Advertisement

ಕುಸ್ತಿ: ಭಜರಂಗ್‌ಗೆ ಬಂಗಾರ

06:00 AM Jul 07, 2018 | Team Udayavani |

ಟಿಲಿಸಿ (ಜಾರ್ಜಿಯಾ): ಭಾರತದ ಯುವ ಕುಸ್ತಿಪಟು ಭಜರಂಗ್‌ ಪೂನಿಯ, ಟಿಲಿಸಿ ಗ್ರ್ಯಾನ್‌ ಪ್ರೀ ಕುಸ್ತಿ ಕೂಟದಲ್ಲಿ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಪುರುಷರ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ಇರಾನ್‌ನ ಆಟಗಾರ ಮೆಹರನ್‌ ನಾಸಿರಿ ವಿರುದ್ಧ 9-3 ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು. ಈ ಪ್ರದರ್ಶನದಿಂದ ಮುಂದಿನ ಏಶ್ಯಾಡ್‌ನ‌ಲ್ಲಿ ಭಾರತಕ್ಕೊಂದು ಚಿನ್ನದ ಆಶಾಕಿರಣ ಮೂಡಿದೆ. 

Advertisement

 ಕೂಟದಲ್ಲಿ ಭಾರತದ ಮತ್ತೋರ್ವ ಕುಸ್ತಿಪಟು ದೀಪಕ್‌ ಪೂನಿಯ ಕಂಚಿನ ಪದಕ ಗೆದ್ದಿದ್ದಾರೆ. 86 ಕೆ.ಜಿ. ವಿಭಾಗದ ಸೆಮಿಫೈನಲ್‌ ಸುತ್ತಿನಲ್ಲಿ ಸ್ಪರ್ಧಿಸಿದ್ದ ಅವರು ಟರ್ಕಿಯ ಓಸ್ಮನ್‌ ಗೋಸೆನ್‌ ವಿರುದ್ಧ 5-3 ಅಂಕಗಳ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next