Advertisement

Bajpe: ಸೋಮವಾರದ ಸಂತೆ: ಬೆಳ್ಳುಳ್ಳಿಯೇ ಮಾರುಕಟ್ಟೆಯ ರಾಜ!

05:26 PM Sep 24, 2024 | Team Udayavani |

ಬಜಪೆ: ಸೋಮವಾರದ ಬಜಪೆ ಸಂತೆಯಲ್ಲಿ ಶುಂಠಿ, ಅಲಸಂಡೆ ಸೇರಿದಂತೆ ಕೆಲವು ತರಕಾರಿಗಳು ಮತ್ತು ಮುಸುಂಬಿ ಹಣ್ಣಿನ ದರದಲ್ಲಿ ಇಳಿಕೆ ಕಂಡಿತ್ತು. ಆದರೆ ಗ್ರಾಹಕರಿಂದ ಬೇಡಿಕೆ ಅಷ್ಟಾಗಿ ಇರಲಿಲ್ಲ. ಸ್ಥಳೀಯ ಗೆಣಸು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

Advertisement

ಸೆಪ್ಟಂಬರ್‌ ಮೊದಲ ವಾರದ ತನಕ ಶುಂಠಿ ಕೆ.ಜಿ.ಗೆ 70 ರೂ. ಇತ್ತು. ಈಗ 20 ರೂಪಾಯಿ ಕಡಿಮೆಯಾಗಿ ಕೆ.ಜಿ.ಗೆ ಕೇವಲ 50 ರೂಪಾಯಿ ಎಂದು ಸಂತೆ ವ್ಯಾಪಾರಿಗಳು ಧ್ವನಿವರ್ಧಕವಿಟ್ಟು ಜನರನ್ನು ಕರೆಯುವ ದೃಶ್ಯ ಕಂಡುಬರುತ್ತಿತ್ತು. ಆದರೂ ಜನರು ಶುಂಠಿ ಖರೀದಿಗೆ ಹೆಚ್ಚು ಆಸಕ್ತಿ ತೋರಿದಂತೆ ಕಂಪುಬರಲಿಲ್ಲ

ಅಲಸಂಡೆ ಆಗಸ್ಟ್‌ ಅಂತ್ಯದಲ್ಲಿ ಕೆ.ಜಿ.ಗೆ 85 ರೂ. ಇತ್ತು. ಕಳೆದ ಒಂದು ವಾರದಿಂದ ಇಳಿಕೆ ಕಾಣುತ್ತಾ ಬಂದು ಪ್ರಸ್ತುತ ಒಂದೂವರೆ ಕೆ.ಜಿ.ಗೆ 50 ರೂಪಾಯಿ ಎಂದು ವ್ಯಾಪಾರಿಗಳು ಕೂಗಿ ಕೂಗಿ ಗ್ರಾಹಕರನ್ನು ಸೆಳೆಯುತ್ತಿದ್ದರು. ಅಂತೆಯೇ ಮುಸುಂಬಿ ಹಣ್ಣಿನ ದರದಲ್ಲಿಯೂ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಮುಸುಂಬಿ ರಾಶಿಯೇ ಕಂಡು ಬಂದಿದೆ. ಕೆ.ಜಿ.ಗೆ 50ರಿಂದ 60 ರೂ.ಗಳಿಗೆ ಮಾರಾಟವಾಗುತ್ತಿತ್ತು.

ಬೆಳ್ಳುಳ್ಳಿ ಬೆಲೆ ಮಾತ್ರ ಈಗ 400ರ ಗಡಿ ಸಮೀಪಿಸಿದೆ. ದೊಡ್ಡ ಗಾತ್ರದ ಬೆಳ್ಳುಳ್ಳಿ ಕೆ.ಜಿ.ಗೆ ಭರ್ತಿ 400 ರೂ. ಗಳಂತೆ ಬಿಕರಿಯಾಗಿದೆ. ಆದರೂ ಬೆಳ್ಳುಳ್ಳಿಯ ಲಭ್ಯತೆ ಕಡಿಮೆ ಇತ್ತು.

ಹೊಸ ನೀರುಳ್ಳಿ, ಬಟಾಟೆ ಆವಕ
ನೀರುಳ್ಳಿ ಮತ್ತು ಬಟಾಟೆಯ ಹೊಸ ಫಸಲು ಮಾರುಕಟ್ಟೆಗೆ ಈಗ ಆಗಮನವಾಗುತ್ತಿದೆ. ಹಳೆ ನೀರುಳ್ಳಿ ಮತ್ತು ಹೊಸ ನೀರುಳ್ಳಿ ಕೆ.ಜಿ.ಗೆ 10 ರೂ. ವ್ಯತ್ಯಾಸವಿದೆ. ಅಂತೆಯೇ ಹೊಸ ಹಾಗೂ ಹಳೆ ಬಟಾಟೆಗೆ 5 ರೂ. ವ್ಯತ್ಯಾಸವಿದೆ. ಊರಿನ ಗೆಣಸು ಕೂಡ ಸಂತೆಗೆ ಬಂದಿದ್ದು, ಕೆ.ಜಿ.ಗೆ 80 ರೂ.ಗಳಂತೆ ಮಾರಾಟವಾಗುತ್ತಿದೆ. ಹಿಂದೆಲ್ಲ ಗೆಣಸಿನ ಬೆಳೆಗೆ ಬಜಪೆ ಪ್ರಸಿದ್ಧ. ಟನ್‌ ಗಟ್ಟಲೆ ಗೆಣಸು ಬೆಳೆಸುತ್ತಿದ್ದ ಪರಿಸರದ ಕೃಷಿಕರು ಈ ಬಾರಿ ಕಡಿಮೆ ಗೆಣಸನ್ನು ಬೆಳೆಸಿರುವುದು ದರ ಏರಿಕೆಗೆ ಕಾರಣ. ದೀಪಾವಳಿ ಸಂದರ್ಭ ದೊಡ್ಡ ಪ್ರಮಾಣದಲ್ಲಿ ಗೆಣಸು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next