Advertisement

ಬಕಾಸುರನಿಗೆ ಯಶ್‌ ಧ್ವನಿ

11:09 AM Mar 07, 2018 | Team Udayavani |

ಒಬ್ಬ ನಟನ ಸಿನಿಮಾಕ್ಕೆ ಮತ್ತೂಬ್ಬ ನಟ ಧ್ವನಿ ನೀಡುವ ಮೂಲಕ ಸಿನಿಮಾ ತಂಡವನ್ನು ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಈಗಾಗಲೇ ಅನೇಕ ನಟರು ಬೇರೆ  ಬೇರೆ ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಈಗ ಯಶ್‌ ಸರದಿ. ಹೌದು, ಯಶ್‌ ಕೂಡಾ ಸಿನಿಮಾವೊಂದಕ್ಕೆ ಧ್ವನಿ ನೀಡಿದ್ದಾರೆ. ಅದು “ಬಕಾಸುರ’ ಚಿತ್ರಕ್ಕೆ. “ಕರ್ವ’ ತಂಡ ಸೇರಿಕೊಂಡು ಮಾಡಿರುವ “ಬಕಾಸುರ’ ಚಿತ್ರದ ಟ್ರೇಲರ್‌ಗೆ ಯಶ್‌ ಕಾಮೆಂಟರಿ ಮಾಡಿದ್ದಾರೆ.

Advertisement

“ಬಕಾಸುರ’ ಚಿತ್ರದ ಟ್ರೇಲರ್‌ ಸೋಮವಾರ ಬಿಡುಗಡೆಯಾಗಿದ್ದು, ಯಶ್‌ ಅವರ ಧ್ವನಿಯೊಂದಿಗೆ ಟ್ರೇಲರ್‌ ತೆರೆದುಕೊಳ್ಳುತ್ತದೆ. “ಜಗತ್ತಲ್ಲಿ ದುಡ್ಡಿಗಾಗಿ ಏನೇನೋ ಮಾಡುತ್ತಾರೆ, ಆದರೆ, ಈತ ಮಾತ್ರ ದುಡ್ಡಿಗಾಗಿ ಏನ್‌ ಬೇಕಾದ್ರೂ ಮಾಡ್ತಾನೆ …’ ಎಂಬ ಮಾತಿನೊಂದಿಗೆ “ಬಕಾಸುರ’ ಚಿತ್ರದ ಪಾತ್ರ ಪರಿಚಯ ಮಾಡುತ್ತಾರೆ.

ಚಿತ್ರಕ್ಕೆ ಯಶ್‌ ಧ್ವನಿ ನೀಡಿದರೆ, ಟ್ರೇಲರ್‌ ಬಿಡುಗಡೆಗೆ  ನಟ ಮುರುಳಿ ಅತಿಥಿಯಾಗಿ ಬಂದಿದ್ದರು. “ನಿಮ್ಮ ತಂಡದ ಮೇಲೆ ಎಲ್ಲರಿಗೂ ಪ್ರೀತಿ, ವಿಶ್ವಾಸವಿದೆ. ಅದೇ ಕಾರಣದಿಂದ ನಿಮಗೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದರು. ಚಿತ್ರದಲ್ಲಿ ರವಿಚಂದ್ರನ್‌, ರೋಹಿತ್‌, ಕಾವ್ಯಾ ಸೇರಿದಂತೆ ಅನೇಕರು ನಟಿಸಿದ್ದಾರೆ.

ರವಿಚಂದ್ರನ್‌ ಇಲ್ಲಿ ನೆಗೆಟಿವ್‌ ಶೇಡ್‌ನ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಓಕೆ, ಚಿತ್ರದಲ್ಲಿ ಹಣದ ಹಿಂದೆ ಬೀಳುವ ವ್ಯಕ್ತಿ ಏನೆಲ್ಲಾ ಮಾಡುತ್ತಾನೆ, ಆತನ ಜೀವನದಲ್ಲಿ ನಡೆಯುವ ರೋಚಕ ಘಟನೆಗಳೇನೂ ಎಂಬುದರ ಸುತ್ತ ಸಿನಿಮಾ ಸಾಗುತ್ತದೆಯಂತೆ. ಅದೇ ಕಾರಣಕ್ಕೆ “ಬಕಾಸುರ’ ಚಿತ್ರಕ್ಕೆ “ಫಾರ್‌ ಮನಿ’ ಎಂಬ ಟ್ಯಾಗ್‌ಲೈನ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next