Advertisement
65 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಅವರು ಪ್ಯುರ್ಟೊ ರಿಕೊದ ಸೆಬಾಸ್ಟಿ ಯನ್ ರಿವೆರಾ ಅವರನ್ನು 11-9 ಅಂಕಗಳಿಂದ ಮಣಿಸಿದರು. ಇದು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಬಜರಂಗ್ ಗೆದ್ದ ನಾಲ್ಕನೇ ಪದಕ ವಾಗಿದೆ. ಅವರು ಈ ಮೊದಲು 2013 ಮತ್ತು 2019ರಲ್ಲಿ ಕಂಚು ಮತ್ತು 2018ರಲ್ಲಿ ಬೆಳ್ಳಿಯ ಪದಕ ಜಯಿ ಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಪಡೆದಿದ್ದರು.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 30 ಮಂದಿ ಸ್ಪರ್ಧಿಸಿದ್ದರು. ಆದರೆ ಭಾರತ ಕೇವಲ 2 ಕಂಚಿನ ಪದಕ ಗೆಲ್ಲಲು ಶಕ್ತವಾಯಿತು. ಬಜರಂಗ್ ಅವರಲ್ಲದೇ ವಿನೇಶ್ ಪೊಗಟ್ ವನಿತೆಯರ 53 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಅವರು ಸ್ವೀಡನ್‌ನ ಎಮ್ಮಾ ಮಾಲ್ಮಗ್ರೆನ್ ಅವರನ್ನು 8-0 ಅಂತರದಿಂದ ಕೆಡಹುವ ಮೂಲಕ ಈ ಸಾಧನೆ ಮಾಡಿದ್ದರು.
Related Articles
Advertisement