Advertisement
ಸ್ಥಳೀಯ ಕಾವ್ರಾಡಿ ಗ್ರಾಮ ಪಂಚಾಯತ್, ಕೆರೆ ಅಭಿವೃದ್ಧಿ ಸಮಿತಿಯವರ ಸಹಕಾರದೊಂದಿಗೆ 86 ಸೆಂಟ್ಸ್ ಕೆರೆಯ ಅಭಿವೃದ್ಧಿ ಮಾಡಲಾಗಿದೆ. ಇಷ್ಟು ದೊಡ್ಡ ಕರೆಯ ಹೂಳೆತ್ತಿದಾಗ ಸಿಕ್ಕಿದ್ದು ಬರೋಬ್ಬರಿ 1,050 ಲೋಡು ಮಣ್ಣು. ಇದನ್ನು ಸಾಗಿಸುವುದೇ ದೊಡ್ಡ ತಲೆನೋವಾಗಿತ್ತು. ಪ್ರತಿದಿನ ಇಂದಿನ ಮಣ್ಣು ಎಲ್ಲಿ ಸಾಗಿಸುವುದು ಎಂದು ಸಮಿತಿಯವರು ಚಿಂತಿಸಿ ವಿಲೇವಾರಿ ಮಾಡುತ್ತಿದ್ದರು.
Related Articles
Advertisement
ಲಾಕ್‌ಡೌನ್ ದಿನಗಳಲ್ಲಿ ಇಲ್ಲಿ ಕೆರೆಯ ಹೂಳೆತ್ತುವ ಮೂಲಕ ಕೆರೆಯಲ್ಲಿ ನೀರು ಸಂಗ್ರಹವಾಗತೊಡಗಿದೆ. ಅಭಿವೃದ್ಧಿಗೊಳಿಸಿದ ಈ ಕೆರೆಯನ್ನು ಪಂಚಾಯತ್‌ಗೆ ಬಿಟ್ಟುಕೊಡಲಾಗುತ್ತದೆ. ಇದಕ್ಕೆ ಅವಶ್ಯವಿದ್ದರೆ ತಡೆಗೋಡೆ, ಕಾಲುವೆ ಇತ್ಯಾದಿಗಳನ್ನು ಪಂಚಾಯತ್ ಪ್ರತ್ಯೇಕ ಯೋಜನೆ ಮೂಲಕ ಮಾಡಲಿದೆ. ಮಣ್ಣು ಸಾಗಾಟದ ವೆಚ್ಚವನ್ನು ಮಣ್ಣು ಹಾಕಿಸಿಕೊಂಡವರು ಮಾಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಧನ ನೀಡಿದ್ದರೂ ಲಕ್ಷಾಂತರ ರೂ.ಗಳ ಕೆಲಸವಾಗಿದೆ.
ಮೂರು ಕಡೆಕೆರೆ ಸಂಜೀವಿನಿ ಯೋಜನೆಯಲ್ಲಿ ಸರಕಾರದ ಸಹಯೋಗದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ನಡೆಯುತ್ತದೆ. ಅದು ಭಾರೀ ವಿಸ್ತಾರದ ಕೆರೆಗಳಾದರೆ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಸ್ಥಳೀಯ ಸಮಿತಿ ರಚಿಸಿ ಸಣ್ಣ ಸಣ್ಣ ಕೆರೆಗಳ ಹೂಳೆತ್ತುವ ಕಾರ್ಯ ನಡೆಯುತ್ತದೆ. 4 ಲಕ್ಷ ರೂ.ಗಳನ್ನು ಯೋಜನೆ ಮೂಲಕ ನೀಡಲಾಗುತ್ತದೆ. ಕಳೆದ ವರ್ಷ 2 ಕೆರೆಗಳನ್ನು ಹೀಗೆ ಅಭಿವೃದ್ಧಿ ಮಾಡಿದ್ದು ಈ ವರ್ಷ ಮೂಡಬಿದಿರೆ, ಬ್ರಹ್ಮಾವರ, ಕಂಡೂÉರು ಕೆರೆಗಳ ಅಭಿವೃದ್ಧಿ ಗುರಿ ಹಾಕಲಾಗಿತ್ತು. ಇದು ವರ್ಷದ ಮೊದಲ ಕೆರೆ.
-ಗಣೇಶ್, ಜಿಲ್ಲಾ ನಿರ್ದೇಶಕರು