Advertisement

ವಿಜೃಂಭಣೆಯ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ

08:39 PM Mar 16, 2022 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕಿನನಡುವೆಯೂ ನಗರದ ಶಕ್ತಿದೇವತೆ,ಆರಾಧ್ಯ ದೇವತೆ ಕನಕದುರ್ಗಮ್ಮ ದೇವಿಯಸಿಡಿಬಂಡಿ ಉತ್ಸವವು ಲಕ್ಷಾಂತರ ಭಕ್ತರನಡುವೆ ಶ್ರದ್ಧಾ ಭಕ್ತಿಯಿಂದ ಮಂಗಳವಾರಸಂಜೆ ನಡೆಯಿತು.

Advertisement

ಈ ಬಾರಿ ಕೋವಿಡ್‌ ಮಾರ್ಗಸೂಚಿಗಳುಸಡಿಲಗೊಂಡಿರುವ ಹಿನ್ನೆಲೆಯಲ್ಲಿಹಿಂದಿನ ಸಂಪ್ರದಾಯದಂತೆಸಂಜೆ 6 ಗಂಟೆಗೆ ಲಕ್ಷಾಂತರಭಕ್ತ ಸಮೂಹದ ನಡುವೆದೇವಸ್ಥಾನದ ಸುತ್ತು ಮೂರುಪ್ರದಕ್ಷಿಣೆ ಹಾಕುವ ಮೂಲಕಅತ್ಯಂತ ವಿಜೃಂಭಣೆಯಿಂದಆಚರಿಸಲಾಯಿತು.

ಶಕ್ತಿ ದೇವತೆ ಕನಕದುರ್ಗಮ್ಮದೇವಸ್ಥಾನದಲ್ಲಿ ಪೂಜೆಮಾಡುವವರು ಯಾದವಸಮುದಾಯದವರಾದರೂದೇವಿ ಸಿಡಿಬಂಡಿ ಉತ್ಸವವನ್ನು ಪ್ರತಿವರ್ಷವೂಗಾಣಿಗ ಸಮುದಾಯವೇ ನಿರ್ವಹಿಸುತ್ತದೆ.ಕೌಲ್‌ಬಜಾರ್‌ನ ದುಗ್ಗಿ ಮಾಧವಯ್ಯಬೀದಿಯಲ್ಲಿ ಸಿಡಿಬಂಡಿಯನ್ನು ಸಿದ್ಧಪಡಿಸುವಗಾಣಿಗ ಸಮುದಾಯದವರು ಒಂದುದಿನ ಮುಂಚೆಯೇ (ಸೋಮವಾರಸಂಜೆ) ಸಿಡಿಬಂಡಿಯನ್ನು ಕೌಲ್‌ಬಜಾರ್‌,ಮೊದಲನೇ ಗೇಟ್‌, ಬಸವನಕುಂಟೆ, ಎಸ್‌ಪಿವೃತ್ತದ ಮೂಲಕ ದುರ್ಗಮ್ಮ ದೇವಸ್ಥಾನದಆವರಣಕ್ಕೆ ತಂದು ನಿಲ್ಲಿಸುತ್ತಾರೆ.

ಮರುದಿನಸಿಡಿಬಂಡಿಯಂದು ಮಂಗಳವಾರ ಗಾಣಿಗಸಮುದಾಯದಿಂದ ಮೊದಲ ಕುಂಭನಡೆದ ಬಳಿಕ ಸಂಜೆ 6 ಗಂಟೆ ಸುಮಾರಿಗೆಸಿಡಿಬಂಡಿಯನ್ನು ಎಳೆಯುವ ಮೂರು ಜೊತೆಎತ್ತುಗಳನ್ನು ದೇವಸ್ಥಾನದ ಸುತ್ತ ಮೂರುಪ್ರದಕ್ಷಿಣೆ ಹಾಕಿದ ಬಳಿಕ ಸಿಡಿಬಂಡಿಗೆ ಕಟ್ಟಿದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆಹಾಕಲಾಯಿತು. ಈ ವೇಳೆ ಸೇರಿದ್ದ ಲಕ್ಷಾಂತರಜನರ ಜಯಘೋಷಗಳು ಮುಗಿಲುಮುಟ್ಟಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next