Advertisement

ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹ

05:11 PM Nov 21, 2018 | |

ಬಾಗಲಕೋಟೆ: ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲೆಯ ಕುರುಬ ಸಮಾಜ ಬಾಂಧವರು ಅಪರ ಜಿಲ್ಲಾಧಿಕಾರಿ ಎಚ್‌. ಜಯಾ ಅವರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಸಂವಿಧಾನಬದ್ಧವಾಗಿ ಕುರುಬರ ಎಸ್‌ಟಿ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಹಲವಾರು ರೀತಿಯಲ್ಲಿ ಮನವಿ ಮಾಡುತ್ತಿದ್ದರೂ ಸಹ ಸರ್ಕಾರ ಯಾವುದೇ ಸ್ಪಂದನೆ ಸಿಗದೇ ಇರುವುದು ಕುರುಬರ ಮನಸ್ಸಿಗೆ ನೋವನ್ನುಂಟು ಮಾಡುತ್ತಿದೆ. ರಾಜ್ಯದಲ್ಲಿ ಕುರುಬರು ಸಹ ಮತದಾರರಾಗಿದ್ದೂ, ಜೀವಿಸುವ ಹಕ್ಕನ್ನು ಹೊಂದಿದ್ದೇವೆ. ಎಸ್‌.ಟಿ. (ಪರಿಶಿಷ್ಟ ಪಂಗಡ) ಮೀಸಲಾತಿಯ ಜಾತಿ ನಿಂದನೆ ಕಾಯ್ದೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಲಕ್ಕಿಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದವರು ಕುರುಬ ಸಮಾಜದ ಹಿರಿಯರು, ಯುವಕರು ಮತ್ತು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸಿದ್ದಾರೆ. ದೇಶದ ಮೂಲ ನಿವಾಸಿಗಳಾಗಿ, ಅಲೆಮಾರಿಗಳಾಗಿ, ಪರಿಶಿಷ್ಟ ಪಂಗಡ ಮೀಸಲಾತಿ ಹೊಂದುವ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿರುವ ಕುರುಬ ಸಮಾಜ ಬೀದರ್‌ ಮತ್ತು ಕೊಡಗು ಜಿಲ್ಲೆಗಳಲ್ಲಿ ಎಸ್‌. ಟಿ. ಮೀಸಲಾತಿಯನ್ನು ಹೊಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಎಸ್‌ಟಿ ಮೀಸಲಾತಿಯನ್ನು ವಿಸ್ತರಿಸಬೇಕೆಂಬ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಕುರುಬ ಸಮಾಜದ ಮನವಿಗೆ ಸ್ಪಂದಿಸಿ, ಕುರುಬರ ಮೇಲೆ ನಡೆಯುತ್ತಿರುವ ಅಟ್ರಾಸಿಟಿ ದೌರ್ಜನ್ಯದಿಂದ ಮುಕ್ತಿಗೊಳಿಸಿ, ದುರುಪಯೋಗ ತಡೆಯಬೇಕು. ಕುರುಬರನ್ನು ಎಸ್‌.ಟಿ. ಮೀಸಲಾತಿ ಪಟ್ಟಿಗೆ ಸೇರಿಸಲು 2017ರಲ್ಲಿ ಬೆಳಗಾವಿ ಅ ಧಿವೇಶನದ ಸಂದರ್ಭದಲ್ಲಿ ಎಸ್‌ಟಿ ಮೀಸಲಾತಿಗೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಿ.ಬಿ. ಸಿದ್ದಾಪುರ, ತಾಲೂಕು ಹಾಲುಮತ ಮಹಾಸಭಾದ ಅಧ್ಯಕ್ಷ ರಾಜೇಂದ್ರ ದಡ್ಡಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಶಿ ಉದಗಟ್ಟಿ, ಮುಖಂಡರಾದ ಹನುಮಂತ ರಾಕುಂಪಿ, ರಾಮು ರಾಕುಂಪಿ, ಮಲ್ಲು ಹುನಗುಂಡಿ, ಕವಿತಾ ರಾಜೂರು, ಹೇಮಾ ವಜ್ರಮಟ್ಟಿ, ಕವಿತಾ ಅಮರಗೋಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next