾಲ್‌ಹೇಳಿದ್ದಾರೆ. ಜೆಎಸ್‌ಡಬ್ಲ್ಯು ಸ್ಟೀಲ್‌ವಿಜಯನಗರ ವರ್ಕ್ಸ್ ಅಧ್ಯಕ್ಷ ಪಿ.ಕೆ.ಮುರುಗನ್‌ ಮಾತನಾಡಿ, ಕರ್ನಾಟಕಅರಣ್ಯ ಸರ್ಕಾರದೊಂದಿಗಿನ ತಿಳಿವಳಿಕಾಒಪ್ಪಂದವು ಹವಾಮಾನ ಬದಲಾವಣೆಗೆಸಂಬಂಧಿ ಸಿದ ನಿರ್ಣಾಯಕಕಾಳಜಿಯೊಂದಿಗೆ ಸಸ್ಯ ಮತ್ತುಪ್ರಾಣಿಗಳ ಪ್ರದೇಶದಲ್ಲಿ ಸಕಾರಾತ್ಮಕಬದಲಾವಣೆಗಳ ಹೊಸ ನೋಟವನ್ನುತೆರೆಯುತ್ತದೆ.

Advertisement

ಉತ್ತಮ ಪರಿಸರಅಭ್ಯಾಸಗಳನ್ನು ಮತ್ತಷ್ಟು ಹೆಚ್ಚಿಸಲುಮತ್ತು ಉತ್ತೇಜಿಸಲು ತಿಳಿವಳಿಕೆಒಪ್ಪಂದ ಒಂದು ವೇದಿಕೆಯಾಗಿದೆ.ಈ ಖಾಸಗಿ-ಸಾರ್ವಜನಿಕಪಾಲುದಾರಿಕೆಯು ಪರಸ್ಪರಲಾಭದಾಯಕ ಪಾಲುದಾರಿಕೆಯನ್ನುಉತ್ತೇಜಿಸಲು ಪರಿಸರ ಕ್ಷೇತ್ರದಲ್ಲಿಸಹಕಾರದ ಕ್ಷೇತ್ರಗಳನ್ನು ಬಲಪಡಿಸುತ್ತದೆಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next