Advertisement
ಸರ್ವರಿಗೂ ಒಂದೇ ವಸ್ತ್ರ, ಸರ್ವರಿಗೂ ಒಂದೇ ಮಂತ್ರ. ಇದು ಪವಿತ್ರ ಹಜ್ ಯಾತ್ರೆ. ಇಸ್ಲಾಂನ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ದಿನದಂದು ಆಚರಿಸಲ್ಪಡುವ ಹಬ್ಬವೇ ಬಕ್ರೀದ್. ಇಸ್ಲಾಂ ಧರ್ಮದ ರೋಚಕ ಇತಿಹಾಸವನ್ನು ಪುನರ್ ಸ್ಮರಿಸುವ ಹಬ್ಬ. ಸೌಹಾರ್ದದ ಅಂಗಣದಲ್ಲಿ ಸಂಭ್ರಮದಿಂದ ಆಚರಿಸುವ ಹಬ್ಬ ಈದುಲ್ ಅಝಾ: ಇಸ್ಲಾಂ ಧರ್ಮದ ಎರಡು ಪ್ರಧಾನ ಹಬ್ಬಗಳಲ್ಲಿ ಒಂದೆನಿಸಿರುವ ಈದುಲ್ ಅಝಾವನ್ನು ಭಾರತೀಯರು ಬಕ್ರೀದ್ ಎಂದು ಕರೆಯುತ್ತಾರೆ. ಬಕ್ರೀದ್ ಜಾಗತಿಕ ಮುಸಲ್ಮಾನರು ಅತ್ಯಂತ ಪಾವಿತ್ರÂದಿಂದ ಆಚರಿಸುವ ಹಬ್ಬಗಳಲ್ಲೊಂದು. ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿ ಪ್ರತಿಯೊಬ್ಬ ಮುಸಲ್ಮಾನರು ಪ್ರಾಣಿಬಲಿಯೊಂದಿಗೆ ಈ ಹಬ್ಬಕ್ಕೆ ಅರ್ಥತೆಯನ್ನು ಕೊಡುತ್ತಾರೆ. ಈ ಹಬ್ಬದ ಹಿಂದೆ ನಾಲ್ಕು ಸಾವಿರ ವರ್ಷಗಳ ಹಿಂದಿನ ಸಂಬಂಧವೊಂದಿದೆ. ಇಸ್ಲಾಮಿನ ಪ್ರವಾದಿ ವರ್ಯರಲ್ಲೋರ್ವರಾದ ಇಬ್ರಾಹಿಂ (ಅ.ಸ.) ಅವರಿಗೆ ಒಂದು ದಿನ ಮಗನನ್ನು ಬಲಿ ಕೊಡುವಂತೆ ಕನಸು ಬೀಳುತ್ತದೆ. ಅಲ್ಲಾಹನ ಆಜ್ಞೆಯಂತೆ ತನ್ನ 13ರ ಹರೆಯದ ಏಕ ಮಗನಾದ ಇಸ್ಮಾಯಿಲ್ರನ್ನು ಬಲಿ ಅರ್ಪಿಸಲು ಮುಂದಾದಾಗ ಇಬ್ರಾಹಿಂರ ತ್ಯಾಗ ಸನ್ನದ್ಧತೆಯನ್ನು ಪರೀಕ್ಷಿಸಿದ ಸೃಷ್ಟಿಕರ್ತನು ಪುತ್ರನ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆದೇಶಿಸುತ್ತಾನೆ.
Related Articles
Advertisement
ಇಸ್ಲಾಂನ ಪಂಚಸ್ತಂಭಗಳಲ್ಲಿ ಕೊನೆಯದಾಗಿರುವ ಹಜ್ ಪ್ರವಾದಿವರ್ಯರು ಹೇಳಿದಂತೆ ಸ್ವೀಕೃತವಾದ ಹಜ್ಗೆ ಸಿಗುವ ಪ್ರತಿಫಲವೇ ಸ್ವರ್ಗವಾಗಿದೆ. ಪವಿತ್ರಾ ಮಕ್ಕಾದಲ್ಲಿರುವ ಕಅಬಾ ಎಂಬುದು ಜಗತ್ತಿನಾದ್ಯಂತ ವಿರುವ ಕೋಟ್ಯಂತರ ಮುಸಲ್ಮಾನರ ಭಾವನಾತ್ಮಕ ಪ್ರತೀಕವಾಗಿದೆ. ಈ ಪ್ರಪಂಚದಲ್ಲಿ ನಿರ್ಮಿಸಲ್ಪಟ್ಟ ಅಲ್ಲಾಹನ ಭವನವಾದ ಕಅಬಾಗೆ ಹಝÅತ್ ಆದಂ (ಅ.ಸ) ಅವರು ಹಿಂದಿನಿಂದ 40 ಹಜ್ಜನ್ನು ನಿರ್ವಹಿಸಿದ ಬಗ್ಗೆ ಉಲ್ಲೇಖಗಳಿವೆ.
ಜಿಬ್ರಿಲ್ (ಅ.ಸ.)ಅವರು ಒಂದೆಡೆ ಆದಂ (ಅ.ಸ.)ರವರಲ್ಲಿ ಹೇಳುತ್ತಾರೆ. “ನಿಮಗೆ ನಾಲ್ಕು ಸಾವಿರ ವರ್ಷಗಳಿಂದ ಮಲಕುಗಳು (ದೇವದೂತರು) ಈ ಭವನನ್ನು ತ್ವವಾಫ್ (ಪ್ರದಕ್ಷಿಣೆ) ಗೈಯುತ್ತಲಿದ್ದಾರೆ.’ ಪ್ರವಾದಿ ನೂಹ್ (ಅ.) ಅವರ ಕಾಲದಲ್ಲಿ ಉಂಟಾದ ಜಲಪ್ರಳಯದಿಂದ ಹಾನಿಗೊಂಡ ಕಅಬಾ ಮಂದಿರ ವನ್ನು ಅಲ್ಲಾಹನ ಆಜ್ಞೆಯಂತೆ ಹಝತ್ ಇಬ್ರಾಹಿಂ (ಅ.ಸ.) ರವರು ಪುನರ್ ನಿರ್ಮಿಸಿದರು. ಅವರ ಪುತ್ರ ಹಝತ್ ಇಸ್ಮಾಯಿಲ್ ಅವರು ಸಹಾಯಕರಾಗಿ ನಿಂತರು. ಮಂದಿರ ನಿರ್ಮಾಣ ಗೊಂಡ ಬಳಿಕ ಹಝತ್ ಇಬ್ರಾಹಿಂ ಅವರು ಅಲ್ಲಾಹನ ನಿರ್ದೇಶದಂತೆ ಜನರನ್ನು ಆ ಭವನದತ್ತ ಅಹ್ವಾನಿಸಿದರು. ಆ ಆಹ್ವಾನಕ್ಕೆ ಓಗೊಟ್ಟ ಜಗತ್ತಿನ ಮೂಲೆ ಮೂಲೆಗಳಿಂದ ಕೋಟ್ಯಂತರ ಜನರು ಪವಿತ್ರ ಹಜ್ಕರ್ಮವನ್ನು ನಿರ್ವಹಿಸಲು ಮಕ್ಕಾದತ್ತ ಧಾವಿಸುತ್ತಾರೆ.
ತ್ಯಾಗದ ಸಂದೇಶ: ಬಕ್ರೀದ್ ಹಬ್ಬದಂದು ನಡೆಯುವ ಬಲಿ ಬಗ್ಗೆ ಪವಿತ್ರ ಖುರಾನ್ನಲ್ಲಿ ಈ ರೀತಿ ಉಲ್ಲೇಖಗೊಂಡಿದೆ. “ಅವುಗಳ ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹನಿಗೆ ತಲುಪುದಿಲ್ಲ, ಆದರೆ ಅವನಿಗೆ ತ್ಯಾಗ, ಧರ್ಮನಿಷ್ಠೆ ತಲುಪುತ್ತದೆ ’(ಅಧ್ಯಾಯ22, ಸೂಕ್ತ 32). ಬಕ್ರೀದ್ ಹಬ್ಬ ಕೇವಲ ಸಂತೋಷಕ್ಕೆ ಮಾತ್ರ ಒತ್ತು ನೀಡದೆ, ಜೀವನ ಪರ್ಯಂತ ಸಂತೋಷದಿಂದ ಮತ್ತು ಸಮಾಜದ ಸಂತೋಷವನ್ನು ಕದಡದೆ ಕೃತಾರ್ಥ ಬದುಕನ್ನು ಸಾಗಿಸಲು ಬೇಕಾದಂತಹ ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಇಸ್ಲಾಮಿನ ಹಬ್ಬಗಳಲ್ಲಿ ಮಾನವೀಯ ಹಿತಚಿಂತನೆ ಮತ್ತು ಸಹಾನುಭೂತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಕ್ರೀದ್ ದಿನದಂದು ಬಲಿ ನೀಡಲಾದ ಜಾನುವಾರು ಮಾಂಸವನ್ನು ಬಡಬಗ್ಗರಿಗೆ ವಿತರಿಸಬೇಕೆಂಬ ಕಡ್ಡಾಯ ವಿಧಿ ಇಸ್ಲಾಮಿನಲ್ಲಿದೆ. ಹಬ್ಬದೂಟದಿಂದ ಯಾರೂ ವಂಚಿತರಾಗಬಾರದೆಂಬ ಮೂಲ ಉದ್ದೇಶವೇ ಇದರಲ್ಲಿ ಅಡಗಿದೆ.
ಹಬ್ಟಾಚರಣೆಯ ಸಂಭ್ರಮ: ಇಸ್ಲಾಮಿಕ್ ಕ್ಯಾಲೆಂಡರ್ನ ಕೊನೆಯ ತಿಂಗಳಾದ ದುಲ್ಹಜ್ ತಿಂಗಳ 10ನೇ ದಿನದಂದು ಆಚರಿಸುವ ಬಕ್ರೀದ್ ಹಬ್ಬ ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವ ಹಬ್ಬ. ಚಾರಿತ್ರಿಕ ಹಿನ್ನೆಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸಲ್ಪಡುವ ಈ ಹಬ್ಬ ಸಮಕಾಲೀನ ಜಗತ್ತಿಗೆ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶವನ್ನೂ ನೀಡುತ್ತವೆ. ಬಕ್ರೀದ್ ಹಬ್ಬ ಬಲಿ ಕೊಡುವ ಹಬ್ಬ ಎಂಬುವುದಕ್ಕಿಂತಲೂ ಅದು ತ್ಯಾಗ ಬಲಿದಾನದ ಸಂಕೇತದ ಪ್ರತೀಕವಾಗಿ ಆಚರಿಸಲ್ಪಡುತ್ತವೆ. ಅಲ್ಲಾಹು ಅಕºರ್..ಅಲ್ಲಾಹು ಅಕºರ್,,ಎಂಬ ದೈವ ಕೀರ್ತನೆ ಎಲ್ಲೆಡೆ ಮೊಳಗಿದಾಗ ಹಬ್ಬಕ್ಕೆ ಮುಹೂರ್ತ ದೊರೆಯುತ್ತದೆ. ಹಬ್ಬದಂಗವಾಗಿ ಮುಂಜಾನೆ ಬೇಗ ಎದ್ದು ಹೊಸ ಉಡುಪು ಧರಿಸಿ ಸುಗಂಧ ದ್ರವ್ಯ ಸಿಂಪಡಿಸಿ ಎಲ್ಲರೂ ಮಸೀದಿಗೆ ತೆರಳುತ್ತಾರೆ.ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ನಮಾಜು ನಡೆಯುತ್ತವೆ. ಹಬ್ಬದಂದು ಈದ್ಗಾ ಮೈದಾನಕ್ಕೆ ತೆರಳುವ ಮುಸಲ್ಮಾನ ಬಾಂಧವರು ಮನುಕುಲದ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ.
ಬಳಿಕ ಬಂಧು ಮಿತ್ರಾದಿಗಳ ಮನೆಗೆ ತೆರಳಿ ಪರಸ್ಪರ ಸಂಬಂಧವನ್ನು ಸುದೃಢಗೊಳಿಸುವುದು ರೂಢಿಗಳಲ್ಲೊಂದು. ಕೌಟುಂಬಿಕ ಬಾಂಧವ್ಯ ಬೆಸುಗೆಗೆ ಇದು ಶುಭ ದಿನ. ಈದ್ ನಮಾಜಿನ ಬಳಿಕ ಬಂಧು ಮಿತ್ರಾದಿಗಳು ಪರಸ್ಪರ ಹಸ್ತದಾನ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಸಂದೇಶಗಳನ್ನು ಹಂಚಿಕೊಳ್ಳುತ್ತಾರೆ.
ನಮ್ಮ ನಡುವೆ ಪ್ರಿತಿ ವಿಶ್ವಾಸ ನಷ್ಟಗೊಂಡಿತುವ ಪ್ರಸಕ್ತ ಸನ್ನಿವೇಶದಲ್ಲಿ ತನ್ನ ಸ್ವಸಂತೋಷವೇ ಪರಮ ಪ್ರಾಧಾನ್ಯವಾಗಿ , ಜಾಗತೀಕರಣದ ಭರಾಟೆಯಲ್ಲಿ ರೀತಿರಿವಾಜುಗಳನ್ನು ಮರೆತು ಆಧುನಿಕ ಆಡಂಬರದಲ್ಲಿ ಮೈಮೆರೆತಿರುವಾಗ ಬಕ್ರೀದ್ ಹಬ್ಬ ತ್ಯಾಗ ಸನ್ನದ್ಧತೆಯ ಪ್ರತೀಕವಾಗಿ ನಮ್ಮ ಮುಂದೆ ಬಂದಿದೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಡವ ಬಲ್ಲಿದ, ಮೇಲು-ಕೀಳು ಎಂಬ ಚಿಂತನೆಯನ್ನು ಹೊಂದದೆ, ಎಲ್ಲರನ್ನೂ ಸಮಾನತೆಯಿಂದ ಕಾಣುವ ಸಂದೇಶವನ್ನು ನೀಡುತ್ತದೆ. ಎಲ್ಲರೂ ಪರಸ್ಪರ ಆಲಿಂಗನದ ಮೂಲಕ ಹಬ್ಬದ ಸಂದೇ ಶವನ್ನು ವಿನಿಮಯ ಮಾಡುತ್ತಾರೆ. ಸಮಾಜದಲ್ಲಿ ಶಾಂತಿ, ಸಮಾದಾನ ಹಾಗೂ ಮೈತ್ರಿಯೊಂದಿಗೆ ಭಾತೃತ್ವದ ಬದುಕು ಸಾಗಿಸಬೇಕೆಂಬುದೇ ಇಸ್ಲಾಂ ಧರ್ಮದ ಮೂಲ ಸಂದೇಶ.
ಇವತ್ತು ಮನುಷ್ಯ-ಮನುಷ್ಯರೊಳಗೆ ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ತಿಕ್ಕಾಟದ ನಡುವೆ ಆಗಮಿಸಿದ ಈದ್ ಹಬ್ಬ ಯಾವುದೇ ಸಡಗರಗಳಿಗೆ ಸೀಮಿತವಾಗದೆ ಪರಸ್ಪರ ಬಾಂಧವ್ಯತೆಯ ಸಹೋದರತ್ವದ ಸಮಾನತೆಯ ಬದುಕಿಗೆ ವ್ಯಾಖ್ಯಾನವಾಗುತ್ತಿರುವ ಜೊತೆಗೆ ಅಶುದ್ಧಿಯಿಂದ ಮುಕ್ತಿಗೊಂಡು ಪರಮಪಾವನವಾಗಿ ನವಜೀವನದ ಆಕಾಂಕ್ಷೆಯೊಂದಿಗೆ ಅಚ್ಚ ಹೊಸ ಕನಸುಗಳೊಂದಿಗೆ ಮುಂದಡಿಯುವ ಭಾವುಕದ ಕ್ಷಣಗಳಾಗಲಿ. ಬಕ್ರಿದ್ ಹಬ್ಬ ಸಂತಸ ಸಡಗರ ಮತ್ತು ಆಚರಣೆಗಳ ಜೊತೆಗೆ ಜೀವನಪರ್ಯಂತ ಎದುರಾಗುವ ವಿಭಿನ್ನ ಸಂದರ್ಭಗಳಲ್ಲಿ ನೆಮ್ಮದಿ, ಶಾಂತಿ ಒದಗಿಸಲಿ ಎಂದು ಹಾರೈಸೋಣ… ಸರ್ವರಿಗೂ ಈದ್ ಮುಬಾರಕ್..
ಪವಿತ್ರ ಹಜ್ವಿರಾಟ್ಹಜ್ ಯಾತ್ರೆಯ ಸಂದರ್ಭದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ ಈದುಲ್ ಅಝಾ. ಇಸ್ಲಾಮಿನ ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ್ರವರ ಕರ್ಮಭೂಮಿಯಾಗಿದ್ದ ಪವಿತ್ರ ಮಕ್ಕಾ ಮತ್ತು ಮದೀನಾ ನಗರದಲ್ಲಿ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳ ಪೂರೈಸುವ ಕ್ಷಣಗಳಾಗಿದೆ. ವಿಶ್ವದ ಮೂಲೆ ಮೂಲೆಗಳಿಂದ ಮಿಲಿಯಾಂತರ ಮುಸಲ್ಮಾನರು ಪವಿತ್ರ ಹಜ್ ಯಾತ್ರೆಯನ್ನು ನಿರ್ವಹಿಸುತ್ತಾರೆ.
ಮುಸಲ್ಮಾನರ ಜೀವಿತದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕೆಂಬ ಆಶಯ ಇಸ್ಲಾಂ ಧರ್ಮದಲ್ಲಿದೆ.
ಈ ಆಶಯದೊಂದಿಗೆ ಜಗತ್ತಿನಾದ್ಯಂತ ವಿರುವ ಮುಸ್ಲಿಮರು ಅತ್ಯಂತ ಪಾವಿತ್ರÂ ಸ್ಥಳವಾದ ಕಅಬಾದ ಪರಿಸರವನ್ನು ತಲುಪುತ್ತಾರೆ. ಕಅಬಾ ನೆಲೆಗೊಂಡಿರುವ ಮಕ್ಕಾದಲ್ಲಿ ನಡೆಯುವ ಬೃಹತ್ ಹಜ್ ಸಮಾವೇಶ ಏಕದೇವತ್ವದ ಸಿದ್ಧಾಂತದಡಿಯಲ್ಲಿ ಜನರನ್ನು ಒಗ್ಗೂಡಿಸುವ ಮಾನವ ಭಾತೃತ್ವದ ವಿಶ್ವ ಸಮ್ಮೇಳನವಾಗಿದೆ. ಏಕ ವಸ್ತ್ರಧಾರಣೆಯ ಮಿಲಿಯಾಂತರ ಜನರು ಒಗ್ಗೂಡುವ ಸಂಗಮಭೂಮಿ ಯಾಗಿದೆ ಪವಿತ್ರ ಮಕ್ಕಾ ನಗರಿ. – ಹರ್ಷಾದ್ ವರ್ಕಾಡಿ