Advertisement

ಎಲ್ಲ ಒಕ್ಕೂಟಗಳಲ್ಲೂ ಹಾಲು ಖರೀದಿ : ಬಾಲಚಂದ್ರ ಜಾರಕಿಹೊಳಿ ಸೂಚನೆ

01:53 AM Apr 02, 2020 | Hari Prasad |

ಬೆಂಗಳೂರು: ರಾಜ್ಯದ ಹಾಲು ಉತ್ಪಾದಕರಿಂದ ಎಲ್ಲ 14 ಒಕ್ಕೂಟಗಳ ವ್ಯಾಪ್ತಿಯಲ್ಲಿ ದಿನಕ್ಕೆ ಎರಡು ಬಾರಿ ತಪ್ಪದೆ ಗುಣಮಟ್ಟದ ಹಾಲು ಖರೀದಿಸಬೇಕು ಎಂದು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚಿಸಿದ್ದಾರೆ.

Advertisement

ಕೋವಿಡ್‌-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಎಂಎಫ್ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಲ್ಲಿ ಈ ಸೂಚನೆ ನೀಡಿ, ಕೋವಿಡ್‌-19 ವೈರಸ್‌ ಹಾವಳಿಯಿಂದ ಉಂಟಾದ ಕ್ಲಿಷ್ಟಕರ ಸಂದರ್ಭದಲ್ಲಿ ಪಶು ಆಹಾರಕ್ಕೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಎಪ್ರಿಲ್‌ ಅಂತ್ಯದವರೆಗೂ ಪ್ರತಿ ಟನ್‌ ಪಶು ಆಹಾರಕ್ಕೆ 500 ರೂ. ರಿಯಾಯಿತಿ ನೀಡಬೇಕು ಎಂದರು.

ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬಂದಿಗೆ ನಿತ್ಯ ಒಂದು ದಿನದ ಹೆಚ್ಚುವರಿ ವೇತನ ನೀಡಲು ಅಥವಾ ಪರಿಹಾರ ರಜೆಗೂ ಅವಕಾಶ, ಗುತ್ತಿಗೆ ನೌಕರರು ಪ್ರತಿ ದಿನ 500 ರೂ. ಹೆಚ್ಚುವರಿಯಾಗಿ ಹಾಗೂ ಹಾಲು ಮತ್ತದರ ಉತ್ಪನ್ನಗಳ ಸಾಗಣೆ ಮಾಡುವ ವಾಹನ ಚಾಲನಾ ಸಿಬಂದಿಗೆ ಪ್ರೋತ್ಸಾಹಧನ ರೂಪದಲ್ಲಿ ನೀಡುವುದು, ಈ ಪ್ರೋತ್ಸಾಹಧನವನ್ನು ಸಿದ್ಧ ಪಶು ಆಹಾರ ಮತ್ತು ಕಚ್ಚಾ ಆಹಾರ ಪೂರೈಸುವ ವಾಹನ ಚಾಲಕರು, ಹಾಲು ಮತ್ತದರ ಉತ್ಪನ್ನಗಳನ್ನು ಸಾಗಿಸುವ ಚಾಲನಾ ಸಿಬಂದಿಗೂ ನೀಡಲು ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next