Advertisement

ತ್ರಿವೇಣಿಗೆ ಬಾಳು ನೀಡಿದ ಬಾಲಾಜಿ

11:16 AM Aug 09, 2018 | Team Udayavani |

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸುದೈವಿ(ಅನಾಥ) ಹೆಣ್ಣುಮಗಳ ಕಲ್ಯಾಣ ಮಹೋತ್ಸವವನ್ನು ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರು ನಡೆಸಿಕೊಟ್ಟರು. ಸುದೈವಿ ಹೆಣ್ಣು ಮಗಳಾದ ತ್ರಿವೇಣಿ ಐದು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಳು. 

Advertisement

ನಂತರ ತಂದೆಗೆ ಹೆಣ್ಣುಮಕ್ಕಳು ಬೇಡವಾದ ಕಾರಣ ಅವಳನ್ನು ಶ್ರೀಮಠದಲ್ಲಿ ತಂದುಬಿಟ್ಟಾಗ ಪೂಜ್ಯರು ಆ ಮಗುವನ್ನು ಅತ್ಯಂತ ಸಂತೋಷದಿಂದ ತೆಗೆದುಕೊಂಡು ಶ್ರೀಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ ಆವರಣದಲ್ಲಿ ನಡೆಯುತ್ತಿರುವ ಸುದೈವಿ(ಅನಾಥ) ಮಕ್ಕಳ ಕೇಂದ್ರದಲ್ಲಿ ಪಾಲನೆ-ಪೋಷಣೆ ಜತೆಗೆ ವಿದ್ಯಾಭ್ಯಾಸ ಮಾಡಿಸಿದರು. ಈಗ ತ್ರಿವೇಣಿಗೆ 20 ವರ್ಷವಾಗಿದೆ. ಪೂಜ್ಯರೆ ವರ ನೋಡಿ ಒಳ್ಳೆಯ ಮನೆತನದ ವರನೊಂದಿಗೆ ಮದುವೆ ಮಾಡಿಸಿದ್ದಾರೆ.

ಪೂಜ್ಯರ ಸನ್ನಿಧಾನದಲ್ಲಿ ಮಹಾರಾಷ್ಟ್ರದ ನಾಂದೇಡ ಜಿಲ್ಲೆ ಉಮರಿ ತಾಲೂಕಿನ ಪ್ರತಿಷ್ಠಿತ ಮನೆತನದ ರಾಮಕೀಶನ ಹಾಗೂ ವಿಮಲಾಬಾಯಿ ದಮಕೊಂಡವಾರ ಅವರ ಪುತ್ರ ಬಾಲಾಜಿ ಅವರೊಂದಿಗೆ ತ್ರಿವೇಣಿ ಅವರ ಕಲ್ಯಾಣ ಮಹೋತ್ಸವ ಬಸವತತ್ವದ ಪ್ರಕಾರ ಶ್ರೀಮಠದಲ್ಲಿ ಅದ್ಧೂರಿಯಾಗಿ ನಡೆಯಿತು. ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಬಸವಲಿಂಗ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಕಲ್ಯಾಣ ಮಹೋತ್ಸವಕ್ಕೆ ದಮಕೊಂಡವಾರ ಪರಿವಾರದವರು ಹಾಗೂ ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಮೋಹನ ರೆಡ್ಡಿ, ಜಯಕ್ಕ ಎಂ. ಗಾಂವಕರ, ಅನೀಲಕುಮಾರ ಹಾಲಕುಡೆ, ಮಠದ ಭಕ್ತರಾದ ಚಂದ್ರಕಾಂತ ಬಿರಾದಾರ, ವೈಜಿನಾಥ ಸಿಸಿ, ಶರಣಪ್ಪ ಬಿರಾದಾರ, ಸೂರ್ಯಕಾಂತ ಪಾಟೀಲ, ಅಕ್ಕನಬಳಗದ ಮುಕ್ತಾಬಾಯಿ ಖಂಡ್ರೆ, ಮಹಾನಂದಾ ಮಾಶೆಟ್ಟೆ, ಪ್ರೇಮಲಾ ತೊಂಡಾರೆ ಭಾಗವಹಿಸಿ ನವದಂಪತಿಗೆ ಆಶೀರ್ವದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next