Advertisement

Farmers ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರ ಕಂಗಾಲು

11:57 PM Sep 09, 2024 | Team Udayavani |

ಮೈಸೂರು:ಕಳೆದೆರೆಡು ವರ್ಷ ಬಂಗಾರದ ಬೆಳೆಯಾಗಿದ್ದ ಶುಂಠಿ, ಪ್ರಸಕ್ತ ಸಾಲಿನಲ್ಲಿ ಬೆಲೆ ಪಾತಾಳಕ್ಕಿಳಿದಿದ್ದು, ಲಕ್ಷಾಂತರ ರೂ. ಬಂಡವಾಳ ಹಾಕಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ಹಳೇ ಮೈಸೂರು ಭಾಗ ಸೇರಿದಂತೆ ಮಲೆನಾಡಿನಲ್ಲಿ ಹೆಚ್ಚು ಬೆಳೆಯುವ ಶುಂಠಿಗೆ ವರ್ಷದ ಆರಂಭದಲ್ಲಿ ಉತ್ತಮ ಬೆಲೆ ಇದ್ದರೂ, ನಿರೀಕ್ಷೆಗೂ ಮೀರಿದ ಬಿತ್ತನೆ ಪರಿಣಾಮ ಬೆಲೆ ಇಳಿಕೆಯಾಗಿದೆ. ಇತ್ತ ಅತಿಯಾದ ಮಳೆಯಿಂದ ಇಳುವರಿಯೂ ಕುಂಠಿತವಾಗಿದೆ. ಅಲ್ಲದೇ ಶುಂಠಿ ಬೆಳೆಗೆ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದ ರೈತರು ನಷ್ಟ ಅನುಭವಿಸುವಂತಾಗಿದೆ.

ಐದು ತಿಂಗಳ ಹಿಂದೆಯಷ್ಟೇ 60 ಕೆ.ಜಿ. ಬ್ಯಾಗ್‌ವೊಂದಕ್ಕೆ 5ರಿಂದ 6 ಸಾವಿರ ರೂ. ಮಾರಾಟವಾಗಿದ್ದ ಶುಂಠಿ, ಪ್ರಸ್ತುತ 950ರಿಂದ 1500 ರೂ. ವರೆಗೆ ಮಾರಾಟವಾಗುತ್ತಿದೆ. ಜುಲೈನಲ್ಲಿ ಕೆ.ಜಿ. ಶುಂಠಿಗೆ 400 ರೂ. ಇದ್ದ ಬೆಲೆ, ಪ್ರಸ್ತುತ 25ರಿಂದ 30 ರೂ.ಗೆ ಇಳಿಕೆಯಾಗಿದ್ದರಿಂದ ಬೆಳೆಗಾರರಿಗೆ ಹೂಡಿಕೆ ಮಾಡಿದ್ದ ಬಂಡವಾಳವೂ ವಾಪಸ್‌ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 2023ರಲ್ಲಿ 60 ಕೆ.ಜಿ. ಬ್ಯಾಗ್‌ 8ರಿಂದ 14 ಸಾವಿರ ರೂ.ವರೆಗೆ ಹಳೇ ಶುಂಠಿ ಮಾರಾಟವಾಗಿದ್ದರೆ, 6ರಿಂದ 8 ಸಾವಿರದ ವರೆಗೆ ಹೊಸ ಶುಂಠಿ ಮಾರಾಟವಾಗಿತ್ತು. ಶುಂಠಿ ಬೆಲೆ ದಿಢೀರ್‌ ಕುಸಿತದಿಂದಾಗಿ ಬಿತ್ತನೆ ಮಾಡಿದವರಿಗೆ ಹೂಡಿಕೆಯ ಬಂಡವಾಳವೂ ಇಲ್ಲದಂತಾಗಿದೆ. ದರ ಏರುವ ನಿರೀಕ್ಷೆಯಲ್ಲಿರುವ ರೈತರಿಗೆ ಮಳೆ ಆತಂಕ ಮೂಡಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next