Advertisement

ಬಾಲ್‌ ಬ್ಯಾಡ್ಮಿಂಟನ್‌: ಆಳ್ವಾಸ್‌ಗೆ ಪ್ರಶಸ್ತಿ

05:41 PM Mar 07, 2017 | Team Udayavani |

ಕಾರ್ಕಳ: ಇಲ್ಲಿನ ಭುವನೇಂದ್ರ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್‌ ಕಾಲೇಜ್‌ ಪುರುಷರ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್‌ ಕಾಲೇಜ್‌ ಎಂಕೆ ಅನಂತರಾಜ್‌ ಸ್ಮಾರಕ ಪರ್ಯಾಯ ಟ್ರೋಫಿಯನ್ನು ಗೆದ್ದುಕೊಂಡಿದೆ.

Advertisement

ಫೈನಲ್‌ ಹೋರಾಟದಲ್ಲಿ ಆಳ್ವಾಸ್‌ ತಂಡವು ಕುಂದಾಪುರದ ಬಿಆರ್‌ ಹೆಗ್ಡೆ ಕಾಲೇಜ್‌ ತಂಡವನ್ನು 35-10, 35-8 ನೇರ ಸೆಟ್‌ಗಳಿಂದ ಸೋಲಿಸಿ ಸತತ 13ನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಆಳ್ವಾಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಮಡಂತ್ಯಾರಿನ ಸೇಕ್ರೆಟ್‌ ಹಾರ್ಟ್‌ ಕಾಲೇಜ್‌ ತಂಡವನ್ನು ಸೋಲಿಸಿದ್ದರೆ ಬಿಆರ್‌ ಹೆಗ್ಡೆ ಕಾಲೇಜ್‌ ತಂಡವು ವಾಮದಪದವಿನ ಸರಕಾರಿ ಕಾಲೇಜ್‌ ತಂಡವನ್ನು ಸೋಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next