Advertisement

ಪೇಜಾವರರು ದೇಶ ಕಂಡ ಶ್ರೇಷ್ಠ ಯತಿ

04:41 PM Dec 30, 2019 | Naveen |

ಬಾಳೆಹೊನ್ನೂರು: ಪೇಜಾವರ ಮಠದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರು ದೇಶ ಕಂಡ ಶ್ರೇಷ್ಠ ಯತಿಗಳಲ್ಲಿ ಒಬ್ಬರು ಎಂದು ಜಿಲ್ಲಾ ಚು.ಸಾ.ಪ ಅಧ್ಯಕ್ಷ ಹಾಗೂ ಪತ್ರಕರ್ತ ಯಜ್ಞಪುರುಷ ಭಟ್‌ ಹೇಳಿದರು.

Advertisement

ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರದೊಂದಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಷ್ಟ್ರವ್ಯಾಪಿ ಸಂಚರಿಸಿದ ಸರಳತೆಯ ಯತಿಗಳಾಗಿದ್ದರು. 2007 ರಲ್ಲಿ ನಕ್ಸಲ್‌ ಪೀಡಿತ ಪ್ರದೇಶವಾದ ಬರ್ಕನಗಟ್ಟಕ್ಕೆ ಭೇಟಿ ನೀಡುವ ಸಂದರ್ಭ ಹಾಗೂ 2019ರ ಮಾರ್ಚ್‌ನಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ನಡೆಯುತ್ತಿದ್ದ ಯುಗಮಾನೋತ್ಸವ ಧರ್ಮ ಜಾಗೃತಿ ಸಮಾರಂಭ ಶ್ರೀ ಕ್ಷೇತ್ರನಾಥ ವೀರಭದ್ರ ಸ್ವಾಮಿ ರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳುವ ಮುನ್ನ ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆದು, ನಿತ್ಯ
ವಿಧಿಯನ್ನು ಪೂರೈಸಿ ಶ್ರೀ ಕೃಷ್ಣ ಪೂಜೆ ಹಾಗೂ ಶಿಷ್ಯರಿಗೆ ನೀತಿ ಬೋಧನೆ ಪಾಠ ಮಾಡಿದ್ದು, ಭಿಕ್ಷಾವಂದನೆ ಸ್ವೀಕರಿಸಿದ್ದು ಇನ್ನು ನೆನಪು ಮಾತ್ರ ಎಂದು ತಿಳಿಸಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಮಾತನಾಡಿ, ಶ್ರೀಗಳು ಹರಿಪಾದ ಸೇರಿದ್ದು, ಧಾರ್ಮಿಕ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಂ. ಉಮೇಶ್‌ ಕಲ್ಮಕ್ಕಿ ಮಾತನಾಡಿ, ಹಿಂದೂ ಸಂಘಟನೆಗೆ ಹಗಲಿರುಳೆನ್ನದೇ ಶ್ರಮಿಸಿ ಸರ್ವಧರ್ಮದವರನ್ನು ಸ್ನೇಹದಿಂದ ಕಂಡು ಪರ ಧರ್ಮ ಸಹಿಷ್ಣುತೆ ಪಡೆದವರಾಗಿದ್ದರು ಎಂದರು.

ಪೇಜಾವರ ಮಠದ ಜಿಲ್ಲಾ ಸಂಚಾಲಕ ನಾಗೇಶ್‌ ಆಂಗೀರಸ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಕೊರತೆ ಹಾಗೂ ಹಿಂದುಳಿದವರ ಅಭಿವೃದ್ಧಿಯಾಗದಿರುವ ಬಗ್ಗೆ ಈ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಎಂದರು.

Advertisement

ಭಜರಂಗದಳದ ಜಿಲ್ಲಾ ಸಂಚಾಲಕ ಆರ್‌.ಡಿ.ಮಹೇಂದ್ರ, ಸವಿತಾ ಸಮಾಜದ ಹಿರಿಯಣ್ಣ, ಬಂಟರ ಸಂಘದ ಪರವಾಗಿ ಎಚ್‌.ಆರ್‌.ಆನಂದ್‌, ಆರ್‌ಎಸ್‌ಎಸ್‌ನ ವೆಂಕಟೇಶ್‌, ಜೇಸಿ ಕ್ಲಬ್‌ ಪರವಾಗಿ ಸತೀಶ್‌ ಅರಳಿಕೊಪ್ಪ, ರೋಟರಿ ಪರವಾಗಿ ಕೆ.ಟಿ.ವೆಂಕಟೇಶ್‌, ಬಿಜೆಪಿ ಪರವಾಗಿ ಜಗದೀಶ್ಚಂದ್ರ, ಸುನೀಲ್‌ ರಾಜ್‌ ಭಂಡಾರಿ ಮಾತನಾಡಿದರು. ಎಚ್‌.ಕೆ. ಸುಧಾಕರ್‌, ರಾಮಕೃಷ್ಣ ಭಟ್‌, ಕೃಷ್ಣ ಭಟ್‌, ಮನುಕುಮಾರ್‌, ರತ್ನಾಕರ, ಗುರುಪ್ರಸಾದ್‌, ಶ್ರೀಧರ, ಎ.ಕೆ.ಪಿ.ಕೃಷ್ಣಪುದುವಳ್‌ ಸೇರಿದಂತೆ ಸಮಾಜದ ಮುಖಂಡರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಾಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next