ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿರುವ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಮೇ 12ರಿಂದ 22ರವರೆಗೆ ಬ್ರಹ್ಮೋತ್ಸವ ಜರಗಲಿದೆ. ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರನ ಸನ್ನಿಧಾನದಲ್ಲಿರುವ ಮೂರ್ತಿಗಳನ್ನೇ ಈ ಬ್ರಹ್ಮೋತ್ಸವದಲ್ಲಿ ಪೂಜಿಸಲಾಗುತ್ತದೆ. ಅಲ್ಲದೆ, ತಿರುಮಲದ ದೇಗುಲದ ಅರ್ಚಕರೇ ದಿಲ್ಲಿಯ ಬ್ರಹ್ಮೋತ್ಸವನ್ನು ನಡೆಸಿಕೊಡಲಿದ್ದಾರೆ ಎಂದು ದಿಲ್ಲಿಯ ತಿರುಮಲ ತಿರುಪತಿ ಬಾಲಾಜಿ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಮೇ 10ರಂದು ಕೋವಿಲ್ ಆಳ್ವಾರ್ ತಿರುಮಾಂಜಮಮ್ ಉತ್ಸವ ಜರಗಲಿದೆ. ವಾರ್ಷಿಕವಾಗಿ ಜರಗಲಿರುವ ಬ್ರಹ್ಮೋತ್ಸವ ಮೇ 12ರಿಂದ ಶುರುವಾಗಲಿದೆ. ಮೇ 22ರಂದು ನಡೆಯಲಿರುವ ಪುಷ್ಪಯಾಗದ ಮೂಲಕ ಬ್ರಹ್ಮೋತ್ಸವ ಸಮಾಪ್ತಿಯಾಗಲಿದೆ. ಈ 10 ದಿನಗಳ ಉತ್ಸವದಲ್ಲಿ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ವಾಹನ ಸೇವೆಗಳನ್ನು ಸ್ವಾಮಿಗೆ ಸಮರ್ಪಣೆ ಮಾಡಲಾಗುತ್ತದೆ.
ಪುನೀತ್ ಫೋಟೋ ತೆರವು -ಸ್ಪಷ್ಟನೆ :ಈ ನಡುವೆ ಇತ್ತೀಚೆಗೆ ತಿರುಮಲಕ್ಕೆ ಆಗಮಿಸುತ್ತಿದ್ದ ಕರ್ನಾಟಕದ ವಾಹ ನಗಳ ಮೇಲಿದ್ದ ಪುನೀತ್ ರಾಜ್‌ಕುಮಾರ್‌ರವರ ಫೋಟೋ ಗಳನ್ನು ಟಿಟಿಡಿ ಸಿಬಂದಿ ತೆಗೆಸಿದ ವಿವಾದಕ್ಕೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸ್ಪಷ್ಟನೆ ನೀಡಿದೆ. ತಿರುಮಲ ತಿರುಪತಿಯಲ್ಲಿ ಯಾವುದೇ ಸೆಲೆಬ್ರಿಟಿಗಳ ಫೋಟೋಗಳನ್ನು ತರುವುದಕ್ಕೆ ನಿಷೇಧವಿದೆ. ತಿರುಮಲದಲ್ಲಿ ಈ ನಿಯಮ ಕಳೆದ 10 ವರ್ಷಗಳ ಹಿಂದೆಯೇ ಜಾರಿಯಾಗಿದೆ. ಹಾಗಾ ಗಿಯೇ ಪುನೀತ್‌ರವರ ಚಿತ್ರಗಳನ್ನು ತೆರವುಗೊಳಿಸಲಾಗಿದೆ ಎಂದು
ಟಿಟಿಡಿ ಹೇಳಿದೆ.
ಮೂರು ಸೇವೆ ಸ್ಥಗಿತ
ಬೇಸಗೆಯಲ್ಲಿ ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಜನಸಾಮಾನ್ಯರಿಗೆ ತ್ವರಿತವಾಗಿ ಸಿಗಲೆಂಬ ಉದ್ದೇಶದಿಂದ ಪ್ರತಿ ಮಂಗಳವಾರ ನಡೆಯುತ್ತಿದ್ದ “ಅಷ್ಟದಳ ಪಾದಪದ್ಮಾ ರಾಧನೆ’, ಪ್ರತಿ ಗುರುವಾರ ನಡೆಯುತ್ತಿದ್ದ “ತಿರುಪ್ಪಾವಡ’, ಪ್ರತಿ ಶುಕ್ರವಾರ ನಡೆಯುತ್ತಿದ್ದ “ನಿಜಪಾದ ದರ್ಶನ’ ಸೇವೆಗಳನ್ನು ಕೆಲ ದಿನಗಳ ಮಟ್ಟಿಗೆ ನಿಲ್ಲಿಸಲಾಗಿದೆ.