ಬೆಳ್ಳಾರೆ: ಬಾಳಿಲ ವಿದ್ಯಾ ಬೋಧಿನೀ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾಬೋಧಿನೀ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳಿಗೆ ಹೊರಸಂಚಾರ ಮತ್ತು ಒಂದು ದಿನದ ರಾತ್ರಿ ಶಿಬಿರ ಕಾರ್ಯಕ್ರಮವು ಇತ್ತೀಚೆಗೆ ಬೆಳ್ಳಾರೆ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ರಾತ್ರಿ ಶಿಬಿರಾಗ್ನಿ ಕಾರ್ಯಕ್ರಮವನ್ನು ಉದ್ಘಾಟಿಸಿದ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಿರಂಜನ ಶೆಟ್ಟಿ ಅವರು ತಂಡದ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ ಬಾಳಿಲ ವಿದ್ಯಾ ಬೋಧಿನೀ ಎಜುಕೇಶನಲ್ ಸೋಸೈಟಿಯ ಕಾರ್ಯ ದರ್ಶಿಗಳಾದ ಎನ್. ವೆಂಕಟ್ರಮಣ ಭಟ್ ಅವರು ಶಿಕ್ಷಣ ಪೂರಕವಾದ ಇಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ಮನೋಲ್ಲಾಸ, ಸಾಹಸಪ್ರವೃತ್ತಿ, ಆತ್ಮ ಸಂತೋಷಗಳು ಸಿದ್ಧಿಸುತ್ತವೆ. ಪೂರ್ಣ ಪ್ರಮಾಣದ ಕಲಿಕೆಗೆ ಪೂರಕವಾಗುತ್ತದೆ ಎಂದು ಹೇಳಿದರು.
ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾದ ರಾಮಚಂದ್ರ ರಾವ್ ಬಾಳಿಲ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸುಬ್ಬಯ್ಯ ವೈ.ಬಿ., ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಶಿವರಾಮ ಶಾಸ್ತ್ರಿ ಎಂ.ಎಸ್. ಸ್ವಾಗತಿಸಿದರು.
ಪ್ರೌಢಶಾಲಾ ಶಿಕ್ಷಕರಾದ ಕೆಪಿಎನ್ ಭಟ್, ದಿನೇಶ್ಚಂದ್ರ ಪಿ., ಅರವಿಂದ ಕೆ.ಜಿ., ಹರಿಪ್ರಸಾದ್ ರೈ ಜಿ. ಉಪಸ್ಥತರಿದ್ದರು. ಪ್ರಸಾದ್ ಅರ್ನಾಡಿ, ನಿರಂಜನ್ ಶೆಟ್ಟಿ ಮತ್ತು ದೇಗುಲದ ವ್ಯವಸ್ಥಾಪನ ಸಮಿತಿಯ ಸದಸ್ಯರು, ರಾಜೇಶ್ ಗುಂಡಿಗದ್ದೆ, ಗಣೇಶಪ್ರಸಾದ್ ಕಾವಿನಮೂಲೆ, ಪೆರುವಾಜೆಗತ್ತು ಲೀಲಾವತಿ ಶೆಟ್ಟಿ, ಸಚಿನ್ ರಾಜ್ ಶೆಟ್ಟಿ, ದೇಗುಲದ ಸಿಬಂದಿ ವಸಂತ, ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ, ಸುಂದರ ನಾಗನಮೂಲೆ, ಚಂದ್ರ, ವಸಂತ ಕಲ್ಮಡ್ಕ, ಜೀವನ್ ಶಿಬಿರದ ಯಶಸ್ಸಿಗೆ ಸಹಕರಿಸಿದರು.
ಮುಖ್ಯಶಿಕ್ಷಕ ಎಂ.ಎಸ್. ಶಿವರಾಮ ಶಾಸ್ತ್ರಿ ಸಹಶಿಕ್ಷಕ ದಿನೇಶ್ಚಂದ್ರ ಪಿ., ಸ್ಕೌಟ್ ಶಿಕ್ಷಕರಾದ ಉದಯಕುಮಾರ್ ರೈ ಎಸ್., ಗೈಡ್ ಶಿಕ್ಷಕಿ ಸಹನಾ ಬಿ.ಬಿ. ಹಾಗೂ ಪ್ರಾಥಮಿಕ ಶಾಲಾ ಸ್ಕೌಟ್ ಶಿಕ್ಷಕರಾದ ಶಿವಪ್ರಸಾದ್ ಜಿ., ಗೈಡ್ ಶಿಕ್ಷಕಿ ಯಶೋದಾ ಕಾರ್ಯಕ್ರಮವನ್ನು ಸಂಯೋಜಿಸಿದರು.