Advertisement

ಬುಕ್ಕಾಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಯಂದಿರ ಸಭೆ

08:04 PM Mar 07, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆಯ ನಿಟ್ಟಿನಲ್ಲಿ, ಈಗಾಗಲೇ ಶಾಲೆಗೆ ಗೈರುಹಾಜರಿಯಾಗುತ್ತಿದ್ದ ಮಕ್ಕಳ ಮನೆಗಳಿಗೆ ತಹಶಿಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದೊಂದಿಗೆ ತರಗತಿಗೆ ಗೈರು ಹಾಜಾರಾಗುತ್ತಿದ್ದ ವಿದ್ಯಾರ್ಥಿಗಳ ಪೋಷಕರ ಮನೆ ಮನೆಗೆ ಭೇಟಿ ನೀಡಿ, ಎಲ್ಲಾ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಫಲಪ್ರದವಾಗಿವೆ. ಹಾಗೂ ಎರಡನೆಯ ಭಾಗವಾಗಿ ತಾಯಂದಿರ ಸಭೆಯನ್ನು ಹಮ್ಮಿಕೊಂಡು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಜವಾಬ್ದಾರಿ ಇರುತ್ತದೆ ಎಂದು ತಹಶಿಲ್ದಾರ್ ನಹೀದಾ ಜಮ್ ಜಮ್ ತಿಳಿಸಿದರು.

Advertisement

ಅವರು ತಾಯಂದಿರ ಸಭೆಯನ್ನು ಸರ್ಕಾರಿ ಪ್ರೌಢಶಾಲೆ ಬುಕ್ಕಾಪಟ್ಟಣದ ಪಾಠಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿ.. ಯಾವ ಮಕ್ಕಳು ದಡ್ಡರಿರುವುದಿಲ್ಲ ,ಎಲ್ಲಾ ಮಕ್ಕಳಲ್ಲೂ ಉತ್ತಮವಾದ ಬುದ್ಧಿಶಕ್ತಿ ಇರುತ್ತದೆ. ಅದನ್ನು ಹೊರಗೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಅವರಿಗೆ ಉತ್ತಮವಾದ ವಾತಾವರಣವನ್ನು ನಿರ್ಮಿಸಬೇಕು . ಅಲ್ಲದೇ ತರಗತಿಗಳಲ್ಲಿ ಶಿಕ್ಷಕರು ದೈನಂದಿನ ನೈಜ ಘಟನೆಗಳನ್ನು ಉದಾಹರಿಸಿ ಯಾವುದೇ ಸೌಲಭ್ಯವಿಲ್ಲದ ಮಕ್ಕಳೂ ತುಂಬಾ ಕಷ್ಟಪಟ್ಟು ಓದಿ ಮುಂದೆ ಬಂದ ಅನೇಕ ಉದಾಹರಣೆಗಳಿರುವ ನೈಜ ಕಥೆಯನ್ನು ಸಭೆಯಲ್ಲಿ ವಿವರಿಸಿದರು. ಪೋಷಕರು ದೂರದರ್ಶನ ನೋಡದೆ ಮಕ್ಕಳ ಕಡೆ ವಿಶೇಷ ಗಮನ ಹರಿಸಲು ಹಾಗೂ ಮಕ್ಕಳು ಓದುವ ನಿಟ್ಟಿನಲ್ಲಿ ಯಾವ ಪೋಷಕರು ತಾತ್ಸಾರ ಮನೋಭಾವದಿಂದ ಮಕ್ಕಳನ್ನು ಕಾಣಬಾರದು ಏಕೆಂದರೆ ಯಾರು ಬೇಕಾದರೂ ಅತ್ಯಂತ ಉನ್ನತ ಸ್ಥಾನವನ್ನು ನಮ್ಮ ವ್ಯವಸ್ಥೆಯಲ್ಲಿ ತನ್ನ ಬುದ್ಧಿಶಕ್ತಿಯಿಂದ ತನ್ನ ಸವಂತ ಸಾಧನೆಯ ಬಲದಿಂದ ಪಡೆಯಬಹುದಾಗಿದೆ ,ಇಂತಹ ಅನೇಕ ಉದಾಹರಣೆಗಳು ನಮ್ಮಲ್ಲಿವೆ ಎಂದು ತಾಯಂದಿರ ಸಭೆಗೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್ ಸುಧಾಕರ್ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಪೋಷಕರು ಹಾಗೂ ತಾಯಂದಿರು ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣವನ್ನು ಕಲ್ಪಿಸಿ ಅಭ್ಯಾಸ ಮಾಡಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ತಾಯಂದಿರಿಗೆ ತಿಳಿಸಿದರು. ಇಂತಹ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿವೆ ಅಲ್ಲದೆ ನಮ್ಮ ಶಿಕ್ಷಕರು ಕೂಡ ಅತ್ಯಂತ ಕ್ರಿಯಾಶೀಲ ಶಿಕ್ಷಕರು ಮಕ್ಕಳ ಶಿಕ್ಷಣಕ್ಕೆ ಭದ್ರಬುನಾದಿ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಯುದ್ಧ ಆರಂಭಕ್ಕೆ ಮೊದಲೇ ತವರಿಗೆ ಮರಳಿದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ ತಹಶೀಲ್ದಾರ್ 

10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಮುಖಾಮುಖಿ ಮಾತುಕತೆ ನಡೆಸಿದರು ಅತ್ಯಂತ ಕ್ಲಿಷ್ಟ ಸಮಸ್ಯೆಗಳು ,ಓದುವ ವಿಧಾನ, ಮನೆಯಲ್ಲಿ ಅವರಿಗಿರುವ ತೊಂದರೆಗಳು ಎಲ್ಲವುಗಳನ್ನು ಸವಿಸ್ತಾರವಾಗಿ ವಿವರಿಸಿದರು . ತಾವೆಲ್ಲರೂ ತಮ್ಮ ಜೀವನದಲ್ಲಿ ಮುಂದೆ ಬರಬೇಕಾದರೆ ಇರುವ 20 ದಿನಗಳಲ್ಲಿ ಅತ್ಯಂತ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಅದು ಹೇಗೆಂದರೆ ನಿಮ್ಮದೇ ಆದಂತಹ ವೇಳಾಪಟ್ಟಿಯನ್ನು ನೀವೆಲ್ಲರೂ ಸಿದ್ಧಪಡಿಸಿಕೊಂಡು ಮೊದಲ10 ದಿನಗಳಲ್ಲಿ ಅತ್ಯಂತ ಕ್ಲಿಷ್ಟ ಸಮಸ್ಯೆಗಳಿಗೆ ಆದ್ಯತೆ ಕೊಡಬೇಕು, ಸುಲಭವಾದ ವಿಷಯಗಳಿಗೆ ನಂತರದ 10 ದಿನಗಳಲ್ಲಿ ಅವಕಾಶ ಕಲ್ಪಿಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದು. ನೀವು ಶಿಸ್ತುಬದ್ಧವಾಗಿ ಪ್ರತಿದಿನ ನಾಳೆ ನಾನು ಏನು ಮಾಡಬೇಕೆಂದು ಮಲಗುವ ಮುಂಚೆ ಒಂದು ಪಟ್ಟಿಯನ್ನು ಮಾಡಬೇಕು, ನಾಳೆ ಮಾಡಿದ ಪಟ್ಟಿಗೆ ಅನುಗುಣವಾಗಿ ಅವುಗಳ ಪಾಲನೆಯಾಗಬೇಕು ಆಗ ಏನಾದರೂ ನಾವು ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನು ದಿನನಿತ್ಯ ನೆನಪಿಸಿಕೊಳ್ಳುತ್ತಿರಬೇಕು ಅದರಂತೆ ಕಾರ್ಯೋನ್ಮುಖರಾದಾಗ ಅಂದುಕೊಂಡಿದ್ದನ್ನು ಸಾಧಿಸಬಹುದಾಗಿದೆ ,ಎಂಬುದಾಗಿ ಮಕ್ಕಳಿಗೆ ಮನೆಯ ವೇಳಾಪಟ್ಟಿ, ಶಿಕ್ಷಕರು ನೀಡುವ ಮಾರ್ಗದರ್ಶನ, ತಂದೆ-ತಾಯಿಯರ ಸಹಕಾರ ಪಡೆದು ಏನಾದರೂ ಆಗುವ ಅವಕಾಶ ನಿಮಗೆ ಮಾತ್ರ ಒದಗಿಬಂದಿದೆ ಯಾವ ಮಕ್ಕಳು ಇಂತಹ ಅವಕಾಶದಿಂದ ವಂಚಿತರಾಗಬಾರದು ಎಂದರು.

Advertisement

ಕೊನೆಯಲ್ಲಿ ಹಾಜರಿದ್ದ ಎಲ್ಲಾ ತಾಯಂದಿರಿಗೂ ಹಾಗೂ ಪೋಷಕರಿಗೂ ಅವರ ಮಕ್ಕಳಿಂದ ಪಾದಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಶಾಲೆಯಲ್ಲಿ ಹಾಜರಿದ್ದ ಚಂದ್ರಕಲಾ.ಎಸ್, ಜಿ.ಎಂ ದೀಪಾರಾಣಿ, ವಿ.ಟಿ. ದೇವಿರಮ್ಮ, ಸುಶೀಲಾ .ಎಂ.ಕೆ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಸದಸ್ಯರಾದ ಶ್ರೀಮತಿ ಶಾಂತಮ್ಮ , ಶ್ರೀಮತಿ ಶೈಲಜಾ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕರು ಸಭೆಯ ಲಕ್ಷ್ಮಿಪುತ್ರರವರು ಮಕ್ಕಳು ಓದುವ ನಿಟ್ಟಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನಮ್ಮೊಡನೆ ಮುಕ್ತವಾಗಿ ಯಾವಾಗ ಬೇಕಾದರೂ ಹಂಚಿಕೊಳ್ಳಬೇಕೆಂದು ತಿಳಿಸುವ ಮುಖೇನ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕ ಹೆಚ್ ಆರ್ ಅಶೋಕ್ ಅವರು ಎಲ್ಲರಿಗೂ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next