Advertisement

ಲಂಡನ್‌ ಟೆನಿಸ್‌ ಕೋರ್ಟ್‌ನಲ್ಲಿ “ಬಾಲ್‌ ಡಾಗ್ಸ್‌’

09:00 AM Dec 09, 2018 | |

ಲಂಡನ್‌: ಟೆನಿಸ್‌ ಕೋರ್ಟ್‌ನಲ್ಲಿ ಬಾಲಕ, ಬಾಲಕಿಯರು ಚೆಂಡು ಹೆಕ್ಕುವ ಕೆಲಸ ಮಾಡುವುದು ಮಾಮೂಲು. ಆದರೆ ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್‌ ಟೆನಿಸ್‌ ಟೂರ್ನಿಯಲ್ಲಿ ನಾಯಿ ಮರಿಗಳು ಚೆಂಡು ಹೆಕ್ಕುವ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿವೆ.

Advertisement

ಚಾಂಪಿಯನ್ಸ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಪಂದ್ಯದ ವೇಳೆ 3 ಸುಂದರ ನಾಯಿಗಳು ಚೆಂಡನ್ನು ಬಾಯಲ್ಲಿರಿಸಿಕೊಂಡು ಕರ್ತವ್ಯ ನಿಭಾಯಿಸುತ್ತಿದ್ದುದು ಕಂಡುಬಂತು. ಬಾಲಕ, ಬಾಲಕಿಯರೊಂದಿಗೆ ಹ್ಯಾಟಿ, ಟೀನಾ ಹಾಗೂ ಮೆಲ್ವಿನ್‌ ಎಂಬ 3 ನಾಯಿಗಳು ಚೆಂಡಿನ ಹಿಂದೆ ಓಡಾಡುತ್ತ ಅಭಿಮಾನಿಗಳ ಗಮನ ಸೆಳೆದಿವೆ. ವೀಕ್ಷಕರಿಂದ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡಿವೆ. 

ಟಿಮ್‌ ಹೆನ್ಮನ್‌ ತರಬೇತಿ
ಈ ಟೂರ್ನಿಗಾಗಿ ಶ್ವಾನಗಳನ್ನು ನೀಡಿದ್ದು “ಕಾನೈನ್‌ ಪಾರ್ಟ್‌ನರ್’ ಎಂಬ ಸಂಸ್ಥೆ. ಇದು ಅಂಗವಿಕಲ ಜನರಿಗೆ ನೆರವಾಗಲು ನಾಯಿಗಳಿಗೆ ತರಬೇತಿ ನೀಡುತ್ತದೆ. ಮಾಜಿ ನಂ. ವನ್‌ ಟೆನಿಸ್‌ ಆಟಗಾರ ಟಿಮ್‌ ಹೆನ್ಮನ್‌ ನಾಯಿಗಳಿಗೆ ತರಬೇತಿ ನೀಡಲು ಸಹಾಯ ಮಾಡಿದ್ದಾರೆ. ಇದಕ್ಕೂ ಮುನ್ನ ಬ್ರಝಿಲ್‌ ಓಪನ್‌ನಲ್ಲಿ ನಾಯಿಗಳು ಚೆಂಡು ಹೆಕ್ಕಿಕೊಡುವ ಕೆಲಸವನ್ನು ಮಾಡಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next