Advertisement
ಒಂದು ಬದಿಯ ಕಾಂಕ್ರೀಟ್ ಕಾಮಗಾರಿಗಳು ಈಗಾಗಲೇ ಮುಗಿದಿವೆ. ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಕಾಮಗಾರಿಗಳು ನಡೆಯದೇ ಈಗ ಪುನಃ ಆರಂಭವಾಗಿದೆ. ಇನ್ನೇನು ಮಳೆ ಆರಂಭ ವಾದಲ್ಲಿ ಮಳೆಯ ನೀರು ಹರಿದಾಡಲು ಚರಂಡಿಯೇ ಇಲ್ಲದೇ ಮನೆ, ಅಂಗಡಿಗಳಿಗೆ ಮಳೆಯ ನೀರು ನುಗ್ಗುವ ಸಾಧ್ಯತೆ ಇದೆ.
ವ್ಯಾಪಾರಕ್ಕೂ ತೊಂದರೆ ಇಲ್ಲ.
Related Articles
Advertisement
ಬಜಪೆ ಪೇಟೆಯಲ್ಲೂ ಜನ ಸಂಚಾರ ವಿರಳವಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ವೇಗ ಪಡೆಯಬೇಕು. ಅಭಿವೃದ್ಧಿಗೆ ವಿರೋಧವಿಲ್ಲ. ಅದರೆ ಕಾಮಗಾರಿ ನಿಧಾನವಾಗಿ ಮಾಡದೇ ಯಾರಿಗೂ ತೊಂದರೆಯಾಗದೇ ಗುತ್ತಿಗೆದಾರರು ನೋಡಿ ಕೊಳ್ಳಬೇಕು. ಇದಕ್ಕೆ ಸಾರ್ವಜನಿಕರ ಸಹಕಾರವೂ ಸಿಗಲಿದೆ.
ಚುನಾವಣೆ ಮುಗಿಯಿತು ಇನ್ನಾದರೂ ಕಾಮಗಾರಿಗೆ ವೇಗ ಪಡೆಯಲಿ. ಮಳೆ ಬರುವ ಮುಂಚೆ ರಸ್ತೆ ಜತೆ ಚರಂಡಿ ಕಾಮಗಾರಿಗಳು ನಡೆಯಲಿ.
ವಾಹನ ಸಂಚಾರ ನಿಷೇಧಈ ಕಾಮಗಾರಿ ಕಳೆದ ಡಿಸೆಂಬರ್‌ನಲ್ಲಿ ಆರಂಭವಾಗಿತ್ತು. ಕೆಲವು ದ್ವಿಚಕ್ರ, ಲಘು ವಾಹನಗಳು ಬಜಪೆ ಪಟ್ಟಣ ಪಂಚಾಯತ್, ಬ್ರಹ್ಮಶ್ರೀ ನಾರಾಯಣ ಗುರು ರಸ್ತೆಯಾಗಿ ಸಂಚರಿಸುತ್ತಿದ್ದು, ಇನ್ನೂ ಕೆಲವು ವಾಹನಗಳು ಬಜಪೆ ಚರ್ಚ್ ಸರ್ಕಲ್ ಆಗಿ, ಪೊಲೀಸ್ ಠಾಣೆಯಾಗಿ, ಮುರನಗರ ಹಳೆ ವಿಮಾನನಿಲ್ದಾಣ ರಸ್ತೆಯಾಗಿ ಮಂಗಳೂರಿಗೆ ಬಸ್ ಹಾಗೂ ಇತರೆ ವಾಹನಗಳು ಸಂಚರಿಸುತ್ತಿದೆ. ಬಸ್‌ಗಳು ಬದಲಿ ರಸ್ತೆಯಾಗಿ ಸಂಚರಿಸುವ ಕಾರಣ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸುಮಾರು 3 ಕಿ.ಮೀ.ದೂರವಾಗಿ ಸಂಚಾರ ಮಾಡಬೇಕಾಗಿದೆ. ಬಸ್ ಮಾಲಕರಿಗೆ ಒಂದೆಡೆ ಖರ್ಚು ಜಾಸ್ತಿ, ಪ್ರಯಾಣಿಕರಿಲ್ಲದೇ ನಷ್ಟಕ್ಕೆ ಕಾರಣವಾಗಿದೆ. ಈ ಕಾಮಗಾರಿಯನ್ನು ತುರ್ತಾಗಿ ವೇಗವಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.