Advertisement
ಪಂದ್ಯದ ಕೊನೆಯ 60 ಸೆಕೆಂಡ್‌ಗಳಲ್ಲಿ 2-7 ಹಿನ್ನಡೆಯಲ್ಲಿದ್ದ ಕಾಮನ್ವೆಲ್ತ್ ಮತ್ತು ಏಶ್ಯನ್ ಗೇಮ್ಸ್ ಚಾಂಪಿಯನ್ ಭಜರಂಗ್ ಅನಂತರ ಅತ್ಯದ್ಭುತ ಪ್ರದರ್ಶನ ನೀಡಿ 10 ಅಂಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಕೂಟದಲ್ಲಿ ಭಜರಂಗ್‌ಗೆ ಇದು 2ನೇ ಚಿನ್ನದ ಪದಕವಾಗಿದೆ. 2017ರ ಆವೃತ್ತಿಯಲ್ಲೂ ಭಜರಂಗ್ ಚಿನ್ನ ಜಯಿಸಿದ್ದರು. ಒಟ್ಟಾರೆಯಾಗಿ ಈ ಕೂಟದಲ್ಲಿ ಈ ಕುಸ್ತಿಪಟುವಿಗೆ ಇದು 5ನೇ ಪದಕ. ಈ ಪ್ರದರ್ಶನದ ಮೂಲಕ ಭಜರಂಗ್ ತನ್ನೆಲ್ಲ ಎದುರಾಳಿಗಳಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಬಲಿಷ್ಠ ಕ್ರೀಡಾಪಟು ಎಂಬ ಎಚ್ಚರಿಕೆ ರವಾನಿಸಿದ್ದಾರೆ.
57 ಕೆ.ಜಿ. ವಿಭಾಗದಲ್ಲಿ ಚೈನೀಸ್ ತೈಪೆಯ ಚಿಯಾ ತ್ಸೋ ಲಿಯೂ 4-0 ಅಂತರದಿಂದ ಸೋಲಿಸಿ ಕಂಚಿನ ಪದಕದ ಫ್ಲೇ ಆಫ್ಗೆ ಪ್ರವೇಶಿಸಿದ್ದ ರವಿ ಕುಮಾರ್ ಕಂಚಿನ ಪದಕದ ಪಂದ್ಯದಲ್ಲಿ ಜಪಾನಿನ ಯೂಕಿ ತಕಹಾಶಿ ಅವರ ವಿರುದ್ಧ 3-5 ಅಂತರದಿಂದ ಸೋತು ಪದಕ ತಪ್ಪಿಸಿಕೊಂಡರು.
ಉಳಿದಂತೆ 70 ಕೆ.ಜಿ. ಸ್ಪರ್ಧೆಯಲ್ಲಿ ರಜನೀಶ್ ಸೋಲನುಭವಿಸಿ ಕೂಟದಿಂದ ಹೊರನಡೆದಿದ್ದಾರೆ.
Related Articles
ಫೈನಲ್ ಪ್ರವೇಶಿಸಿದ್ದ ಭಾರತದ ಮತ್ತೋರ್ವ ಕುಸ್ತಿಪಟು ಪ್ರವೀಣ್ ರಾಣ್ 79 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು. ಅವರು ಇರಾನಿನ ಬಹ್ಮನ್ ಮೊಹಮ್ಮದ್ ತೈಮೌರಿ ವಿರುದ್ಧ 0-3 ಅಂತರದಿಂದ ಸೋತು ಬೆಳ್ಳಿ ಗೆದ್ದರು. ಸತ್ಯವರ್ಥ್ ಕದಿಯಾನ್ ಕೂಡ 97 ಕೆ.ಜಿ. ಸ್ಪರ್ಧೆಯ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನದ ಹೊಬಿನ್ ಗಾವೊ ವಿರುದ್ಧ 8-1 ಅಂತರದಿಂದ ಗೆದ್ದ ಕಂಚಿಗೆ ತೃಪ್ತಿಪಟ್ಟರು.
Advertisement