Advertisement

ಬಾಲ್ಕನಿಯಲ್ಲಿ ಉದ್ಯಾನ

04:04 PM Aug 12, 2017 | Team Udayavani |

ಗಿಡ, ಮರ, ಹಸಿರು ಎಂದರೆ ಎಲ್ಲರಿಗೂ ಇಷ್ಟ ಇದ್ದೇ ಇರುತ್ತೆ. ಬಹುತೇಕರು ಬಿಡುವು ಸಿಕ್ಕ ಕೂಡಲೆ ಬೆಂಗ್ಳೂರು ಬಿಟ್ಟು ದೂರಕ್ಕೆ ಹೊರಟು ನಿಲ್ಲುತ್ತಾರೆ. ಇನ್ನು ಕೆಲವರು ಮನೆಯ ಸುತ್ತಮುತ್ತ ಉಳಿದ ಅಷ್ಟಿಷ್ಟು ಜಾಗದಲ್ಲಿಯೇ ಪುಟ್ಟ ಉದ್ಯಾನವನಗಳನ್ನು ಮಾಡಿಬಿಡುತ್ತಾರೆ. ಆದರೆ ಬಹುತೇಕರಿಗೆ ಆ ಸೌಭಾಗ್ಯವೂ ಇರೋದಿಲ್ಲ. ಏಕೆಂದರೆ ಅವರು ಮಹಡಿ ಮನೆಗಳಲ್ಲಿ, ಅಪಾರ್ಟ್‌ಮೆಂಟುಗಳಲ್ಲಿ ವಾಸಿಸುತ್ತಿರುತ್ತಾರೆ. ಅಂಥವರನ್ನು ಗಮನದಲ್ಲಿರಿಸಿಕೊಂಡು ಒಂದು ಕಾರ್ಯಾಗಾರ ಆಯೋಜನೆಯಾಗಿದೆ. 

Advertisement

ಇಲ್ಲಿ ಬಾಲ್ಕನಿ, ಟೆರೇಸುಗಳಲ್ಲಿ ಗಿಡ ಬೆಳೆಸುವುದನ್ನಷ್ಟೇ ಅಲ್ಲ, ಯಾವುದೇ ಕೆಮಿಕಲ್‌ ಬಳಸದೆ, ನೈಸರ್ಗಿಕವಾಗಿ ಸಿಗುವ ಸಾವಯವ ವಸ್ತುಗಳಿಂದಲೇ ಬೆಳೆಸುವುದನ್ನು ಹೇಳಿಕೊಡುತ್ತಾರೆ. ಮಕ್ಕಳೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. 6 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಶುಲ್ಕ ಇರುವುದಿಲ್ಲ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ಒಂದು ಗಾರ್ಡನಿಂಗ್‌ ಕಿಟ್‌ ಒದಗಿಸಲಾಗುತ್ತದೆ.

ಎಲ್ಲಿ?: ಮೈ ಡ್ರೀಮ್‌ ಗಾರ್ಡನ್‌, ಎಲ್‌. ಪಿ ಕಾಂಪ್ಲೆಕ್ಸ್‌, ಒಎಂಬಿಆರ್‌ ಲೇಔಟ್‌, ಬಾಣಸವಾಡಿ
ಯಾವಾಗ?:  ಆಗಸ್ಟ್‌ 13, ಬೆಳಗ್ಗೆ 10- 12.30
 ಪ್ರವೇಶ: 400 ರೂ.

Advertisement

Udayavani is now on Telegram. Click here to join our channel and stay updated with the latest news.

Next