Advertisement

ಸಾಮಾಜಿಕ ಬದಲಾವಣೆ ಬಯಸಿಧ‍್ಧೂ ಭಗತ್‌ಸಿಂಗ್‌

03:10 PM Mar 24, 2022 | Team Udayavani |

ಬಳ್ಳಾರಿ: ಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದಸ್ವಾತಂತ್ರÂ ಸಂಗ್ರಾಮದ ವೀರ ಹುತಾತ್ಮರಾದ ಭಗತ್‌ಸಿಂಗ್‌, ರಾಜಗುರು, ಸುಖದೇವ್‌ ಹುತಾತ್ಮರದಿನಚರಣೆಯನ್ನು ನಗರದ ಮುನ್ಸಿಪಲ್‌ ಮೈದಾನ,ವಿಮ್ಸ್‌ ಕ್ರೀಡಾಂಗಣ ಮತ್ತು ವಿದ್ಯಾರ್ಥಿನಿಲಯಗಳಲ್ಲಿಕಾರ್ಯಕ್ರಮ ನಡೆಯಿತು.

Advertisement

ಸಂಘಟನೆ ಜಿಲ್ಲಾಧ್ಯಕ್ಷ ಗುರಳ್ಳಿ ರಾಜ ಮಾತನಾಡಿ,ಮಾರ್ಚ್‌ 23, 1931ರಂದು ಭಗತ್‌ ಸಿಂಗ್‌,ರಾಜಗುರು, ಸುಖದೇವ್‌ರನ್ನು ಬ್ರಿಟಿಷ್‌ ಸರ್ಕಾರಗಲ್ಲಿಗೇರಿಸಿದ ದಿನ. ನಗುನಗುತ್ತಾ ಗಲ್ಲಿಗೇರಿದಮೂವರು ಅಪ್ರತಿಮ ದೇಶಪ್ರೇಮಿಗಳಿಗಾಗಿ ಇಡೀದೇಶ ಕಣ್ಣೀರಿಟ್ಟ ದಿನ. ಭಗತ್‌ ಸಿಂಗ್‌, ಕ್ರಾಂತಿ ಮತ್ತುಸ್ವಾತಂತ್ರÂದ ಬಗೆಗಿನ ತಮ್ಮ ವಿಚಾರವನ್ನು ಎಷ್ಟುಪ್ರಖರವಾಗಿ ಹರಡಿದ್ದರೆಂದರೆ ಸಾವಿರಾರು ಜನಭಾರತೀಯರು ಅವರ ಆಶಯಗಳನ್ನು ಈಡೇರಿಸಲುಪ್ರಾಣತ್ಯಾಗಕ್ಕೆ ಸಿದ್ಧರಾಗಿ ಬೀದಿಗಿಳಿದರು ಎಂದರು.

ಭಗತ್‌ ಸಿಂಗ್‌ ಕೇವಲ ಬ್ರಿಟಿಷರಕಪಿಮುಷ್ಟಿಯಿಂದ ಭಾರತದ ಶ್ರೀಮಂತರಿಗೆಅ ಧಿಕಾರದ ಹಸ್ತಾಂತರವನ್ನು ಬಯಸಿರಲಿಲ್ಲ.ಬದಲಿಗೆ ಅವರು ಬಯಸಿದ್ದು ಸಾಮಾಜಿಕ ವ್ಯವಸ್ಥೆಯ ಸಮಗ್ರ ಬದಲಾವಣೆ. ಈ ದೇಶದಶೋಷಿತ ಜನತೆ, ರೈತರು ಮತ್ತು ಕಾರ್ಮಿಕರುತಮ್ಮ ಹಕ್ಕುಬದ್ಧ ಅಧಿ ಕಾರವನ್ನು ಕಸಿದುಕೊಳ್ಳಬೇಕುಎಂಬುದು ಅವರ ಅಭಿಪ್ರಾಯವಾಗಿತ್ತು ಎಂದುಅವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next