Advertisement

ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆಗೆ ಚಾಲನೆ

10:10 AM Nov 02, 2021 | Team Udayavani |

ಭಾಲ್ಕಿ: ತಾಲೂಕಿನ ಬಾಜೋಳಗಾ ಕ್ರಾಸ್‌ ಹತ್ತಿರದ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಮಾಜಿ ಶಾಸಕರು ಆದ ಕಾರ್ಖಾನೆಯ ಅಧ್ಯಕ್ಷ ಪ್ರಕಾಶ ಖಂಡ್ರೆ ಸೋಮವಾರ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಈ ವರ್ಷ ಎಲ್ಲಾ ರೈತರ ಕಬ್ಬು ಬೆಳೆ ತುಂಬಾ ಚನ್ನಾಗಿ ಬಂದಿದೆ. ಹೀಗಾಗಿ ಪ್ರಸ್ತುತ ಸಾಲಿನಲ್ಲಿ ಸುಮಾರು 6 ಲಕ್ಷ ಟನ್‌ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಅಲ್ಲದೇ 120 ಕೆಎಲ್‌ಪಿಡಿ ಯಥನಾಲ್‌ ತಯ್ನಾರಿಸಲಾಗುತ್ತಿದ್ದು, ರೈತರಿಗೆ ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳಿದ್ದಿಲ್ಲ. ಅಂತಹ ಸಂದರ್ಭದಲ್ಲಿ ಜಿಲ್ಲೆಯ ರೈತರು ಕಬ್ಬಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದನ್ನರಿತು ರೈತರ ಸಮಸ್ಯೆ ಪರಿಹಾರಕ್ಕಾಗಿ ಈ ಕಾರ್ಖಾನೆ ಸ್ಥಾಪಿಸಲಾಗಿದೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ನಿರ್ದೇಶಕ ಪ್ರಸನ್ನ ಖಂಡ್ರೆ, ಜಗದೀಶ ಖಂಡ್ರೆ, ಗುರುಪ್ರಸಾದ ಖಂಡ್ರೆ, ಸಿಡಿಒ ಶಿವಾನಂದ ಬಲ್ಲೂರ, ಜಿ.ಎಂ. ರವೀಂದ್ರನಾಥ, ಸಿಸಿ ಸೋಮನಾಥ ಬಂಡೆ, ಎಜಿಎಂ ರಾಮಲಿಂಗ ಹಣಮಶೆಟ್ಟಿ, ಮುಖಂಡರಾದ ಗೋವಿದಂರಾವ ಬಿರಾದಾರ, ರವೀಂದ್ರ ಕಣಜೆ, ವೆಂಕಟರಾವ ಬಿರಾದಾರ, ಬಾಬುರಾವ ಪಾಟೀಲ, ಅಶೋಕ ವಾಲೆ, ರಾಜಕುಮಾರ ಜಲ್ಲೆ, ಸುರೇಶ ಅಲ್ಲೂರೆ, ರಾಜಶೇಖರ ಬಿರಾದಾರ ನಾವದಗಿ, ನಾಗನಾಥ ಹುಣಜೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next