ನಡಿಗೆ, ನರ್ತನ ಮಾಡುತ್ತಿದ್ದರೆ, ನೋಡುಗರ ಎದೆ ಝಲ್ ಎನಿಸುತ್ತಿತ್ತು. ಪ್ರೇಕ್ಷಕರು ಮೂಕ ವಿಸ್ಮಿತರಾಗಿ ತದೇಕಚಿತ್ತದಿಂದ ಅವರನ್ನೇ ನೋಡುತ್ತಿದ್ದರು. ಯಲಹಂಕದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆ ಯುತ್ತಿರುವುದು “ಸ್ಕೈ ಕ್ಯಾಟ್ಸ್’ ತಂಡದ ನಾನಾ ಭಂಗಿಯ ಕಸರತ್ತು.
Advertisement
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ 11ನೇ ವೈಮಾನಿಕ ಪ್ರದರ್ಶನದಲ್ಲಿ ಆ್ಯನ್ನಾ, ವಿಕ್ಟೋರಿಯಾ ಸ್ಮರ್ ಮತ್ತು ಹೆಲ್ಲಾ ಸ್ಟೆನಿಫ್ ಎಂಬ ಮೂವರು ಯುವತಿಯರು 150 ಕಿ.ಮೀ.ವೇಗದಲ್ಲಿ ಆಗಸದಲ್ಲಿ ಹಾರುವ ವಿಮಾನದ ರೆಕ್ಕೆಯ ಮೇಲೆ ಮಾರ್ಜಾಲ ನಡಿಗೆ ಮಾಡುತ್ತ, ನರ್ತಿಸುತ್ತಿದ್ದರೆ, ವೀಕ್ಷಕರು ಬೆಕ್ಕಸ ಬೆರಗಾಗುತ್ತಿದ್ದರು. ಜೀವದ ಹಂಗು ತೊರೆದು ವಿಮಾನದ ಮೇಲೆ ನಿಂತು ಸ್ಟಂಟ್ ಮಾಡುವ ಯುವತಿಯರು ಕನಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಬಿಟ್ಟರೆ ಮತ್ತಾವುದೇ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಯುವತಿಯರಿಗೆ ಪೈಲಟ್‌ಗಳೇ ಎಚ್ಚರಿಕೆ ವಾಹಕರು.
Related Articles
Advertisement
ಯಾವುದೇ ಅಳುಕಿಲ್ಲದೆ ಸ್ಟಂಟ್ ಮಾಡುತ್ತೇನೆ. ಆಗಸದಲ್ಲಿ ಪ್ರದರ್ಶನ ನೀಡಲು ಸೂಕ್ತ ತರಬೇತಿ ನೀಡಲಾಗುತ್ತದೆ. ನಂತರವಷ್ಟೇ ಅವಕಾಶ ನೀಡಲಾಗುತ್ತದೆ’ ಎನ್ನುತ್ತಾರೆ ಹೆಲ್ಲಾ ಸ್ಟೆನಿಫ್.
“ವಿಮಾನದ ಮೇಲೆ ಸ್ಟಂಟ್, ನರ್ತನ ಮಾಡುವುದು ಸಂತಸವನ್ನುಂಟು ಮಾಡುತ್ತದೆ. ನಮ್ಮ ಸ್ಟಂಟ್‌ಗಳು ನೋಡುಗರಲ್ಲಿ ಭಯ ಹುಟ್ಟಿಸಬಹುದು. ಆದರೆ, ನಮಗೇನೂ ಅಂಜಿಕೆಯಿಲ್ಲ. ನಾನು ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದೇನೆ. ಹವ್ಯಾಸಕ್ಕಾಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸಾಹಸಮಯ ಕೆಲಸ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಹೀಗಾಗಿ ಇಂತಹ ಪ್ರದರ್ಶನದಲ್ಲಿ ಭಾಗವಹಿಸುತ್ತೇನೆ’ ಎನ್ನುತ್ತಾರೆ 22 ವರ್ಷದ ಆ್ಯನಾ.
27 ವರ್ಷದ ವಿಕ್ಟೋರಿಯಾ, “ನೃತ್ಯವೇ ನನ್ನ ವೃತ್ತಿ. ಹೀಗಾಗಿ ವಿಮಾನದ ಮೇಲೆ ನೃತ್ಯ, ಸ್ಟಂಟ್ ಮಾಡುವುದು ನನಗೆ ಸುಲಭ. ಕಳೆದ ಐದು ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಚೀನಾ, ರಷ್ಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದೇನೆ. ವಿಮಾನದ ಮೇಲೆ ಕಸರತ್ತು ಮಾಡುವಾಗ ತೊಂದರೆಯಾಗುವುದಿಲ್ಲ. ಯಾಕೆಂದರೆ ಸುರಕ್ಷೆಗೆ ಒತ್ತು ನೀಡುತ್ತೇವೆ. ಕೈ ಸನ್ನೆಯೇ ಇಲ್ಲಿ ಎಚ್ಚರಿಕೆ. ಸನ್ನೆಯೂ ಸಹ ಸ್ಟಂಟ್ ರೀತಿಯೇ ಇರುತ್ತದೆ. ಹೀಗಾಗಿ ಪ್ರೇಕ್ಷಕರಿಗೆ ಸನ್ನೆ ಏನೆಂಬುದು ಗೊತ್ತಾಗುವುದಿಲ್ಲ. ಅಲ್ಲದೆ, ಸೊಂಟಕ್ಕೆ ರೋಪ್ ಕಟ್ಟಿಕೊಳ್ಳಲಾಗುತ್ತದೆ’ ಎಂದರು.